For Quick Alerts
  ALLOW NOTIFICATIONS  
  For Daily Alerts

  ವಿದ್ಯಾಬಾಲನ್‌ಗೆ ಸಡ್ಡುಹೊಡೆದ ಡ್ರಾಮಾ ಕ್ವೀನ್ ರಾಖಿ

  By Rajendra
  |

  ಡ್ರಾಮಾ ಕ್ವೀನ್ ರಾಖಿ ಸಾವಂತ್ ಬಂಗಾಳಿ ಭಾಷೆಯಲ್ಲಿ 'ದಿ ಡರ್ಟಿ ಗರ್ಲ್' ಆಗಲು ಹೊರಟಿದ್ದಾರೆ. ಹಿಂದಿಯಲ್ಲಿ ವಿದ್ಯಾ ಬಾಲನ್ ಮಾಡಿದ್ದ 'ದಿ ಡರ್ಟಿ ಗರ್ಲ್' ಚಿತ್ರ ಬಂಗಾಳಿಗೆ ರೀಮೇಕ್ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ ರಾಖಿ ಮೂಲ ಚಿತ್ರಕ್ಕಿಂತ ತಮ್ಮ ಚಿತ್ರ ಚೆನ್ನಾಗಿರುತ್ತದೆ ಎಂದಿದ್ದಾರೆ.

  ಐಟಂ ಗರ್ಲ್ ಒಬ್ಬಳ ಕಥಾವಸ್ತುವನ್ನು ಈ ಚಿತ್ರ ಒಳಗೊಂಡಿರುವುದು ಗೊತ್ತೇ ಇದೆ. ಬಾಲಿವುಡ್‌ನ ಒರಿಜಿನಲ್ ಐಟಂ ಗರ್ಲ್ ನಾನು. ಹಾಗಾಗಿ ಈ ಚಿತ್ರದ ಪಾತ್ರದಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತೇನೆ. ಪಾತ್ರ ಅದ್ಭುತವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ರಾಖಿ.

  ಡರ್ಟಿ ಪಿಕ್ಚರ್ ಚಿತ್ರದಲ್ಲಿ ವಿದ್ಯಾ ಉತ್ತಮ ಅಭಿನಯ ನೀಡಿದ್ದರು. ಚಿತ್ರದಲ್ಲಿ ಆಕೆ ಪಾತ್ರವನ್ನು ಆವಾಹಿಸಿಕೊಂಡಿದ್ದರು. ಈಗ ನನ್ನ ಚಾನ್ಸ್. ವಿದ್ಯಾಗಿಂತಲೂ ನಾನು ಚೆನ್ನಾಗಿ ಅಭಿನಯಿಸಿ ತೋರಿಸುತ್ತೇನೆ. ಆಕೆಗಿಂತಲೂ ಚೆನ್ನಾಗಿ "ಊ ಲಾಲಾ" ಮಾಡಿ ತೋರಿಸುತ್ತೇನೆ ಎಂದು ಸವಾಲೆಸಿದ್ದಿದ್ದಾರೆ.

  ಈ ಚಿತ್ರದ ಬಳಿಕ ಎಲ್ಲರೂ ನನ್ನ ಹೆಸರನ್ನೇ ಜಪಿಸುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಿಂದೆ ನಾನು ಅತಿಥಿ ಪಾತ್ರ, ಐಟಂ ಡಾನ್ಸ್ ಮಾಡಿದ್ದೇನೆ. ಆದರೆ ಈ ರೀತಿ ಪೂರ್ಣ ಪ್ರಮಾಣದಲ್ಲಿ ಯಾವುದೇ ಚಿತ್ರದಲ್ಲಿ ತೊಡಗಿಕೊಂಡಿಲ್ಲ. ಅದೂ ಬಂಗಾಳಿ ಚಿತ್ರದಲ್ಲಿ ಎಂದಿದ್ದಾರೆ ಮೈ ಡೊಂಕಿನ ವೈಯ್ಯಾರಿ. (ಪಿಟಿಐ)

  English summary
  Bollywood Drama Queen Rakhi Sawant challenges she will performe better than Vidya Balan n the Bengali remake of "The Dirty Picture". After this film I am hoping that everyone will chant only my name," Rakhi told PTI.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X