»   » ರೆಬೆಲ್ ಸ್ಟಾರ್ ಅಂಬರೀಶ್ ಪರ ದರ್ಶನ್ ಪ್ರಚಾರ?

ರೆಬೆಲ್ ಸ್ಟಾರ್ ಅಂಬರೀಶ್ ಪರ ದರ್ಶನ್ ಪ್ರಚಾರ?

Posted By:
Subscribe to Filmibeat Kannada
Challenging Star Darshan
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣತಮ್ಮಂದಿದ್ದಂತೆ. ಈಗ ಅವರಿಬ್ಬರ ಚಿರ ಬಾಂಧವ್ಯ ವಿಧಾನಸಭೆ ಚುನಾವಣೆವರೆಗೂ ವಿಸ್ತರಿಸಿದೆ. ಇವರಿಬ್ಬರಿಗೂ ಅತಿದೊಡ್ದ ಸಂಖ್ಯೆಯಲ್ಲಿ ಅಭಿಮಾನಿಗಳಿರುವುದು ಗೊತ್ತಿರುವ ಸಂಗತಿ.

ಆದರೆ ಚುನಾವಣೆ ವಿಚಾರಕ್ಕೆ ಬಂದರೆ ಅಭಿಮಾನವೇ ಬೇರೆ ಪಾಲಿಟಿಕ್ಸೇ ಬೇರೆ ಆಗುತ್ತದೆ. ಆದರೂ ಕನ್ನಡ ಚಿತ್ರರಂಗದ ದೊಡ್ಡಣ್ಣನ ಪರ ಪ್ರಚಾರ ಮಾಡಲು ದರ್ಶನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಒಂದು ತಿಂಗಳ ಕಾಲ ಅಂಬರೀಶ್ ಪರ ಅವರು ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದಾರಂತೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಗೊತ್ತೇ ಇದೆ. ಅವರ ಪರ ಪ್ರಚಾರಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಾದ್ದು, ಒಂದು ತಿಂಗಳ ಕಾಲ ಅವರು ಯಾವುದೇ ಚಿತ್ರೀಕರಣದಲ್ಲೂ ಪಾಲ್ಗೊಳ್ಳುವುದಿಲ್ಲವಂತೆ. ತಮ್ಮ ಕಾಲ್ ಶೀಟನ್ನೂ ಮುಂದೂಡಿದ್ದಾರೆ ಎನ್ನುತ್ತವೆ ಮೂಲಗಳು.

ಚುನಾವಣೆ ಪ್ರಚಾರಕ್ಕಾಗಿ ಅವರು ವಿಶೇಷ ವಾಹನವನ್ನೂ ಸಿದ್ಧಪಡಿಸಿಕೊಳ್ಳುತ್ತಿದ್ದಾರಂತೆ. ಆದರೆ ದರ್ಶನ್ ಅವರು ಪ್ರಚಾರ ಮಾಡುತ್ತಿರುವುದು ವ್ಯಕ್ತಿಯ ಪರವಾಗಿಯೇ ಹೊರತು ಪಕ್ಷದ ಪರವಾಗಿ ಅಲ್ಲ ಎಂಬ ಮಾತುಗಳು ಕೇಳಿಬಂದಿವೆ. (ಒನ್ಇಂಡಿಯಾ ಕನ್ನಡ)

English summary
Challenging Star Darshan may stepped into election campaign in favouring of Ambarish, he is contesting from Mandya assembly constituency.
Please Wait while comments are loading...