For Quick Alerts
ALLOW NOTIFICATIONS  
For Daily Alerts

  ಯಾವ ನಟಿಯ ಯಾವ ಅಂಗಕ್ಕೆ ಸರ್ಜರಿ ಗೊತ್ತಾ?

  By ಉದಯರವಿ
  |

  ಬೆಳ್ಳಿತೆರೆಯ ಮೇಲೆ ತಮ್ಮದೇ ಆದಂತಹ ಛಾಪು ಮೂಡಿಸಲು ಸಿನಿಮಾ ನಟಿಯರು ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಆದರೆ ತಮ್ಮ ಅಂದಚೆಂದ, ವೈಯಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಕಾಸ್ಮೆಟಿಕ್ ಸರ್ಜರಿಗಳಿಗೆ ಮೊರೆ ಹೋಗುತ್ತಾರೆ. ಬನ್ನಿ ಯಾವ ನಟಿ ಯಾವ ಭಾಗಕ್ಕೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಒಮ್ಮೆ ನೋಡೋಣ.

  ನಮ್ಮ ದೇಶದಲ್ಲಿ ಬಾಲಿವುಡ್ ಚಿತ್ರಗಳಿಗೆ ಅತಿದೊಡ್ಡ ಮಾರುಕಟ್ಟೆ ಇದೆ. ಇದಕ್ಕೆ ತಕ್ಕಂತೆ ಸಿನಿಮಾ ತಾರೆಗಳು ಕಾಸ್ಮೆಟಿಕ್ ಸರ್ಜರಿಗಾಗಿ ಲಕ್ಷಗಟ್ಟಲೆ ಹಣ ಸುರಿಯುತ್ತಾರೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಚಲಾವಣೆಯಲ್ಲಿರುವ ಬಹುತೇಕ ಹಾಟ್ ತಾರೆಗಳೆಲ್ಲಾ ಒಂದಲ್ಲ ಒಂದು ಕಾಸ್ಮೆಟಿಕ್ ಸರ್ಜರಿಗೆ ಒಳಗಾದವರೆ.

  ಕೆಲವರು ಮೂಗಿಗೆ, ಕೆಲವರು ತುಟಿಗೆ ಸರ್ಜರಿ ಮಾಡಿಸಿಕೊಂಡರೆ, ಇನ್ನೂ ಕೆಲವರು ನಾಲ್ಕೆದು ಹೆಜ್ಜೆ ಮುಂದಿಟ್ಟು ತಮ್ಮ ವಕ್ಷೋಜಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಮೊರೆಹೋಗಿದ್ದಾರೆ. ಯಾವ ನಟಿ ಎಲ್ಲಿ ಸರ್ಜರಿ ಮಾಡಿಕೊಂಡಿದ್ದಾರೆ ಎಂಬುದನ್ನು ಸ್ಲೈಡುಗಳಲ್ಲಿ ನೋಡಿ.

  ವಕ್ಷೋಜಗಳ ಗಾತ್ರ ಹೆಚ್ಚಿಸಿಕೊಂಡ ಬಿಪಾಶಾ

  ಬಾಲಿವುಡ್ ಚಿತ್ರರಂಗಕ್ಕೆ ಬಿಪಾಶಾ ಬಸು ಅಡಿಯಿಟ್ಟಾಗಿನ ಆಕೆಯ ಎದೆಭಾಗದ ಚಿತ್ರಣಕ್ಕೂ ಈಗಿನ ನೋಟಕ್ಕೂ ಬಹಳ ವ್ಯತ್ಯಾಸವಿದೆ. ಈ ಮಾರ್ಪಾಡನ್ನು ಚಿತ್ರದಲ್ಲಿ ನೀವು ಕಾಣಬಹುದು. ಹೌದು ಬಿಪಾಶಾ ಬಸು ಬ್ರೆಸ್ಟ್ ಸರ್ಜರಿ ಮಾಡಿಸಿಕೊಂಡು ಬಾಲಿವುಡ್ ನಲ್ಲಿ ಎದೆಯುಬ್ಬಿಸಿ ನಡೆಯುವಂತಾಗಿದೆ.

  ಗಜನಿಂಬೆಹಣ್ಣಿನಂತಾದ ಎಳೆನಿಂಬೆ ಮಲ್ಲಿಕಾ

  ಬಣ್ಣದ ಜಗತ್ತಿಗೆ ಮಲ್ಲಿಕಾ ಶೆರಾವತ್ ಅಂಬೆಗಾಲಿಟ್ಟಾಗ ಆಕೆ ಎಳೆನಿಂಬೆ ಹಣ್ಣಿನಂತಿದ್ದರು. ಬಳಿಕ ಆಕೆ ಬ್ರೆಸ್ಟ್ ಇಂಪ್ಲಾಂಟ್ ಮಾಡಿಸಿಕೊಂಡು ಗಜನಿಂಬೆಯಂತಾದರು. ಚಿತ್ರಗಳಲ್ಲಿ ಅಂದು ಇಂದಿನ ಬದಲಾವಣೆಯನ್ನು ಕಾಣಬಹುದು.

  ರಾಖಿ ಸಾವಂತ್ ಏನೂ ಕಮ್ಮಿ ಬಿಡಿ

  ಬಹುಶಃ ರಾಖಿ ಸಾವಂತ್ ಅವರನ್ನು ನೋಡಿದರೆ ಈಕೆ ಮಾಡಿಸಿಕೊಳ್ಳದ ಕಾಸ್ಮೆಟಿಕ್ ಸರ್ಜರಿ ಇಲ್ಲವೇನು ಎಂಬ ಅನುಮಾನ ಬರುತ್ತದೆ. ಐಟಂ ಗರ್ಲ್ ರಾಖಿ ಸೆಕ್ಸಿ ಇಮೇಜ್ ಗಾಗಿ ಬ್ರೆಸ್ಟ್ ಇಂಪ್ಲಾಂಟ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

  ಪೋಲಿ ಪೂನಂ ಪಾಂಡೆಗೂ ಆಗಿದೆ ಸರ್ಜರಿ

  ಪೋಲಿ ಚಿತ್ರಗಳ ಮೂಲಕ ಪಡ್ಡೆಗಳ ಹೃದಯಕ್ಕೆ ಗೋಲಿ ಹೊಡೆಯುತ್ತಿರುವ ಪೂನಂ ಪಾಂಡೆ ಕೂಡ ಒಂದು ಕಾಲದಲ್ಲಿ ಬಣಬಣ ಎನ್ನುತ್ತಿದ್ದರು. ಈಗವರು ಮಿಣಮಿಣ ಎನ್ನುವಂತಾಗಲು ಸಿಲಿಕಾನ್ ಬ್ರೆಸ್ಟ್ ಹೆನಾನ್ಸ್ ಮೆಂಟ್ ಮಾಡಿಸಿಕೊಂಡಿರುವುದೇ ಕಾರಣ.

  ಮಾಜಿ ಭುವನ ಸುಂದರಿ ಸುಸ್ಮಿತಾ ಕಥೆನೂ ಅದೇ

  ಮಾಜಿ ಭುವನ ಸುಂದರಿ ಪಟ್ಟ ಅಲಂಕರಿಸಿದಾಗ ಸುಸ್ಮಿತಾ ಸೇನ್ ನೋಡಲು ಅಷ್ಟೇನು ಆಕರ್ಷಕವಾಗಿ ಕಾಣುತ್ತಿರಲಿಲ್ಲ. ಬಾಲಿವುಡ್ ಚಿತ್ರರಂಗಕ್ಕೆ ಬಂದ ಮೇಲೆ ಆಕೆ ಹಾಟ್ ಆಗಿ ಕಾಣಿಸಲು ಬ್ರೆಸ್ಟ್ ಇಂಪ್ಲಾಂಟ್ ಮಾಡಿಸಿಕೊಂಡರು.

  ಕತ್ರಿನಾ ಕೈಫ್ ಅವರದು ಭಿನ್ನ ಕಥೆ

  ಸ್ಲೈಸ್ ಜಾಹೀರಾತಿನಲ್ಲಿ ಕತ್ರಿನಾ ಅವರ ಶೃಂಗಾರಭರಿತ ತುಟಿಗಳನ್ನು ನೋಡುತ್ತಿದ್ದರೆ ಎಂತಹವರೂ ಕ್ಷಣಕಾಲ ಕಂಗಾಲಾಗುತ್ತಾರೆ. ಆಕೆಯ ತುಟಿಗಳ ಹಿಂದಿನ ರಹಸ್ಯ ಏನೆಂದರೆ ಕತ್ರಿನಾ ಅವರು ಲಿಪೋಸಕ್ಸನ್ ಸರ್ಜರಿ ಮಾಡಿಸಿಕೊಂಡಿರುವುದು, ಅರ್ಥಾತ್ ತುಟಿ ಸುರೂಪ ಚಿಕಿತ್ಸೆ.

  ಪ್ರಿಯಾಂಕಾ ಚೋಪ್ರಾ ಮೂಗಿನ ರಹಸ್ಯ

  ತಾರೆ ಪ್ರಿಯಾಂಕಾ ಚೋಪ್ರಾ ಅವರ ಸಂಪಿಗೆ ಮೂಗಿನ ರಹಸ್ಯಕ್ಕೆ ಕಾರಣ ಕಾಸ್ಮೆಟಿಕ್ ಸರ್ಜರಿ. ಬೋಂಡ ಮೆಣಸಿನಕಾಯಿ ತರಹ ಇದ್ದ ಮೂಗನ್ನು ಸುರೂಪ ಚಿಕಿತ್ಸೆ ಮೂಲಕ ಸಂಪಿಗೆ ಆಕಾರಕ್ಕೆ ಬದಲಾಯಿಸಿಕೊಂಡರು.

  ರಾಣಿಗೂ ಆಗಿದೆ ಕಾಸ್ಮೆಟಿಕ್ ಸರ್ಜರಿ

  ಬಂಟಿ ಔರ್ ಬಬ್ಲಿ, ಬ್ಲ್ಯಾಕ್ ನಂತಹ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ ತಾರೆ ರಾಣಿ ಮುಖರ್ಜಿ. ಆದರೆ ಈಕೆಯ ಮೂಗು ಕಾಸ್ಮೆಟಿಕ್ ಸರ್ಜರಿ ಮೂಲಕ ಮಾರ್ಪಾಟಾಗಿದೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.

  ತಾರೆ ಶಿಲ್ಪಾ ಶೆಟ್ಟಿ ಸೌಂದರ್ಯ ರಹಸ್ಯ

  ಬಿಗ್ ಬ್ರದರ್ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ತಾರೆ ಶಿಲ್ಪಾ ಶೆಟ್ಟಿ ಕೂಡ ಸರ್ಜರಿಗೆ ಒಳಗಾದವರು. ಅವರು ಮೂಗಿಗೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಬದಲಾವಣೆಗಳನ್ನು ಫೋಟೋದಲ್ಲಿ ಕಾಣಬಹುದು.

  ತಾರೆ ಐಶ್ವರ್ಯಾ ರೈಗೆ ಎಲ್ಲಿ ಸರ್ಜರಿ

  ಮಾಜಿ ವಿಶ್ವಸುಂದರಿಗೂ ಸುರೂಪ ಚಿಕಿತ್ಸೆ ಆಗಿದೆಯಾ ಎಂದು ಹುಬ್ಬೇರಿಸುವವರೇ ಹೆಚ್ಚು. ಆಕೆಯ ಮೂಗು ಅಷ್ಟೇನು ಆಕರ್ಷಕವಾಗಿ ಇರಲಿಲ್ಲ. ಸುರೂಪ ಶಸ್ತ್ರಚಿಕಿತ್ಸೆ ಬಳಿಕ ಆಕೆಯ ಮುಖಾರವಿಂದವೇ ಬದಲಾಯಿತು.

  ಕರೀನಾ ಕಪೂರ್ ಮೂಗಿನ ಕಥೆಯೂ ಅಷ್ಟೇ

  ಕರೀನಾ ಕಪೂರ್ ಅವರ ಬಳುಕುವ ಬಳ್ಳಿಯಂತಹ ಸೊಂಟ, ಕತ್ತಿಯಂಚಿನಂತಹ ಕಣ್ಣಿನ ನೋಟ ನೋಡಿದರೆ ಎಲ್ಲೆಲ್ಲಿ ಸರ್ಜರಿ ಮಾಡಿಸಿಕೊಂಡಿರಬಹುದು ಎಂಬ ಅನುಮಾನ ಬರುತ್ತದೆ. ಆಕೆಯ ಮೂಗಿಗೆ ಸುರೂಪ ಚಿಕಿತ್ಸೆ ಆಗಿದೆ.

  ಕಂಗನಾ ರನೌತ್ ತೊಂಡೆ ತುಟಿಗಳು

  ತಾರೆ ಕಂಗನಾ ರನೌತ್ ತೊಂಡೆ ತುಟಿಗಳನ್ನು ನೋಡುತ್ತಿದ್ದರೆ... ಸೃಷ್ಟಿಕರ್ತ ಬ್ರಹ್ಮ ಈಕೆಯ ತುಟಿಗಳಿಗೆ ಹೆಚ್ಚು ಸಮಯ ವ್ಯಯಿಸಿದ್ದಾನೇನೋ ಅನ್ನಿಸುತ್ತದೆ. ಆದರೆ ಸುರೂಪ ಚಿಕಿತ್ಸಕರು ಅದಕ್ಕಿಂತಲೂ ಹೆಚ್ಚಿನ ಸಮಯ ವ್ಯಯಿಸಿ ಆಕೆಯ ರಂಗುರಂಗಿನ ತುಟಿಗಳಿಗೆ ಹೊಸ ಆಕಾರ ನೀಡಿದ್ದಾರೆ.

  English summary
  Here are some of the Bollywood beauties (Katrina Kaif, Poonam Pandey, Rakhi Sawant, Priyanka Chopra), whose lives have changed after these cosmetic surgeries. Surgeries are life transforming for our Heroines.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more