»   » ದರ್ಶನ್ 'ಜಗ್ಗುದಾದಾ' ಬಿಡುಗಡೆಗೆ ದಿನಗಣನೆ ಶುರು ಗುರು.!

ದರ್ಶನ್ 'ಜಗ್ಗುದಾದಾ' ಬಿಡುಗಡೆಗೆ ದಿನಗಣನೆ ಶುರು ಗುರು.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ತಂದಿದೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'.

ದರ್ಶನ್ ರವರ 'ಜಗ್ಗುದಾದಾ' ಚಿತ್ರವನ್ನ ತೆರೆಮೇಲೆ ಕಣ್ತುಂಬಿಕೊಳ್ಬೇಕು ಅಂತ ನೀವೆಲ್ಲಾ ಕಾತರದಿಂದ ಕಾಯ್ತಿದ್ದೀರಾ. ಆದ್ರೆ, 'ಜಗ್ಗುದಾದಾ' ನಿಮ್ಮ ಮುಂದೆ ಬರುವುದು ಯಾವಾಗ? ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿರ್ಲಿಲ್ಲ.


challenging-star-darshan-starrer-jaggu-dada-release-on-june-10th

ಸದ್ಯಕ್ಕೆ ಗಾಂಧಿನಗರದ ಅಂಗಳದಲ್ಲಿ ಹರಿದಾಡುತ್ತಿರುವ ಖಾಸ್ ಖಬರ್ ಪ್ರಕಾರ, ಜೂನ್ 10 ರಂದು 'ಜಗ್ಗುದಾದಾ' ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.


ಮುಂದಿನ ವಾರ 'ಜಗ್ಗುದಾದಾ' ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸೆನ್ಸಾರ್ ಅಂಗಳದಿಂದ ಈ ವಾರ 'ಜಗ್ಗುದಾದಾ' ಪಾಸ್ ಆದ್ರೆ, ಬರುವ ಶುಕ್ರವಾರ ನಿಮಗೆ ದರ್ಶನ ಪಕ್ಕಾ.


ಈಗಾಗಲೇ ಬಿಡುಗಡೆ ಆಗಿರುವ ವಿ.ಹರಿಕೃಷ್ಣ ಸಂಗೀತ ನಿರ್ದೇಶನದ 'ಜಗ್ಗುದಾದಾ' ಚಿತ್ರದ ಹಾಡುಗಳು 'ಡಿ' ಬಾಸ್ ಫ್ಯಾನ್ಸ್ ಗೆ ಸಖತ್ ಲೈಕ್ ಆಗಿದೆ. [ದರ್ಶನ್ ಅಭಿನಯದ 'ಜಗ್ಗುದಾದಾ' ಆಡಿಯೋ ವಿಮರ್ಶೆ]


ದೀಕ್ಷಾ ಸೇಠ್, ಸೃಜನ್ ಲೋಕೇಶ್, ರಚಿತಾ ರಾಮ್, ಪ್ರಣೀತಾ ಸುಭಾಶ್, ರವಿಶಂಕರ್ ರಂತಹ ದೊಡ್ಡ ತಾರಾಬಳಗ ಇರುವ ರಾಘವೇಂದ್ರ ಹೆಗಡೆ ನಿರ್ದೇಶನ ಮಾಡಿರುವ ಈ ಚಿತ್ರ ಕಾಮಿಡಿ ಟ್ರ್ಯಾಕ್ ನಲ್ಲಿ ಸಾಗುವುದರಿಂದ 'ಜಗ್ಗುದಾದಾ' ಬಗ್ಗೆ ನಿರೀಕ್ಷೆ ಕೊಂಚ ಜಾಸ್ತಿ.


'ಜಗ್ಗುದಾದಾ' ಚಿತ್ರವನ್ನ ನೀವು ತೆರೆಮೇಲೆ ನೋಡುವ ಮುನ್ನ ಈಗಷ್ಟೇ ಬಿಡುಗಡೆ ಆಗಿರುವ ಚಿತ್ರದ ಕಲರ್ ಫುಲ್ ಹಾಡನ್ನೊಮ್ಮೆ ನೋಡಿಕೊಂಡ್ ಬನ್ನಿ....


English summary
According to the Grapevine, Challenging Star Darshan starrer Kannada Movie 'Jaggu Dada' is all set to release next week, i.e on June 10th. The movie is directed by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada