»   » ನಟ ದರ್ಶನ್ ವಿರುದ್ಧ ಅಭಿಮಾನಿಗಳ ಅಸಮಾಧಾನ

ನಟ ದರ್ಶನ್ ವಿರುದ್ಧ ಅಭಿಮಾನಿಗಳ ಅಸಮಾಧಾನ

By: ರವಿಕಿಶೋರ್
Subscribe to Filmibeat Kannada
ಈ ರೀತಿಯ ಸುದ್ದಿಯೊಂದು ಬೆಂಗಳೂರಿನ ರಾಜರಾಜೇಶ್ವರಿನಗರದಿಂದ ವರದಿಯಾಗಿದೆ. ಕಾರಣ ಇಷ್ಟೇ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾಕೆ ಕಾವೇರಿ ಹೋರಾಟದಲ್ಲಿ ಭಾಗವಹಿಸಲಿಲ್ಲ? ಆ ದಿನ ಇಡೀ ಕನ್ನಡ ಚಿತ್ರರಂಗವೇ ಬೀದಿಗಿಳಿದು ಪ್ರತಿಭಟಿಸುತ್ತಿದ್ದರೆ ದರ್ಶನ್ ಎಲ್ಲಿ ಹೋಗಿದ್ದರು?

ಈ ರೀತಿಯ ಪ್ರಶ್ನೆಗಳು ದರ್ಶನ್ ಅಭಿಮಾನಿಗಳನ್ನು ಕಾಡುತ್ತಿವೆ. ತಮ್ಮ ನೆಚ್ಚಿನ ನಾಯಕ ನಟ ಪ್ರತಿಭಟನೆಯಲ್ಲಿ ಭಾಗವಹಿಸದೇ ಇದ್ದದ್ದಕ್ಕೆ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಅವರು ದರ್ಶನ್ ಅವರ ರಾಜರಾಜೇಶ್ವರಿ ಮನೆಗೂ ಭೇಟಿ ನೀಡಿ ಕಾರಣ ಕೇಳಿದ್ದಾರಂತೆ.

ದರ್ಶನ್ ಅವರು 'ಬುಲ್ ಬುಲ್ ಮಾತಾಡಾಕಿಲ್ವಾ' ಚಿತ್ರೀಕರಣದಲ್ಲಿದ್ದಾರೆ. ಆ ಚಿತ್ರದ ಚಿತ್ರೀಕರಣ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಭರದಿಂದ ಸಾಗುತ್ತಿದೆ. ಹಾಗಾಗಿ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ದರ್ಶನ್ ಕುಟುಂಬಿಕರು ತಿಳಿಸಿದ್ದಾಗಿ ಸುದ್ದಿ.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಇಡೀ ಕನ್ನಡ ಚಿತ್ರೋದ್ಯಮ ಶನಿವಾರ (ಅ.6) ಫಿಲಂ ಚೇಂಬರ್ ಮುಂದೆ ಸೇರಿ ಪ್ರತಿಭಟಿಸಿತ್ತು. ಈ ಪ್ರತಿಭಟನೆಯಲ್ಲಿ ಹಲವಾರು ಸಿನೆಮಾ ತಾರೆಗಳು ಭಾಗವಹಿಸಿದ್ದರು. ಆದರೆ ನಟ ದರ್ಶನ ಮಾತ್ರ ಅಂದು ಕಾಣಿಸಿಕೊಂಡಿರಲಿಲ್ಲ.

ಸ್ವಿಟ್ಜರ್ ಲ್ಯಾಂಡ್ ನಿಂದ ಕನ್ನಡ ಟಿವಿ ವಾಹಿನಿಗಳಿಗೆ ಕರೆ ಮಾಡಿದ ಅವರು, ಕಾವೇರಿ ಹೋರಾಟಕ್ಕೆ ನನ್ನ ಬೆಂಬಲವಿದೆ. ಕಾವೇರಿ ನನ್ನೊಬ್ಬನದಲ್ಲ. ಇದು ನಮ್ಮೆಲ್ಲರದ್ದು. ಕಾವೇರಿ ಎಂದೆಂದಿಗೂ ಕರ್ನಾಟಕದ ಸ್ವತ್ತು. ಶಾಂತಿಯುತವಾಗಿ ನಾವೆಲ್ಲರೂ ಹೋರಾಡೋಣ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದಿದ್ದರು.

ಆದರೆ ಈ ವಿಚಾರ ಗೊತ್ತಿಲ್ಲದ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಬರಲಿಲ್ಲವಲ್ಲಾ ಎಂದು ಅಸಮಾಧಾನಗೊಂಡಿದ್ದಾರೆ. "ರಾಜ್ಯದ ವಿಷಯ ಬಂದಾಗ ಕರ್ನಾಟಕ ಮೊದಲು...ಜಿಲ್ಲೆಯ ವಿಷಯ ಬಂದಾಗ ಮಂಡ್ಯ ಮೊದಲು" ಎಂಬ ದರ್ಶನ್ ಅವರ ಜನಪ್ರಿಯ ಡೈಲಾಗ್ ಗೆ ಈಗಲೂ ಅವರು ಬದ್ಧರಾಗಿದ್ದಾರೆ. ಅಭಿಮಾನಿಗಳು ಅಸಮಾಧಾನಗೊಳ್ಳಬೇಕಾಗಿಲ್ಲ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
Challenging Star Darshan fans upset over his absence for supports Cauvery protest and Karnataka Bandh held on 6th October. But he has busy in his upcoming film Bulbul Shooting progressed in Switzerland. So he has unable to participate in bandh said the sources.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada