»   » ಬಾಜಿ ಕಟ್ಟಿ 10 ಲಕ್ಷ ಕಳಕೊಂಡ ದೀಪಿಕಾ ಪಡುಕೋಣೆ

ಬಾಜಿ ಕಟ್ಟಿ 10 ಲಕ್ಷ ಕಳಕೊಂಡ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ಹೌದು ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ ಬೆಟ್ ಕಟ್ಟಿ ಸೋತಿದ್ದಾರೆ. ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ...ಎಂದು ಸವಾಲು ಹಾಕಿ ರು.10ಲಕ್ಷ ಕಳೆದುಕೊಂಡಿದ್ದಾರೆ. ಆದರೆ ಈ ಸೋಲಿನಲ್ಲಿ ಆಕೆ ಒಂದು ಪಾಠವನ್ನೂ ಕಲಿತಿರುವುದು ವಿಶೇಷ!

ಅದಕ್ಕೇ ಹೇಳೋದು ದೀಪಿಕಾ ಪಡುಕೋಣೆ ಡಿಫರೆಂಟ್ ಎಂದು. ಇಷ್ಟಕ್ಕೂ ಈಕೆ ಬೆಟ್ ಕಟ್ಟಿದಿದ್ದು ತಮ್ಮದೇ ಆದ 'ಕಾಕ್ ಟೈಲ್' ಚಿತ್ರದ ಮೇಲೆ. ಈ ಚಿತ್ರದಲ್ಲಿನ ವಿಶೇಷ ಹಾಡೊಂದು ಕ್ಲಿಕ್ ಆಗಲ್ಲ ಎಂದು ನಿರ್ಮಾಪಕ ದಿನೇಶ್ ವಿಜನ್ ಅವರಿಗೆ ಹೇಳಿದ್ದರು. ಆದರೆ ನಿರ್ಮಾಪಕರು ಕೇಳಬೇಕಲ್ಲಾ. ಈ ಸಾಂಗ್ ಖಂಡಿತ್ ಹಿಟ್ ಎಂಬ ನಂಬಿಕೆ ತಮಗಿದೆ. ಹಾಗಾಗಿ ಬೆಟ್ ಕಟ್ಟಿ ಎಂದು ದೀಪಿಕಾಗೆ ಹೇಳಿದ್ದಾರೆ. ದೀಪಿಕಾ ಕೂಡ ಆಯ್ತು ಎಂದಿದ್ದರು.

ಈಗ ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸಲ್ಲಿ ತಕ್ಕಮಟ್ಟಿಗೆ ಸೌಂಡ್ ಮಾಡಿದೆ. ಈ ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿ ರು.39 ಕೋಟಿ ಬಾಚಿದ್ದು ಬಾಲಿವುಡ್ ನಲ್ಲಿ ಸಖತ್ ಸುದ್ದಿಯಾಗಿತ್ತು. "ದಿಟ್ಟಿ ದಾರು ದೇಸಿ..." ಎಂಬ ಹಾಡು ಕೂಡ ಹಿಟ್ ಆಯಿತು. ಎಲ್ಲರ ಬಾಯಲ್ಲೂ ಈ ಹಾಡು ಗುನುವಂತಾಯಿತು.

ಸರಿ ನಿರ್ಮಾಪಕರು ಕೊಡಿ ಹತ್ತು ಲಕ್ಷ ಎಂದು ದೀಪಿಕಾ ಪಡುಕೋಣೆ ಬೆನ್ನು ಬಿದ್ದರು. ದೀಪಿಕಾ ಹಾಡು ಹಿಟ್ ಆಗಿಲ್ಲ ಎಂದು ವಾದಿಸತೊಡಗಿದರಂತೆ. ಆದರೆ ನಿರ್ಮಾಪಕರು ಚಾರ್ಟ್ ಸಮೇತ ಪಕ್ಕಾ ರಿಪೋರ್ಟ್ ತೋರಿಸಿದ್ದಾರೆ. ದೀಪಿಕಾ ಬಾಯಿಗೆ ಬೀಗ ಬಿದ್ದಿದೆ.

ಆದರೆ ಬೆಟ್ ಕಟ್ಟಿದ ದುಡ್ಡಿನ ಬಗ್ಗೆ ಮಾತ್ರ ಎಲ್ಲೂ ಸುದ್ದಿ ಇಲ್ಲ. ಆದರೆ ನಿರ್ಮಾಪಕರು ಮಾತ್ರ ಬೆನ್ನಿಗೆ ಬಿದ್ದ ಬೇತಾಳನಂತೆ ದೀಪಿಕಾರನ್ನು ಬಿಟ್ಟಿಲ್ಲ. ಕಡೆಗೆ ರು.10 ಲಕ್ಷಗಳನ್ನು ಸಂದಾಯ ಮಾಡಿ ನಿರ್ಮಾಪಕರಿಗೆ ಕೈಮುಗಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ದೀಪಿಕಾ, "ಈ ಕಾಲದಲ್ಲಿ 10 ಲಕ್ಷ ಅನ್ನುವುದು ಅಂತಹ ದೊಡ್ಡ ಅಮೌಂಟ್ ಏನೂ ಅಲ್ಲ ಬಿಡಿ. 'ಕಾಕ್ ಟೈಲ್' ಚಿತ್ರದಿಂದ ತಮಗೆ ಬರಬೇಕಾದಷ್ಟು ಹಣ ಬಂದಿದೆ. ಅದಕ್ಕೆ ಹೋಲಿಸಿದರೆ ಇದ್ಯಾವ ಲೆಕ್ಕ. ರು. 10 ಲಕ್ಷ ಜುಜುಬಿ ಎಂದಿದ್ದಾರೆ"

ಆದರೆ ಬಲ್ಲ ಮೂಲಗಳು ಹೇಳುವುದೇನೆಂದರೆ, ಬೆಟ್ ನಲ್ಲಿ ಹತ್ತು ಲಕ್ಷ ಕಳಕೊಂಡಿರುವ ದೀಪಿಕಾ ಇನ್ನೂ ಶಾಕ್ ನಿಂದ ಹೊರಬಂದಿಲ್ಲವಂತೆ. ಹೋಮಿ ಅದಜಾನಿಯಾ ನಿರ್ದೇಶನದ 'ಕಾಕ್ ಟೈಲ್' ಚಿತ್ರವನ್ನು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ.

ರೊಮ್ಯಾಂಟಿಕ್ ಕಾಮಿಡಿ ಆದ ಈ ಚಿತ್ರದನ್ನು ಸೈಫ್ ಆಲಿ ಖಾನ್ ಹಾಗೂ ದಿನೇಶ್ ವಿಜನ್ ನಿರ್ಮಿಸಿದ್ದಾರೆ. ದೀಪಿಕಾ ಪಡುಕೋಣೆಯ ಬಿಕಿನಿ ದೃಶ್ಯಗಳು ಚಿತ್ರದಲ್ಲಿ ಪ್ರಮುಖ ಆಕರ್ಷಣೆ. ಮೈಚಳಿ ಬಿಟ್ಟು ದೀಪಿಕಾ ಟೂ ಪೀಸ್ ನಲ್ಲಿ ಮಿಂಚಿದ್ದಾರೆ. (ಏಜೆನ್ಸೀಸ್)

English summary
Bollywood actress Deepika Padukone loses bet and pays 10 lakh rupees to producer of Cocktail. She challenged her Cocktail producer Dinesh Vijan that a particular song in the film will not work. But the song hit the chartbuster.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada