»   » ತಮಿಳು ರಿಮೇಕ್ ನಲ್ಲಿ ದರ್ಶನ್-ಯೋಗೇಶ್ ಜುಗಲ್ ಬಂದಿ?

ತಮಿಳು ರಿಮೇಕ್ ನಲ್ಲಿ ದರ್ಶನ್-ಯೋಗೇಶ್ ಜುಗಲ್ ಬಂದಿ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಲೂಸ್ ಮಾದ ಯೋಗೇಶ್ ಅವರು ಒಂದಾಗಿ ತೆರೆ ಹಂಚಿಕೊಳ್ಳುತ್ತಿದ್ದಾರಂತೆ. ಲಾಂಗ್ ಬ್ರೇಕ್ ತೆಗೆದುಕೊಂಡು ಮತ್ತೆ ಸ್ಯಾಂಡಲ್ ವುಡ್ ಗೆ ವಾಪಸಾಗಿರುವ ಲೂಸ್ ಮಾದ ಯೋಗಿ ಅವರು ಇದೇ ಮೊದಲ ಬಾರಿಗೆ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಜೊತೆ ಮಿಂಚುತ್ತಿದ್ದಾರೆ.

ಹೌದು ಮೊನ್ನೆ ಮೊನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಟಾರ್ ನಟರೊಂದಿಗೆ ನಟಿಸಲು ಆಸಕ್ತಿ ಇಲ್ಲ. ಆದರೆ ರಿಮೇಕ್ ಚಿತ್ರ ಆದರೆ ಓಕೆ ಎಂದ ಬೆನ್ನಲ್ಲೇ ಇದೀಗ ಯೋಗಿ ಅವರ ಜೊತೆ ತಮಿಳಿನ ರಿಮೇಕ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿದೆ.[ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ನಟಿಸಲ್ಲ ಅಂತ ದರ್ಶನ್ ಯಾಕಂದ್ರು?]

Darshan and Yogesh act Together in Tamil 'Poojai' Remake

ಹೌದು ತಮಿಳಿನಲ್ಲಿ ನಟ ವಿಶಾಲ್ ಹಾಗೂ ನಟಿ ಶ್ರುತಿ ಹಾಸನ್ ಅಭಿನಯಿಸಿದ್ದ 'ಪೂಜೈ' ಸಿನಿಮಾ ಕನ್ನಡಕ್ಕೆ ರಿಮೇಕ್ ಆಗಲಿದ್ದು, ಅದರಲ್ಲಿ ಲೂಸ್ ಮಾದ ಯೋಗಿ ಮತ್ತು ದರ್ಶನ್ ಅವರು ಮಿಂಚಲಿದ್ದಾರೆ.[ಕುಚಿಕು ಗೆಳೆಯನಿಗೆ ಕಾಲ್ ಶೀಟ್ ಕೊಟ್ಟ ಆ ನಟ ಯಾರು?]

A new film for #boxofficeSultanDarshanChallenging Star Darshan, who has been recently rechristened the Kannada film...

Posted by Darshan on Sunday, January 3, 2016

ಅಂದಹಾಗೆ ಕಾಮಿಡಿ ನಟ ಬುಲೆಟ್ ಪ್ರಕಾಶ್ ಅವರು ಕುಚಿಕು ಗೆಳೆಯ ದರ್ಶನ್ ಅವರಿಗಾಗಿ ಒಂದು ಸಿನಿಮಾ ಮಾಡಬೇಕು ಎಂದು ಬಹಳ ದಿನಗಳಿಂದ ಅಂದುಕೊಂಡಿದ್ದು, ಅದಕ್ಕೆ ಈಗ ಕಾಲ ಕೂಡಿ ಬಂದಿದೆ.

ಈ ಬಾರಿ ಕಾಮಿಡಿ ನಟ ಬುಲೆಟ್ ಪ್ರಕಾಶ್ ಅವರು ಸ್ಟಾರ್ ನಟರಿಬ್ಬರ ರಿಮೇಕ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಅಂತೂ ಇಂತೂ ಬುಲೆಟ್ ಅವರ ಬಹುದಿನಗಳ ಆಸೆ ಈಡೇರುತ್ತಿದೆ.[ಬುಲ್ಲೆಟ್ ಪ್ರಕಾಶ್ ನಿರ್ಮಾಣದಲ್ಲಿ ದರ್ಶನ್ ಚಿತ್ರ]

ಇನ್ನು ಸಖತ್ ಆಕ್ಷನ್ ಕಮ್ ಫ್ಯಾಮಿಲಿ ಸೆಂಟಿಮೆಂಟ್ ಇರುವ 'ಪೂಜೈ' ಸಿನಿಮಾದ ರಿಮೇಕ್ ಗೆ ಕನ್ನಡದಲ್ಲಿ ಹೊಸ ಟೈಟಲ್ ಅನ್ನು ಫೆಬ್ರವರಿ ತಿಂಗಳಿನಲ್ಲಿ ದರ್ಶನ್ ಅವರ ಹುಟ್ಟುಹಬ್ಬದಂದು ಚಿತ್ರತಂಡ ಲಾಂಚ್ ಮಾಡಲಿದೆ.

ಈಗಾಗಲೇ ದರ್ಶನ್ ಅವರು 'ಜಗ್ಗುದಾದ' ಮತ್ತು 'ವಿರಾಟ್' ನಲ್ಲಿ ಬ್ಯುಸಿಯಾಗಿರುವುದರಿಂದ ಅವರು ಫ್ರಿ ಆಗುವುದನ್ನೇ ಚಿತ್ರತಂಡ ಕಾಯುತ್ತಿದೆ. ಒಟ್ನಲ್ಲಿ ಪುನೀತ್ ಅವರ ಜೊತೆ ಕಾಣಿಸಿಕೊಂಡ ನಂತರ ಯೋಗಿ ಅವರು ದರ್ಶನ್ ಅವರ ಜೊತೆ ಮಿಂಚುವ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

English summary
Challenging Star Darshan and Dancing Star fame Actor Yogesh will act together in the Kannada Version of Tamil movie 'Poojai'. Comedy Actor Bullet Prakash to Produce the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada