»   » ಬಾತ್ ರೂಮಿನಲ್ಲಿ ತಾರೆಗಳ ಚೆಲುವಿನ ಚಿಲಿಪಿಲಿ

ಬಾತ್ ರೂಮಿನಲ್ಲಿ ತಾರೆಗಳ ಚೆಲುವಿನ ಚಿಲಿಪಿಲಿ

By: ರವಿಕಿಶೋರ್
Subscribe to Filmibeat Kannada

ಬಹುತೇಕ ತಾರೆಗಳ ಸೌಂದರ್ಯ ಸಾಬೂನು ಲಕ್ಸ್. ಇನ್ನೂ ಕೆಲವರು ಸಂತೂರು, ಲೈಫ್ ಬಾಯ್ ಸೋಪಿನಲ್ಲೇ ಪಾವನರಾಗುತ್ತಾರೆ. ಒಟ್ಟಿನಲ್ಲಿ ಯಾವುದೋ ಒಂದು ಸೊಪು ಹಾಕಿ ಮೈತೊಳೆದುಕೊಳ್ಳಲೇಬೇಕು.

ಇಷ್ಟೆಲ್ಲಾ ಹೇಳಲು ಕಾರಣ ಸಿನಿಮಾಗಳಲ್ಲಿ ಐಟಂ ಹಾಡಿಗೆ ಇರುವಷ್ಟೇ ಬೇಡಿಕೆ ಈ ಬಾಬ್ ರೂಮು ಸೀನ್ ಗಳಿಗೂ ಇದೆ. ಹೀರೋಯಿನ್ ಸ್ನಾನ ಮಾಡುತ್ತಿರುವುದು, ಇದ್ದಕ್ಕಿದ್ದಂತೆ ಹೀರೋ ಎಂಟ್ರಿಯಾಗುವುದು. ಅಯ್ಯೋ ನಾನೇನು ನೋಡ್ಲಿಲ್ಲ ಎನ್ನುವ ಸೀನ್ ಗಳು ಬಾಲಿವುಡ್ ನಿಂದ ಕನ್ಯಾಕುಮಾರಿವರೆಗೂ ಹಬ್ಬಿವೆ.

ಇನ್ನೂ ಕೆಲವು ಸನ್ನಿವೇಶಗಳಲ್ಲಿ ಹೀರೋಯಿನ್ ಸ್ನಾನ ಮಾಡಿಕೊಳ್ಳುತ್ತಿರುತ್ತಾಳೆ. ಹೀರೋ ಆದವ ಆಕೆಯ ತಾಯಿ ಧ್ವನಿಯಲ್ಲಿ ಬಾತ್ ರೂಮಿಗೆ ಎಂಟ್ರಿ ಕೊಡುತ್ತಾನೆ. ಅಲ್ಲಿ ಒಂದಷ್ಟು ಕೆಲಸಕ್ಕೆ ಬಾರದ ಡೈಲಾಗ್ ಗಳಿರುತ್ತವೆ. ಆದರೆ ಪ್ರೇಕ್ಷಕರ ಕಣ್ಣೆಲ್ಲಾ ಹೀರೋಯಿನ್ ಮೇಲೆ ನೆಟ್ಟಿರುತ್ತದೆ. ಅಲ್ಲಿಗೆ ಆ ಸೀನ್ ಕಟ್ ಆಗುತ್ತದೆ.

ಇನ್ನೂ ಕೆಲವು ಸನ್ನಿವೇಶಗಳಲ್ಲಿ ಹೀರೋಯಿನ್ ಸ್ನಾನದ ಮನೆಯಿಂದ ಟವಲ್ ಸುತ್ತಿಕೊಂಡು ಬರುತ್ತಾಳೆ. ಅದೇ ಸಮಯಕ್ಕೆ ಹೀರೋ ಎಂಟ್ರಿಯಾಗುತ್ತದೆ. ಇನ್ನೇನು ಮಾತನಾಡಬೇಕು ಎನ್ನುವಷ್ಟರಲ್ಲಿ ಟವಲ್ ಜಾರಿ ಕೆಳಗೆ ಬೀಳುತ್ತದೆ. ಹೀರೋ ಆಕಡೆಗೆ ಮುಖ ಮಾಡಿಕೊಳ್ಳುತ್ತಾನೆ.

ಒಟ್ಟಿನಲ್ಲಿ ಈ ಬಾತ್ ರೂಮು ಸೀನನ್ನು ಬಳಸಿಕೊಳ್ಳುವ ಜಾಣ್ಮೆ ನಿರ್ದೇಶಕನ ಕೈಯಲ್ಲೇ ಇರುತ್ತದೆ. ಇಲ್ಲ ಅಂದರೆ ಎಂಥಹ ರಸಮಯ ಸನ್ನಿವೇಶಗಳು ನೀರಸವಾಗುತ್ತದೆ. ಕಾಲಬದಲಾದರೂ ಬಾತ್ ರೂಮು ಸೀನುಗಳು ಇನ್ನೂ ಅವಸಾನವಾಗಿಲ್ಲ. ಇಲ್ಲಿರುವ ಚಿತ್ರಗಳು ಸಿನಿಮಾ ಸನ್ನಿವೇಶಕ್ಕಾಗಿ ತೆಗೆದವು ಎಂಬುದು ನಿಮ್ಮ ಗಮನಕ್ಕಿರಲಿ.

ಸಂತೂರ್ ಗರ್ಲ್ ಜೆನಿಲಿಯಾ ಡಿಸೋಜಾ

ಈ ಬಾಲಿವುಡ್ ಬ್ಯೂಟಿ ಅದ್ಯಾವ ಸೋಪು ಬಳಸುತ್ತಾರೋ ಏನೋ ಗೊತ್ತಿಲ್ಲ. ಆಕೆಯ ಸೌಂದರ್ಯದ ಹಾಗೂ ಯೌವನದ ಗುಟ್ಟು ಬಹುಶಃ ಸಂತೂರ್ ಸೋಪ್ ಇರಬೇಕು. ಕನ್ನಡದ ಸತ್ಯ ಇನ್ ಲವ್ ಚಿತ್ರದಲ್ಲಿ ಶಿವಣ್ಣ ಜೊತೆ ಅಭಿನಯಿಸಿದ್ದ ತಾರೆ ಮದುವೆಯಾಗಿದ್ದರೂ ಇನ್ನೂ ಆಕರ್ಷಣೆ ಮಾತ್ರ ಕುಂದಿಲ್ಲ.

ಹಾಟ್ ಸನ್ನಿವೇಶಗಳಿಗೆ ತುಡಿಯುವ ಬೆಡಗಿ

ಹಾಟ್ ಸನ್ನಿವೇಶಗಳಿಗೆ ಸದಾ ತುಡಿಯುವ ಬೆಡಗಿ ಕಂಗನಾ ರನೌತ್. ಇನ್ನು ಬಾತ್ ರೂಮು ದೃಶ್ಯಗಳೆಂದರೆ ಕೇಳಬೇಕೆ. ಗ್ಯಾಂಗ್‌ಸ್ಟರ್ ಹಾಗೂ ಫ್ಯಾಷನ್ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತನ್ನದೇ ಬೌಂಡರಿ ಲೌನ್ ಎಳೆದ ತಾರೆ.

ಬಟ್ಟೆ ಕಳಚುವುದರಲ್ಲಿ ಎಕ್ಸ್ ಪರ್ಟ್ ನಟಿ

ಪೂನಂ ಪಾಂಡೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬಟ್ಟೆ ಬಿಚ್ಚುವುದರಲ್ಲಿ ಎಕ್ಸ್ ಪರ್ಟ್ ಕಲಾವಿದೆ. ಬಾಲಿವುಡ್ ಎಲ್ಲಾ ಹುಡುಕಿದರೂ ಪೂನಂ ಪಾಂಡೆಗೆ ಸರಿಸಾಟಿಯಾಗಿ ಯಾರು ನಿಲ್ಲುವುದಿಲ್ಲ. ಇನ್ನು ಬಾತ್ ರೂಮು ಯಾವ ಲೆಕ್ಕ.

ನೈಜ ಹಾಗೂ ಸೂಕ್ಷ್ಮ ಮನಸ್ಸಿನ ತಾರೆ

ಈಕೆ ಹೆಸರಿಗೆ ತಕ್ಕಂತೆ ಚಿತ್ರಾಂಗದೆ. ತಾನು ಬೋಲ್ಡ್ ನಟಿಯಲ್ಲಾ ಎನ್ನುತ್ತಲೇ ಪ್ರೇಕ್ಷಕರನ್ನು ಬೋಲ್ಡ್ ಮಾಡುತ್ತಿರುವ ತಾರೆ ಚಿತ್ರಾಂಗದಾ ಸಿಂಗ್. ತಾನೊಬ್ಬ ನೈಜ ಹಾಗೂ ಸೂಕ್ಷ್ಮ ಮನಸ್ಸಿನ ನಟಿ ಎಂದಿದ್ದರು ಸಿಂಗ್.

ಬಾತ್ ರೂಮ್ ಗು ಸೈ ಬೆಡ್ ರೂಮ್ ಗೂ ಜೈ

ಟಾಪ್ ಲೆಸ್ ನಲ್ಲಿ ಈಗಾಗಲೆ ಹಲವಾರು ನಿಯತಕಾಲಿಕೆಗಳಿಗೆ ಪೋಸು ನೀಡಿರುವ ಬಿಪಾಶಾ ಬಸು ಟೂ ಪೀಸ್ ನಲ್ಲೂ ಮಿಂಚಿದ್ದಾರೆ. ಬಾತ್ ರೂಮಿಗೂ ಸೈ, ಬೆಡ್ ರೂಮು ಸನ್ನಿವೇಶಕ್ಕೂ ಸೈ ಎನ್ನುವ ತಾರೆ.

ಇಶಾ ಕೊಪ್ಪಿಕರ್ ಜನಕ್ರೀಡೆ

ಹೆಚ್ಚಾಗಿ ಸೀರೆಗಳಲ್ಲೇ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದ ತಾರೆ ಇಶಾ ಕೊಪ್ಪಿಕರ್. ಕನ್ನಡದ ಸೂರ್ಯವಂಶ, ಓ ನನ್ನ ನಲ್ಲೆ ಚಿತ್ರಗಳಲ್ಲಿ ನಾಜೂಕಾಗಿ ಕಾಣಿಸಿಕೊಂಡ ಈ ಹುಡುಗಿ ಬೆಚ್ಚಿ ಬೀಳಿಸಿದ್ದು ರಾಮ್‌ಗೋಪಾಲ್‌ ವರ್ಮಾನ ‘ಕಂಪೆನಿ' ಹಿಂದಿ ಚಿತ್ರದಲ್ಲಿ. ತುಂಡುಡುಗೆಯಲ್ಲಿ ಕುಣಿದು ಪಡ್ಡೆಗಳ ರಮಿಸಿದ್ದಾರೆ.

English summary
Bollywood beauties in bathtub. Bollywood beauties and their bathtub act has always been the talk of the town. Here are some pics of Bollywood Beauties in Bathtub.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada