For Quick Alerts
  ALLOW NOTIFICATIONS  
  For Daily Alerts

  ನಟಿ ನಯನತಾರಾ ಮೇಲೆ ವಾಮಾಚಾರ ಪ್ರಯೋಗ?

  By ರವಿಕಿಶೋರ್
  |

  ಜಗತ್ತು ಸೈಬರ್ ಯುಗಕ್ಕೆ ಅಡಿಯಿಟ್ಟಿದ್ದರೂ ಇತ್ತೀಚಿನ ದಿನಗಳಲ್ಲಿ ವಾಮಾಚಾರ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಪತ್ತೆಯಾಗುತ್ತಲೇ ಇವೆ. ಇಂದಿಗೂ ವಾಮಾಚಾರದ ಬಗ್ಗೆ ಪ್ರಪಂಚದ ಎಲ್ಲಾ ಭಾಗಗಳ ಜನರಲ್ಲಿ ಭಯ,ಕುತೂಹಲ, ಆತಂಕಗಳನ್ನು ಕಾಣಬಹುದಾಗಿದೆ.

  ದಕ್ಷಿಣದ ಬೆಡಗಿ ನಯನತಾರಾ ಮೇಲೂ ವಾಮಾಚಾರ ಪ್ರಯೋಗವಾಗಿದೆ ಎಂಬ ಸುದ್ದಿ ಕಳೆದ ಕೆಲದಿನಗಳಿಂದ ಹರಿದಾಡುತ್ತಿದೆ. ಅವರ ಚರ್ಮದ ಮೇಲೆ ಇದ್ದಕ್ಕಿದ್ದಂತೆ ದದ್ದುಗಳು ಬರುವುದು, ಬೆಂದ ಗಾಯಗಳ ಮಾದರಿಯಲ್ಲಿ ಕಂಡುಬರುತ್ತಿರುವುದು ಆಗುತ್ತಿದೆಯಂತೆ.

  ಇದೆಲ್ಲಾ ಯಾರೋ ಮಾಡಿಸಿದ ಮಾಟ ಮಂತ್ರದ ಫಲ ಎಂದು ಕಾಲಿವುಡ್ ಚಿತ್ರರಂಗದಲ್ಲಿ ಮಾತಾನಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಯನತಾರಾ ಅವರು ತಮ್ಮ ಮೇಲೆ ಪ್ರಯೋಗಿಸಿರುವ ಕ್ಷುದ್ರ ಶಕ್ತಿಗಳ ಬಿಡುಗಡೆಯಾಗಿ ಕೇರಳದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂಬುದು ಇನ್ನೊಂದು ಮಜವಾದ ಗಾಸಿಪ್.

  ಅಲ್ಲಿಂದ ಬಂದ ಮೇಲೂ ಇನ್ನೂ ಅವರ ಕಾಯಿಲೆ ವಾಸಿಯಾಗಿಲ್ಲವಂತೆ. ಇದರಿಂದ ಅವರಿಗೆ ಮೇಕಪ್ ಮಾಡುವ ಕಲಾವಿದರು ತುಂಬಾ ಪರದಾಡುವಂತಾಗಿದೆ. ಇಷ್ಟಕ್ಕೂ ನಯನತಾರಾ ಮೇಲೆ ಯಾರಾದರೂ ಕೆಡುಕು ಮಾಡಿದ್ದಾರಾ ಅಂದರೆ?

  ನಯನತಾರಾ ಅವರಂತೂ ಬಿದ್ದೂ ಬಿದ್ದೂ ನಗ್ತಾರಂತೆ. ಬಹುಶಃ ಅಲರ್ಜಿ ಕಾರಣ ಅವರಿಗೆ ಹೀಗಾಗಿರುವ ಸಾಧ್ಯತೆ ಇದೆಯಂತೆ. ಇದಕ್ಕಾಗಿ ಆಂಟಿಬಯೋಟಿಕ್ಸ್ ತಗೊಂಡಿದ್ದೀನಿ. ವಾಮಾಚಾರ, ವಶೀಕರಣ, ಮಾಟ ಮಂತ್ರ, ನಿಂಬೆಕಾಯಿ ಬದನೆಕಾಯಿ ಎಲ್ಲಾ ಸುಳ್ಳು ಎಂದಿದ್ದಾರೆ.

  ಅಂದಹಾಗೆ ಈ ವಾಮಾಚಾರದ ಬಗ್ಗೆ ಒಂದೆರಡು ಮಾತು, ಕ್ಷುದ್ರ ಶಕ್ತಿಗಳನ್ನು ಆಹ್ವಾನಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು ಎಂದು ಭಾವಿಸಿರುವ ಅತಿ ಪುರಾತನ ವಿದ್ಯೆ ಇದು. ಅಥರ್ವವೇದದಲ್ಲಿ ವಾಮಾಚಾರದ ಬಗ್ಗೆ ಆಳವಾಗಿ ವಿವರಿಸಲಾಗಿದೆ.

  English summary
  There is a talk making rounds that Nayantara is suffering from some mysterious skin related ailment and suddenly she gets boils and rashes all over her body. The gossips began to make rounds that maybe someone has done some black magic on Nayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X