For Quick Alerts
  ALLOW NOTIFICATIONS  
  For Daily Alerts

  ರಜಿನಿಕಾಂತ್ ಗೆ ಮತ್ತೆ ದೀಪಿಕಾ ಪಡುಕೋಣೆ ನಾಯಕಿ?

  By Harshitha
  |

  ಬಾಲಿವುಡ್ ನಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಾದ್ಯಂತ ಜನಪ್ರಿಯತೆ ಗಳಿಸಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ. 'ಕೊಚ್ಚಾಡಿಯನ್' ಚಿತ್ರದ ಮೂಲಕ ಕಾಲಿವುಡ್ ಕದ ತಟ್ಟಿದ್ದ ದೀಪಿಕಾ ಪಡುಕೋಣೆ ಇದೀಗ ಮತ್ತೆ ತಮಿಳು ಸಿನಿ ಅಂಗಳಕ್ಕೆ ಬರುವುದಕ್ಕೆ ರೆಡಿಯಿದ್ದಾರಂತೆ.

  ಹಾಗಂತ ಬಾಲಿವುಡ್ ಅಂಗಳದಲ್ಲಿ ಸುದ್ದಿಯಾಗಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿರುವ 'ರೋಬೋಟ್ - 2' (ಎಂದಿರನ್ - 2) ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆ ಆಗಿದ್ದಾರಂತೆ. [ಶುರುವಾಗುವ ಮುನ್ನವೇ ಮುಗ್ಗರಿಸಿ ಬಿದ್ದ 'ರೋಬೋಟ್' ರಜನಿ!]

  'ಎಂದಿರನ್' ಚಿತ್ರದಲ್ಲಿ ರಜನಿಕಾಂತ್ ಜೊತೆ ಐಶ್ವರ್ಯ ರೈ ಬಚ್ಚನ್ ಕಾಣಿಸಿಕೊಂಡಿದ್ದರು. ಶಂಕರ್ ನಿರ್ದೇಶಿಸಲಿರುವ ಈ ಚಿತ್ರದ ಮುಂದುವರಿದ ಭಾಗ 'ರೋಬೋಟ್ - 2' (ಎಂದಿರನ್ - 2) ಚಿತ್ರದಲ್ಲಿ ರಜಿನಿಕಾಂತ್ ಜೊತೆ ರೋಮ್ಯಾನ್ಸ್ ಮಾಡುವ ಅವಕಾಶ ದೀಪಿಕಾ ಪಡುಕೋಣೆಗೆ ಒಲಿದು ಬಂದಿದೆ. [ಗೆಲುವಿಗಾಗಿ ಸೂಪರ್ ಸ್ಟಾರ್ ರಜನಿ ಮಾಡಿರುವ ಪ್ಲಾನ್ ಇದು...]

  ದೀಪಿಕಾ ಪಡುಕೋಣೆ ಜೊತೆ ನಿರ್ದೇಶಕ ಶಂಕರ್ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದ್ರೆ, ಈ ಆಫರ್ ಗೆ ದೀಪಿಕಾ ಓಕೆ ಅಂದಿದ್ದಾರಾ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ.

  ಒಂದ್ವೇಳೆ ದೀಪಿಕಾ ಪಡುಕೋಣೆ 'ಯೆಸ್' ಅಂದರೆ, 'ಕೊಚ್ಚಾಡಿಯನ್' ಚಿತ್ರದಲ್ಲಿ ನಿರಾಸೆಗೊಂಡಿದ್ದ ಅಭಿಮಾನಿಗಳು 'ರೋಬೋಟ್ - 2' (ಎಂದಿರನ್ - 2) ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ನೋಡಿ ಖುಷಿ ಪಡಬಹುದು. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮುಂದಿನ ಚಿತ್ರದ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

  English summary
  According to the reports, Deepika Padukone has been signed on as female lead for Rajinikanth starrer 'Robot-2' (Enthiran-2). However, no official confirmation has been made so far.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X