»   » ತಾರೆಗಳ ಅನೈತಿಕ ಸಂಬಂಧಗಳು, ಫೋಟೋ ಸಮೇತ

ತಾರೆಗಳ ಅನೈತಿಕ ಸಂಬಂಧಗಳು, ಫೋಟೋ ಸಮೇತ

By: ಉದಯರವಿ
Subscribe to Filmibeat Kannada

ಕೆಲವು ತಾರೆಗಳಿಗೆ ಮದುವೆಯಾಗಿದ್ದರೂ ಕದ್ದುಮುಚ್ಚಿ ಟಪಾಂಗುಚಿ ಆಡೋದರಲ್ಲಿ ಎತ್ತಿದ ಕೈ. ಅಂತಹ ಕೆಲವು ತಾರೆಗಳ ಅನೈತಿಕ ಸಂಬಂಧಗಳ ಬಗ್ಗೆ ಒಂದು ಸಣ್ಣ ಇಣುಕುನೋಟ ಇಲ್ಲಿದೆ. ಅಂದಹಾಗೆ ಇದು ಬಾಲಿವುಡ್ ತಾರೆಗಳ ಗರ್ ವಾಲಿ ಬಾಹರ್ ವಾಲಿಗೆ ಸಂಬಂಧಿಸಿದ ಸಮಾಚಾರ.

ಪ್ರೇಮಕ್ಕೆ ಕಣ್ಣಿಲ್ಲ, ಕಾಮಕ್ಕೆ ಕಣ್ಣು ಕಿವಿ ಮೂಗು ಬಾಯಿ ಏನೂ ಇಲ್ಲ ಎಂಬ ಮಾತೊಂದಿದೆ. ಅದಕ್ಕೆ ತಕ್ಕಂತೆ ಈ ತಾರೆಗಳು ಬಹುಪತ್ನಿ ವಲ್ಲಭರು. ನಲವತ್ತರ ದಶಕದಿಂದ ಹಿಡಿದು ಇಂದಿನ ಜಮಾನಾ ತನಕ ಕೆಲವು ತಾರೆಗಳು ಮದುವೆಯಾಗಿದ್ದರೂ ಇನ್ನೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ.

ನರ್ಗೀಸ್ ಮತ್ತು ರಾಜ್ ಕಪೂರ್ ಪ್ರೇಮ್ ಕಹಾನಿ

ಪ್ಯಾರ್ ಹುವಾ ಇಕಾರ್ ಹುವಾ ಹೈ...ಎಂದು ಇಬ್ಬರೂ ಮಳೆಯಲ್ಲಿ ನೆಂದು ಹಾಡುತ್ತಿದ್ದರೆ ಪ್ರೇಕ್ಷಕರು ಮೈಮರೆತು ಭಾವಲಹರಿಯಲ್ಲಿ ತೇಲುತ್ತಿರುತ್ತಾರೆ. ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ನೆನೆದುಕೊಂಡು ಬಾಲಿವುಡ್ ಈಗಲೂ ಪುಳಕವಾಗುತ್ತದೆ. ಕೃಷ್ಣ ಕಪೂರ್ ಅವರನ್ನು ರಾಜ್ ವರಿಸಿದರೂ ನರ್ಗೀಸ್ ಬಗ್ಗೆ ಇನ್ನಿಲ್ಲದ ವ್ಯಾಮೋಹವಿಟ್ಟುಕೊಂಡಿದ್ದರು. ಇವರಿಬ್ಬರೂ 16ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮದರ್ ಇಂಡಿಯಾ' ಚಿತ್ರದಲ್ಲಿ ಇವರಿಬ್ಬರ ನಡುವಿನ ಪ್ರೇಮಾಗ್ನಿ ಭುಗಿಲೆದ್ದು ಮದುವೆ ಮೂಲಕ ತಣ್ಣಗಾಯಿತು.

ಶ್ರೀದೇವಿ, ಮಿಥುನ್ ಚಕ್ರವರ್ತಿ, ಬೋನಿ ಕಪೂರ್

ಐಯಾಮೆ ಡಿಸ್ಕೋ ಡ್ಯಾನ್ಸರ್ ಎಂದು ಹಾಡಿದ ಮಿಥುನ್ ಚಕ್ರವರ್ತಿ ಹಾಗೂ ಶ್ರೀದೇವಿ ನಡುವೆ ಗುಟ್ಟಾಗಿ ಪ್ರೇಮ ವ್ಯವಹಾರ ನಡೆಯುತ್ತಿತ್ತು ಎಂಬುದನ್ನು ಬಾಲಿವುಡ್ ಮಂದಿ ಈಗಲೂ ನೆನಪಿಸಿಕೊಳ್ಳುತ್ತಾರೆ. 'ಜಾನ್ ಉಠಾ ಇನ್ಸಾನ್' ಚಿತ್ರೀಕರಣದ ವೇಳೆಯೇ ಇವರಿಬ್ಬರಲ್ಲಿ ಪ್ರೇಮ ಚಿಗುರೊಡೆದಿತ್ತು. ಇಬರಿಬ್ಬರೂ ಗುಟ್ಟಾಗಿ ಮದುವೆಯೂ ಆಗಿದ್ದರು ಎನ್ನುತ್ತಾರೆ ಕಣ್ಣಾರೆ ಕಂಡವರು. ಆಗ ಯೋಗಿತಾ ಬಾಲಿ ಅವರೊಂದಿಗೆ ಮಿಥುನ್ ಗೆ ಮದುವೆಯಾಗಿತ್ತು. ಇವರಿಬ್ಬರ ನಡುವಿನ ಸಂಬಂಧ ಬಾಲಿಗೆ ಗೊತ್ತಾಗುತ್ತಿದ್ದಂತೆ ಆಕೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಲವ್ ಸ್ಟೋರಿ

ಧರ್ಮೇಂದ್ರ ಅವರಿಗೆ ಪ್ರಕಾಶ್ ಕೌರ್ ಜೊತೆ ಅದಾಗಲೆ ಮದುವೆಯಾಗಿತ್ತು. ಆದರೆ ಈತನಿಗೆ ಹೇಮಾ ಮಾಲಿನಿ ಮೇಲೆ ಕಣ್ಣುಬಿತ್ತು. ಅದು 'ತುಂ ಹಸೀನಾ ಮೈನ್ ಜವಾನ್' ಶೂಟಿಂಗ್ ವೇಳೆ. ಹೇಮಾ ಮಾಲಿನಿಯನ್ನು ಮದುವೆಯಾದರೆ ವಿವಾಹ ವಿಚ್ಛೇದನ ನೀಡುತ್ತೀನಿ ಎಂದು ಕೌರ್ ಬೆದರಿಸಿದ ಕಾರಣ ಧರ್ಮೇಂದ್ರ ತೆಪ್ಪಗಾಗಿದ್ದ. ಕೆಲದಿನಗಳ ಕಾಲ ಸುಮ್ಮನಿದ್ದು ಬಳಿಕ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಇಬ್ಬರೂ ಇಸ್ಲಾಂ ಧರ್ಮಕ್ಕೆ ಮತಾಂತವಾಗಿ ಎರಡನೇ ಮದುವೆಯಾದರು. ಹಿಂದು ಧರ್ಮದ ಪ್ರಕಾರ ಒಬ್ಬ ಪತ್ನಿ ಜೀವಂತವಾಗಿರುವಾಗ ಎರಡನೇ ಮದುವೆಯ ನಿಷಿದ್ಧ. ಹಾಗಾಗಿ ಇಬ್ಬರೂ ಇಸ್ಲಾಂ ಧರ್ಮ ಸ್ವೀಕರಿಸಿ ಮದುವೆಯಾದರು.

ರೇಖಾ, ಪರ್ವೀನ್ ಹಾಗೂ ಬಿಗ್ ಬಿ

ಧೋ ಅಂಜಾನೆ ಚಿತ್ರೀಕರಣ ವೇಳೆಯೇ ಬಿಗ್ ಬಿ ಹಾಗೂ ರೇಖಾ ನಡುವೆ ಪ್ರೇಮ ಪಲ್ಲವಿಸಿತ್ತು. ಇನ್ನೊಂದು ಕಡೆ ಪರ್ವೀನ್ ಅವರೊಂದಿಗೂ ಬಿಗ್ ಬಿ ಜೂಟಾಟ ಆಡುತ್ತಿದ್ದ. ಪರ್ವೀನ್ ಅವರಿಗೆ ಸಾಕಷ್ಟು ಸಹಾಯ ಮಾಡಿದ ಕಾರಣಕ್ಕೇ ಆಕೆ ವೃತ್ತಿ ಜೀವನದಲ್ಲಿ ಸಾಕಷ್ಟು ಎತ್ತರಕ್ಕೆ ಏರಿದ್ದಳು. ಆದರೆ ಇವರಿಬ್ಬರ ಸಂಬಂಧ ಕಾಡ್ಗಿಚ್ಚಿನಂತೆ ಹಬ್ಬಿದ್ದೇ ತಡ ಇಬ್ಬರೂ ದೂರ ಸರಿದರು. ಅತ್ತ ರೇಖಾರನ್ನೂ ಕೈಬಿಟ್ಟರು.

ಕಿರಣ್ ರಾವ್ ಹಾಗೂ ಅಮೀರ್ ಖಾನ್

ಲಗಾನ್ ಚಿತ್ರೀಕರಣ ವೇಳೆ ಅಮೀರ್ ಖಾನ್ ಅವರನ್ನು ಕಿರಣ್ ರಾವ್ (ಸಹಾಯಕ ನಿರ್ದೇಶಕಿ) ಭೇಟಿ ಮಾಡಿದ್ದರು. ಮೊದಲು ಗೆಳೆತನ ಶುರುವಾಯಿತು. ಬಳಿಕ ಅದು ಪ್ರೇಮಕ್ಕೆ ಪರಿವರ್ತನೆಯಾಗಿ ಮದುವೆಯಲ್ಲಿ ಅದು ಅಂತ್ಯವಾಯಿತು. ಅದಾಗಲೇ ರೀನಾ ದತ್ತಾ ಜೊತೆ ಅಮೀರ್ ಖಾನ್ ಗೆ ಮದುವೆಯಾಗಿತ್ತು. ಕಿರಣ್ ರಾವ್ ಅವರೊಂದಿಗೆ ಮದುವೆಯಾಗಿದ್ದೇ ತಡ ರೀನಾಗೆ ತಲಾಕ್ ತಲಾಕ್ ತಲಾಕ್ ಎಂದಿದ್ದ ಅಮೀರ್.


ಅಪ್ರತಿಮ ಸುಂದರಿ ನರ್ಗಿಸ್ ದತ್ತಾಗೆ, ಮದುವೆಯಾಗಿದ್ದ ರಾಜ್ ಕಪೂರ್ ಜೊತೆಗೆ ಸಂಬಂಧ ಇತ್ತು. ಈಗ ಪ್ರಿಯಾಂಕಾ ಚೋಪ್ರಾಗೂ ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿರುವ ಶಾರುಖ್ ಖಾನ್ ಗೂ ನಡುವೆ ಕುಚ್ ಕುಚ್ ವ್ಯವಹಾರ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ.

ಗೋವಿಂದ ಹಾಗೂ ರಾಣಿ ಮುಖರ್ಜಿ ಅವರ ನಡುವಿನ ಪ್ರೇಮಾಯಣ ಗೋವಿಂದ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ. ಗೋವಿಂದ ಪುತ್ರಿ ನರ್ಮದಾ ಅವರಂತೂ ಅಪ್ಪನ ಈ ಅನೈತಿಕ ಚಾಳಿಗೆ ಬಹಳಷ್ಟು ಡಿಸ್ಟರ್ಬ್ ಆಗಿದ್ದಳು. ಗೋವಿಂದ ಪತ್ನಿ ಸುನಿತಾ ಅವರಂತೂ ರಾಣಿಗೆ ಫೋನ್ ಮಾಡಿ ಬೆಂಡೆತ್ತಿದ್ದ ಪ್ರಸಂಗವೂ ನಡೆದಿದೆ.

English summary
Bollywood's extra-marital affairs. The saying, "Love is blind" is true, especially for people in Bollywood. Love can happen anywhere and to anyone; and that anyone can also be a ‘married person'. We will find that in Bollywood, married men in particular, find it difficult to maintain their fidelity.
Please Wait while comments are loading...