»   » ಇದು ಮಾಮೂಲಿ 'ಕುರುಕ್ಷೇತ್ರ' ಅಲ್ಲ: 'ಮುನಿರತ್ನ ಕುರುಕ್ಷೇತ್ರ'.!

ಇದು ಮಾಮೂಲಿ 'ಕುರುಕ್ಷೇತ್ರ' ಅಲ್ಲ: 'ಮುನಿರತ್ನ ಕುರುಕ್ಷೇತ್ರ'.!

Posted By:
Subscribe to Filmibeat Kannada

ಕುರುಕ್ಷೇತ್ರ.... ಎಂದು ಉದ್ಗಾರ ಮಾಡಿದ ಕೂಡಲೆ ಎಲ್ಲರ ತಲೆಗೆ ಥಟ್ ಅಂತ ನೆನಪಾಗುವುದು ಮಹಾಭಾರತ. ಇಲ್ಲಿಯವರೆಗೂ ಕುಮಾರವ್ಯಾಸನ ಮಹಾಭಾರತ, ಜೈಮಿನಿ ಭಾರತ ಸೇರಿದಂತೆ ಹಲವು ಕೃತಿಗಳನ್ನ ಕೇಳಿರುವ, ಓದಿರುವ ನಿಮಗೆ ಇದೀಗ 'ಮುನಿರತ್ನ ಕುರುಕ್ಷೇತ್ರ'ದ ಪರಿಚಯ ಆಗಲಿದೆ.

ಹೌದು, 'ಮುನಿರತ್ನ ಕುರುಕ್ಷೇತ್ರ'ವನ್ನ ಕನ್ನಡ ಚಿತ್ರರಂಗ ನಿಮಗೆ ಪರಿಚಯಿಸಲಿದೆ. ಹಾಗಂತ ಕನ್ ಫ್ಯೂಸ್ ಆಗುವ ಅಗತ್ಯ ಇಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರದ ಹೆಸರು 'ಕುರುಕ್ಷೇತ್ರ' ಅಂತ ತಿಳಿದುಕೊಂಡವರಿಗೆ ಈಗ ಸರ್ ಪ್ರೈಸ್ ಸಿಕ್ಕಿದೆ. ಅದೇನು ಅಂತ ಅಂದ್ರೆ...

ಫಸ್ಟ್ ಲುಕ್ ಪೋಸ್ಟರ್ ನೋಡಿದ್ರಾ.?

'ಕುರುಕ್ಷೇತ್ರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಿನ್ನೆಯಷ್ಟೇ ಬಿಡುಗಡೆ ಆಗಿತ್ತು. ಅದರಲ್ಲಿ ಚಿತ್ರದ ಶೀರ್ಷಿಕೆಯನ್ನು ಗಮನಿಸಿದ್ದೀರಾ.? ಪೋಸ್ಟರ್ ನಲ್ಲಿ 'ಮುನಿರತ್ನ ಕುರುಕ್ಷೇತ್ರ' ಅಂತ ಇದೆ.

ಗೊಂದಲ ಶುರು...

ಶೀರ್ಷಿಕೆಯಲ್ಲಿ 'ಕುರುಕ್ಷೇತ್ರ'ಕ್ಕೆ ಹೋಲಿಸಿದರೆ 'ಮುನಿರತ್ನ' ಪದ ಕೊಂಚ ಚಿಕ್ಕದಾಗಿದೆ ಅಷ್ಟೇ. ಆದರೆ, ಎರಡೂ ಪದಗಳ ಡಿಸೈನ್, ಫಾರ್ಮ್ಯಾಟ್, ಫಾಂಟ್ ಒಂದೇ. ಇದನ್ನ ನೋಡಿದವರು, ಚಿತ್ರದ ಹೆಸರು 'ಕುರುಕ್ಷೇತ್ರ'ವೋ ಅಥವಾ 'ಮುನಿರತ್ನ ಕುರುಕ್ಷೇತ್ರವೋ' ಎಂಬ ಗೊಂದಲಕ್ಕೀಡಾಗಿದ್ದಾರೆ.

ಇದಕ್ಕೆ ಕಾರಣ ಏನು.?

'ಕುರುಕ್ಷೇತ್ರ' ಶೀರ್ಷಿಕೆ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿರುವುದರಿಂದ ಅದೇ ಶೀರ್ಷಿಕೆ ಮುನಿರತ್ನ ಅವರಿಗೆ ಸಿಕ್ಕಿಲ್ಲ. ಹೀಗಾಗಿ, 'ಮುನಿರತ್ನ ಕುರುಕ್ಷೇತ್ರ' ಎಂದು ಡಿಸೈನ್ ಮಾಡಿಸಲಾಗಿದೆ ಎಂಬುದು ಗಾಂಧಿನಗರದ ಗುಲ್ಲು.

ಕ್ಲಾರಿಟಿ ಬೇಕಿದೆ

ಈ ಚಿತ್ರಕ್ಕೆ 'ಕುರುಕ್ಷೇತ್ರ' ಎನ್ನಬೇಕೋ ಅಥವಾ 'ಮುನಿರತ್ನ ಕುರುಕ್ಷೇತ್ರ' ಎನ್ನಬೇಕೋ ಎಂಬುದರ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಬಹುಶಃ ಆಗಸ್ಟ್ 6 ರಂದು ಉತ್ತರ ಸಿಗಬಹುದು. ಯಾಕಂದ್ರೆ, ಸಿನಿಮಾದ ಮುಹೂರ್ತ ಅವತ್ತೇ.!

English summary
Darshan starrer 50th Movie is titled as 'Muniratna Kurukshetra'.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada