»   » ಆಹಾ ನನ್ನ ಮದುವೆ ಎಂದು ಟ್ವೀಟ್ ಮಾಡಿದ ಅಮ್ಮಣ್ಣಿ

ಆಹಾ ನನ್ನ ಮದುವೆ ಎಂದು ಟ್ವೀಟ್ ಮಾಡಿದ ಅಮ್ಮಣ್ಣಿ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಸಿನಿಮಾ ತಾರೆಗಳ ಮದುವೆ ಎಂದರೆ ಎಲ್ಲವೂ ಸದ್ದುಗದ್ದಲವಿಲ್ಲದಂತೆ ನಡೆಯುವುದೇ ಹೆಚ್ಚು. ಆ ನಟಿಗೆ ಮದುವೆ ದಿನಾಂಕ ಫಿಕ್ಸ್ ಆಗಿದೆಯಂತೆ, ಈ ನಟಿ ಇನ್ಯಾರ ಜೊತೆಗೋ ತಾಂಬೂಲ ಬದಲಾಯಿಸಿಕೊಂಡಿದ್ದಾರಂತೆ ಎಂಬ ಸುದ್ದಿಗಳು ಆಗಾಗ ಸ್ಫೋಟಗೊಂಡು ಠುಸ್ ಆಗುವುದೇ ಹೆಚ್ಚು.

ಆದರೆ ನನ್ನ ಮದುವೆ ಎಂದು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ ನಟಿ ಚಾರ್ಮಿ ಕೌರ್. ಕನ್ನಡದ 'ಯಾರೇ ಕೂಗಾಡಲಿ' ಚಿತ್ರದಲ್ಲಿ "ನಾನು ಪಡುವಾರಳ್ಳಿ ಪಾಂಚಾಲಿ" ಎಂದು ಮೈ ಬಳುಕಿಸಿದ್ದ ಈ ಬೆಡಗಿ ಧೈರ್ಯವಾಗಿ ಮದುವೆ ವಿಚಾರ ಹಂಚಿಕೊಂಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. [ಅತಿ ಹೆಚ್ಚು ಸಂಭಾವನೆ ಎಣಿಸುವ ದಕ್ಷಿಣದ ನಟಿಯರು]

Charmi Kaur tweets Getting married today

ಆದರೆ ಅಸಲಿ ಸಂಗತಿ ಏನೆಂದರೆ ಇದು ನಿಜವಾದ ಮದುವೆಯಲ್ಲ. ತೆಲುಗಿನಲ್ಲಿ ಬಣ್ಣಹಚ್ಚುತ್ತಿರುವ 'ಜ್ಯೋತಿಲಕ್ಷ್ಮಿ' ಚಿತ್ರದ ಮದುವೆ ಸೀನ್ ಇದು ಎಂಬುದು. ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಒಂದು ಕಾಲದ ಐಟಂ ಬೆಡಗಿ 'ಜ್ಯೋತಿಲಕ್ಷ್ಮಿ'ಯಾಗಿ ಚಾರ್ಮಿ ಮಿಂಚಲಿದ್ದಾರಂತೆ.

ಸಿನಿಮಾ ನರ್ತಕಿಯೊಬ್ಬರ ಜೀವನ ಕಥೆಯಾಧಾರಿತ ಚಿತ್ರ ಇದು ಎಂದಿದ್ದಾರೆ ಪುರಿ ಜಗನ್ನಾಥ್. ಶೀರ್ಷಿಕೆ ಕ್ಯಾಚಿಯಾಗಿರಬೇಕು ಎಂಬ ಕಾರಣಕ್ಕೆ 'ಜ್ಯೋತಿಲಕ್ಷ್ಮಿ' ಎಂದಿಟ್ಟಿದ್ದೇವೆ. ಆದರಿದು ಎಪ್ಪತ್ತು ಎಂಬತ್ತರ ದಶಕದಲ್ಲಿ ತನ್ನ ಮೈಮಾಟದ ಮೂಲಕ ಚಿತ್ರಪ್ರೇಮಿಗಳ ಸೂರೆಗೊಂಡ ನಾಯಕಿ ಜ್ಯೋತಿಲಕ್ಷ್ಮಿ ಅವರ ಜೀವನಕಥೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಪುರಿ ಜಗನ್ನಾಥ್.

ಇನ್ನು ಚಾರ್ಮಿ ಕೌರ್ ಅವರು ವಧುವಿನಂತೆ ಸಿಂಗಾರಗೊಂಡು ತನ್ನ ಮದುವೆ ಎಂದು ಟ್ವೀಟಿಸಿ ಎಲ್ಲರ ಗಮನಸೆಳೆದಿದ್ದಾರೆ. ಚಿತ್ರವೊಂದಕ್ಕೆ ಪ್ರಚಾರ ನೀಡಲು ಚಾರ್ಮಿ ಕಂಡುಕೊಂಡ ಹೊಸ ಉಪಾಯ ಇದು ಎಂಬುದು ಟಾಲಿವುಡ್ ನಲ್ಲಿ ಚರ್ಚೆಯ ವಿಷಯವಾಗಿದೆ.

English summary
Actress Charmi Kaur shocked many fans while tweeting, "Getting married today". But the actress is not getting married, she is busy in 'Jyothi Lakshmi' movie. The movie is being directed by Puri Jagannath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada