»   » ದರ್ಶನ್ 'ಚಕ್ರವರ್ತಿ' ಬಿಡುಗಡೆ ಡೇಟ್ ಫಿಕ್ಸ್ ಆಯ್ತಾ?

ದರ್ಶನ್ 'ಚಕ್ರವರ್ತಿ' ಬಿಡುಗಡೆ ಡೇಟ್ ಫಿಕ್ಸ್ ಆಯ್ತಾ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ದರ್ಶನ್ ಅವರ ನ್ಯೂ ಲುಕ್ ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ಎಲ್ಲಾ ಸಿನಿಮಾಗಳಲ್ಲೂ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ದರ್ಶನ್ ಅವರು 'ಚಕ್ರವರ್ತಿ' ಚಿತ್ರದಲ್ಲಿ ಕೂಡ ಡಿಫರೆಂಟ್ ಆಗಿ ಮಿಂಚಿದ್ದಾರೆ.

ಇನ್ನು ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚಾಗಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾಗಳು ತೆರೆ ಕಾಣುತ್ತಿದ್ದವು. ಆದ್ರೆ ಈ ಬಾರಿ ಮಾತ್ರ ಹಾಗಾಗುತ್ತಿಲ್ಲ, ಈ ಬಾರಿ ಯಶ್ ಅಥವಾ ಗಣೇಶ್ ಸಿನಿಮಾಗಳು ತೆರೆ ಕಾಣುವುದಿಲ್ಲ.[ದರ್ಶನ್ ನಾಟ್ ರೀಚಬಲ್ ಆಗಿದ್ರೆ..ಟೆನ್ಷನ್ ಮಾಡ್ಕೊಬೇಡಿ, ಯಾಕಂದ್ರೆ..]


ಆದರೆ ದರ್ಶನ್ ಅವರ ಸಿನಿಮಾ ತೆರೆ ಕಾಣುವ ಸಂಭವವಿದೆ. 'ಚಕ್ರವರ್ತಿ' ಚಿತ್ರದ ಶೂಟಿಂಗ್ ಬಹುತೇಕ ಕೊನೆಯ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಮುಂದೆ ಓದಿ...


ಡಿಸೆಂಬರ್ ನಲ್ಲಿ 'ಚಕ್ರವರ್ತಿ' ಆರ್ಭಟ

ಆದಷ್ಟು ಬೇಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಿ, ಡಿಸೆಂಬರ್ 23ರಂದು 'ಚಕ್ರವರ್ತಿ'ಯನ್ನು ತೆರೆಗೆ ತರಲು ನಿರ್ದೇಶಕ ಚಿಂತನ್ ಅವರು ನಿರ್ಧರಿಸಿದ್ದಾರೆ. ಇಷ್ಟು ದಿನ ದರ್ಶನ್ ಅವರ ಸಿನಿಮಾಗಳಿಗೆ ಚಿತ್ರಕಥೆ-ಸಂಭಾಷಣೆ ಬರೆಯುತ್ತಿದ್ದ ಚಿಂತನ್ ಅವರು ಮೊದಲ ಬಾರಿಗೆ 'ಚಕ್ರವರ್ತಿ' ಚಿತ್ರದ ಮೂಲಕ ದರ್ಶನ್ ಅವರಿಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.['ಚಕ್ರವರ್ತಿ'ಯಲ್ಲಿ ದರ್ಶನ್ ನ್ಯೂ ಲುಕ್ ಹೇಗಿದೆ, ನೋಡಿದ್ರಾ?]


ಮಲೇಷ್ಯಾದಲ್ಲಿ ಶೂಟಿಂಗ್ ಮುಗಿತು

ಈ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ ಅವರು ಕೂಡ ಅಭಿನಯಿಸುತ್ತಿದ್ದಾರೆ. ಅವರ ಭಾಗದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮಲೇಷ್ಯಾ ಮತ್ತು ಸಿಂಗಾಪೂರ್ ನಲ್ಲಿ ಮುಗಿಸಿರುವ, ಇಡೀ ಚಿತ್ರತಂಡ ಬೆಂಗಳೂರಿಗೆ ವಾಪಸಾಗಿದ್ದಾರೆ. [ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]


ಮುಂದಿನ ವಾರ ಬ್ಯಾಂಕಾಕ್ ಗೆ

ಇನ್ನೇನು ಒಂದು ಹಾಡು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ನಾಯಕನ ಪರಿಚಯದ ಹಾಡು ಮತ್ತು ಚಿತ್ರಕ್ಕೆ ಬೇಕಾದ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ನಡೆಸಲು ಇಡೀ ಚಿತ್ರತಂಡ ಬ್ಯಾಂಕಾಕ್ ಗೆ ಮುಂದಿನ ವಾರ ತೆರಳಲಿದೆ.


ಮಡಿಕೇರಿಯಲ್ಲಿ 'ಚಕ್ರವರ್ತಿ'

ಬ್ಯಾಂಕಾಕ್ ನಿಂದ ವಾಪಸ್ ಬಂದ ತಕ್ಷಣ ಮಡಿಕೇರಿಯ ಸುಂದರ ಪರಿಸರದಲ್ಲಿ 'ಚಕ್ರವರ್ತಿ'ಯ ಕೆಲವು ದೃಶ್ಯಗಳ ಚಿತ್ರೀಕರಣ ನಡೆಸಲಿದೆ. ಇದಾದ ನಂತರ ಸಾವಕಾಶವಾಗಿ ಕುಂಬಳಕಾಯಿ ಒಡೆದು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳತ್ತ ಕಣ್ಣು ಹಾಯಿಸಲಿದ್ದಾರೆ. ಒಟ್ಟಾರೆ ನವೆಂಬರ್ 15ರೊಳಗಡೆ ಚಿತ್ರೀಕರಣ ಮುಗಿಸಿ, ಡಿಸೆಂಬರ್ 23ಕ್ಕೆ ಸುಸೂತ್ರವಾಗಿ ಚಿತ್ರವನ್ನು ಬಿಡುಗಡೆ ಮಾಡಬೇಕು ಅಂತ ಚಿತ್ರತಂಡ ಯೋಚನೆ ಮಾಡಿದೆ.


ಅಣಜಿ ನಾಗರಾಜ್ ನಿರ್ಮಾಣ

'ಚಕ್ರವರ್ತಿ' ಚಿತ್ರಕ್ಕೆ 'ಸ್ನೇಹನಾ ಪ್ರೀತಿನಾ' ಖ್ಯಾತಿಯ ನಿರ್ಮಾಪಕ ಅಣಜಿ ನಾಗರಾಜ್ ಅವರು ಬಂಡವಾಳ ಹೂಡುತ್ತಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಆದಿತ್ಯ, ಸೃಜನ್ ಲೋಕೇಶ್, ಚಾರುಲತಾ, ದೀಪಾ ಸನ್ನಿಧಿ ಮತ್ತು ದಿನಕರ್ ತೂಗುದೀಪ ಮುಂತಾದವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.


English summary
Darshan starrer 'Chakravarthy' is all set to release on the 23rd of December and the team is busy with the shooting and post-production of the film. The movie is directed by Chintan, who is making his directorial debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada