For Quick Alerts
  ALLOW NOTIFICATIONS  
  For Daily Alerts

  ನಟ ಪ್ರಭಾಸ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಕರಣ್ ಜೋಹರ್

  By ಫಿಲ್ಮ್ ಡೆಸ್ಕ್
  |

  ಬಾಹುಬಲಿ ಸೂಪರ್ ಹಿಟ್ ಬಳಿಕ ಪ್ರಭಾಸ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಕಾಯುತ್ತಿದ್ದಾರೆ. ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಪ್ರಭಾಸ್ ಗೆ ಬೇಡಿಕೆ ಹೆಚ್ಚಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಹಿಂದಿಯಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಕರಣ್ ಜೋಹರ್ ನಿರ್ಮಾಣದಲ್ಲಿ ಪ್ರಭಾಸ್ ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

  ಬಾಹುಬಲಿ ಸಿನಿಮಾದ ಉತ್ತರ ಭಾರತದ ವಿತರಣೆ ಹಕ್ಕು ಕರಣ್ ಜೋಹರ್ ಪಡೆದುಕೊಂಡಿದ್ದರು. ಅಲ್ಲದೆ ಬಾಹುಬಲಿ ಸಿನಿಮಾಗೆ ಉತ್ತರ ಭಾರತದಲ್ಲಿ ಉತ್ತಮವಾದ ಪ್ರಚಾರ ಮಾಡಿದರು. ಆ ನಂತರ ಪ್ರಭಾಸ್, ಬಾಹುಬಲಿ ತಂಡದ ಜೊತೆ ಕರಣ್ ಸ್ನೇಹ ಉತ್ತಮವಾಗಿ ಬೆಳೆದಿತ್ತು. ಬಾಹುಬಲಿ ತಂಡವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂಬ ಕರಣ್ ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಫಲವಾಗಲಿಲ್ಲ. ಮುಂದೆ ಓದಿ..

  'ಆದಿಪುರುಷ'ನಾದ ಪ್ರಭಾಸ್ ಗೆ ವಿಲನ್ ಆಗ್ತಾರಾ ಬಾಲಿವುಡ್ ನ ಈ ಖ್ಯಾತ ನಟ?'ಆದಿಪುರುಷ'ನಾದ ಪ್ರಭಾಸ್ ಗೆ ವಿಲನ್ ಆಗ್ತಾರಾ ಬಾಲಿವುಡ್ ನ ಈ ಖ್ಯಾತ ನಟ?

  ಸಾಹೋ ಸಿನಿಮಾ ಬಳಿಕ ಸಿಟ್ಟಾಗಿದ್ದ ಕರಣ್

  ಸಾಹೋ ಸಿನಿಮಾ ಬಳಿಕ ಸಿಟ್ಟಾಗಿದ್ದ ಕರಣ್

  ಅದರಲ್ಲೂ ಸೆನ್ಸೇಷನ್ ನಟರು, ಸ್ಟಾರ್ ಮಕ್ಕಳಿಗೆ ಸಿನಿಮಾ ಮಾಡುವುದರಲ್ಲಿ ಕರಣ್ ಜೋಹರ್ ನಿಸ್ಸೀಮರು. ಹಾಗೆ ಪ್ರಭಾಸ್ ಜೊತೆ ಸಿನಿಮಾ ಮಾಡಲು ಕರಣ್ ಜೋಹರ್ ಮುಂದಾಗಿದ್ದರು. ಆದರೆ ಪ್ರಭಾಸ್ ಬಾಹುಬಲಿ ನಂತರ ಯುವಿ ಕ್ರಿಯೇಶನ್ಸ್ ಅಡಿಯಲ್ಲಿ ಸಾಹೋ ಸಿನಿಮಾವನ್ನು ಒಪ್ಪಿಕೊಂಡರು ಕರಣ್ ಗೆ ಶಾಕ್ ನೀಡಿದರು. ಅಲ್ಲಿಂದ ಪ್ರಭಾಸ್ ಮತ್ತು ಕರಣ್ ನಡುವಿನ ಸ್ನೇಹ ಉತ್ತಮವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

  ಧರ್ಮ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದರು

  ಧರ್ಮ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದರು

  ಪ್ರಭಾಸ್ ಸಾಹೋ ಸಿನಿಮಾದಿಂದ, ಕರಣ್ ನಿರ್ಮಾಣದ ಧರ್ಮ ಬ್ಯಾನರ್ ನಲ್ಲಿ ಪ್ರಭಾಸ್ ಗೆ ಸಿನಿಮಾ ಮಾಡುವ ಕನಸು ನುಚ್ಚು ನೂರಾಯಿತು. ಇದೀಗ ಪ್ರಭಾಸ್ ಬಾಲಿವುಡ್ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಟಿ ಸೀರಿಸ್ ಬಂಡವಾಳ ಹೂಡುತ್ತಿದೆ. ಇದು ಕರಣ್ ಗೆ ಮತ್ತಷ್ಟು ಅಘಾತವುಂಟುಮಾಡಿದೆ.

  ಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳುಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳು

  ಕರಣ್ ಗೆ ಆಘಾತವುಂಟುಮಾಡಿದ ಪ್ರಭಾಸ್ ನಿರ್ಧಾರ

  ಕರಣ್ ಗೆ ಆಘಾತವುಂಟುಮಾಡಿದ ಪ್ರಭಾಸ್ ನಿರ್ಧಾರ

  ಪ್ರಭಾಸ್ ಅವರ ಈ ನಿರ್ಧಾರ ಕರಣ್ ಗೆ ಭಾರಿ ಅಸಮಾಧಾನವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಕರಣ್ ಜೊತೆ ಸಿನಿಮಾ ಮಾಡಲು ಅನೇಕರು ಹಿಂದೇಟು ಹಾಕುತ್ತಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಕರಣ್ ವಿರುದ್ಧ ತೀವ್ರ ಆಕ್ರೋಶ ಕೇಳಿ ಬರುತ್ತಿದೆ. ಸ್ವಜನ ಪಕ್ಷಪಾತದ ಆರೋಪ ಎದುರಿಸುತ್ತಿದ್ದಾರೆ. ಇದರಿಂದ ಪ್ರಭಾಸ್, ಕರಣ್ ಜೋಹರ್ ಜೊತೆ ಸಿನಿಮಾ ಮಾಡದೆ ಇದ್ದಿದ್ದು ಉತ್ತಮ ನಿರ್ಧಾರ ಎನ್ನಲಾಗುತ್ತಿದೆ.

  ಆದಿಪುರುಷ್ ಸಿನಿಮಾ ಅನೌನ್ಸ್

  ಆದಿಪುರುಷ್ ಸಿನಿಮಾ ಅನೌನ್ಸ್

  ಪ್ರಭಾಸ್ ಸದ್ಯ ಬಾಲಿವುಡ್ ನಿರ್ದೇಶಕ ಓಂ ರಾವತ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ಅದಿಪುರುಷ್ ಅಂತ ಟೈಟಲ್ ಇಡಲಾಗಿದ್ದು, ಫಸ್ಟ್ ಲುಕ್ ರಿಲೀಸ್ ಆಗಿದೆ. ಮೊದಲ ಬಾರಿಗೆ ಪ್ರಭಾಸ್ ಬಾಲಿವುಡ್ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದಾರೆ. ಪ್ರಭಾಸ್ ಅಭಿನಯದ 22ನೇ ಸಿನಿಮಾ ಇದಾಗಿದ್ದು, ಚಿತ್ರದ ಮೇಲಿನ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

  English summary
  Bollywood Producer and Director Karan Johar upset with Prabhas decision.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X