ಮಂಕಾಯ್ತು 'ಪ್ರಕಾಶ' : ರೈಗೆ ಮುಚ್ಚಲಿದ್ಯಾ ಬಿ ಟೌನ್ ಬಾಗಿಲು

By Pavithra

ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹೀಗೆ ಸಾಕಷ್ಟು ಭಾಷೆಗಳಲ್ಲಿ ತಮ್ಮ ಅಭಿನಯದ ಮೂಲಕವೇ ಗುರುತಿಸಿಕೊಂಡು ಸಾಕಷ್ಟು ಅಭಿಮಾನಿಗಳ ಬಳಗವನ್ನೇ ಕಟ್ಟುಕೊಂಡಿದ್ದ ನಟ ಪ್ರಕಾಶ್ ರೈ. ಯಾವುದೇ ಪಾತ್ರವಾದರೂ ಅದಕ್ಕೆ ತಕ್ಕ ನ್ಯಾಯ ದೊರಕಿಸಿಕೊಡುತ್ತಿದ್ದ ನಟ ಪ್ರಕಾಶ್ ರೈ ಪಾಲಿಗೆ ಬಾಲಿವುಡ್ ಸಿನಿಮಾರಂಗದ ಬಾಗಿಲು ಮುಚ್ಚಿದ್ಯಾ ಎನ್ನುವ ಮಾತು ಹೇಳಿ ಬರುತ್ತಿದೆ.

ಪ್ರದಾನಿ ಮೋದಿ ವಿರುದ್ದ ಮಾತನಾಡಲು ಆರಂಭಿಸಿದ ನಂತರ ಪ್ರಕಾಶ್ ರಾಜ್ ಅವರಿಗೆ ಅವಕಾಶಗಳು ಕಡಿಮೆ ಆಗುತ್ತಿದೆಯಂತೆ. ಈ ಬಗ್ಗೆ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ ಅದರ ಬಗ್ಗೆ ನನಗೆ ಬೇಸರವಿಲ್ಲ ಎಂದು ತಿಳಿಸಿದ್ದರು ಪ್ರಕಾಶ್ ರೈ.

Bollywood filmmakers have stopped offering actor Prakash Rai

ಪ್ರಕಾಶ್ ರೈ ಅವರ ಹೇಳಿಕೆಗಳು ಸಿನಿಮಾ ಹಾಗೂ ಅಭಿಮಾನಿಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನು ಆಲೋಚನೆಯಿಂದಾಗಿ ಬಾಲಿವುಡ್ ಮಂದಿ ಪ್ರಕಾಶ್ ರೈ ಅವರಿಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡುವುದನ್ನ ನಿಲ್ಲಿಸಿದ್ದಾರಂತೆ.

Bollywood filmmakers have stopped offering actor Prakash Rai

ಕೇವಲ ಪ್ರಧಾನಿ ಬಗ್ಗೆ ಮಾತ್ರವಲ್ಲದೆ ಕಥುವಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅಮಿತಾಬ್ ಬಚ್ಚನ್ ಮೌನ ತಾಳಿದ್ದಾರೆ ಎನ್ನುವ ಉದ್ದೇಶದಿಂದ ಅವರನ್ನೂ ನಿಂದಿಸುವಂತೆ ಪ್ರಕಾಶ್ ರೈ ಮಾತನಾಡಿದ್ದರು. ಇದೇ ಕಾರಣಕ್ಕೆ ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕರು ಈ ನಿರ್ಧಾರಕ್ಕೆ ಬರಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

More from Filmibeat

English summary
Bollywood filmmakers have stopped offering actor Prakash Rai since he started speaking out against Prime Minister Narendra Modi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X