Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳಿಗೆ ಎಂಟ್ರಿ! ವಿಜಯ್ ಸಿನಿಮಾದಲ್ಲಿ ಧನ್ಯಾ ರಾಮ್‌ಕುಮಾರ್?
ಕನ್ನಡದ ವರನಟ ಡಾ.ರಾಜಕುಮಾರ್ ಕುಟುಂಬದಿಂದ ಅವರ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ರಾಜ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ರಾಜ್‌ಕುಮಾರ್ ಮಗಳ ಮಗಳು ಧನ್ಯಾ ರಾಮ್‌ಕುಮಾರ್ ಮೊದಲ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. 'ನಿನ್ನ ಸನಿಹಕೆ' ಸಿನಿಮಾದ ಮೂಲಕ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ.
ರಾಜ್‌ಕುಮಾರ್ ಕುಟುಂಬದಿಂದ ಸಿನಿಮಾ ರಂಗಕ್ಕೆ ಬಂದು, ಬಿಗ್ ಪರದೆ ಮೇಲೆ ಕಾಣಿಸಿಕೊಂಡ ಮೊದಲ ನಟಿ ಧನ್ಯಾ ರಾಮ್‌ಕುಮಾರ್. ಧನ್ಯಾ ಉತ್ತಮ ಕಲಾವಿದೆ ಎನ್ನುವುದನ್ನು ತಮ್ಮ ಮೊದಲ ಸಿನಿಮಾದ ಮೂಲಕ ಈಗಾಗಲೇ ಸಾಬೀತು ಮಾಡಿದ್ದಾರೆ.
ಧನ್ಯಾ
ರಾಮ್‌ಕುಮಾರ್
ತೆಲುಗು,
ತಮಿಳಿಗೆ
ಎಂಟ್ರಿಗೆ
ಮುಹೂರ್ತ
ಫಿಕ್ಸ್!
ಧನ್ಯಾ ಮುಂದಿನ ಸಿನಿಮಾ ಯಾವುದು ಎನ್ನುವುದು ಕೂಡ ಈಗಾಗಲೇ ಬಹಿರಂಗವಾಗಿದೆ. ಆದರೆ ಅದರ ಜೊತೆಗೆ ತಮಿಳು ಮತ್ತು ತೆಲುಗಿಗೆ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕಿಗೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಯಾವ ನಾಯಕನ ಜೊತೆಗೆ ಧನ್ಯ ತಮಿಳಿನಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿದೆ.

ವಿಜಯ್ ಜೊತೆಗೆ ಧನ್ಯಾ ತಮಿಳಿಗೆ ಎಂಟ್ರಿ!
ನಟಿ ಧನ್ಯಾ ರಾಮ್‌ಕುಮಾರ್ ಮೊದಲ ಸಿನಿಮಾದ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಈಕೆ ತಮಿಳು-ತೆಲುಗಿಗೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಹಬ್ಬಿದ ಮೇಲೆ, ಯಾವ ಸಿನಿಮಾ, ಪಾತ್ರ ಹೇಗಿರುತ್ತೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಇದರ ಜೊತೆಗೆ ಈಗ ಧನ್ಯ ತಮಿಳು ಸ್ಟಾರ್ ನಟ ವಿಜಯ್ ಜೊತೆಗೆ ತಮಿಳು ಮಾಡಲಿದ್ದಾರೆ ಎನ್ನುವ ಗುಸು ಗುಸು ಹಬ್ಬಿದೆ. ಇದಕ್ಕೆ ಕಾರಣ ನಟಿ ಧನ್ಯಾ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್.
ವಿಕ್ಕಿ
ವರುಣ್
ನಟನೆಯ
'ಕಾಲಾಪತ್ಥರ್'
ಸಿನಿಮಾಗೆ
ದೊಡ್ಮನೆ
ಕುಟುಂಬದ
ಹೀರೊಯಿನ್!
|
ವಿಜಯ್ ಹುಟ್ಟುಹಬ್ಬಕ್ಕೆ ಧನ್ಯಾ ಶುಭಾಷಯ!
ನಟ ವಿಜಯ್ ಹುಟ್ಟುಹಬ್ಬ ಜೂನ್ 22ಕ್ಕೆ ನೆರವೇರಿದೆ. ವಿಜಯ್ ಹುಟ್ಟುಹಬ್ಬಕ್ಕೆ ಸಾಕಷ್ಟು ಸಿನಿಮಾ ತಾರೆಯರು ಶುಭ ಕೋರಿದ್ದಾರೆ. ಆದರೆ ವಿಶೇಷವಾಗಿ ಗಮನ ಸೆಳೆದಿದ್ದು ಮಾತ್ರ ಕನ್ನಡದ ನಟಿ ಧನ್ಯಾ ರಾಮ್‌ಕುಮಾರ್. ವಿಜಯ್‌ಗೆ ವಿಶೇಷವಾದ ಸಂದೇಶದ ಮೂಲಕ ಧನ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭ ಕೋರಿದ್ದಾರೆ. "ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ, ನಿಮ್ಮ 'ವಾರಿಸು' ಚಿತ್ರದ ಪೋಸ್ಟರ್ ತುಂಬಾ ಇಷ್ಟ ಆಯ್ತು. ನಿಮಗೆ ಹುಟ್ಟುಹಬ್ಬದ ಶುಭಾಷಯಗಳು." ಎಂದು ಬರೆದುದಕೊಂಡಿದ್ದಾರೆ. ಹಾಗಾಗಾಗಿ ಧನ್ಯಾ ರಾಮ್‌ಕುಮಾರ್ ವಿಜಯ್ ಜೊತೆಗೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತೆಲುಗಿನಲ್ಲೂ ಧನ್ಯಾ ಸಿನಿಮಾ!
ಇನ್ನು ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬೇರೆ ಬೇರೆ ಸಿನಿಮಾಗಳನ್ನು ಮಾಡುತ್ತಿದ್ದು ಕಥೆಯನ್ನು ಕೇಳಿ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲವೂ ಕೊನೆಯ ಹಂತಕ್ಕೆ ಬಂದಿದ್ದು ಇನ್ನೇನು ಕೆಲವೇ ದಿನದಲ್ಲಿ ಸಿನಿಮಾವನ್ನು ಪ್ರಕಟ ಮಾಡಲಾಗುತ್ತದೆ. ಈ ಮಾಹಿತಿಯನ್ನು ಆಯಾ ಸಿನಿಮಾ ತಂಡಗಳು ಅಧಿಕೃತವಾಗಿ ಪ್ರಕಟಗೊಳಿಸಲಿವೆ. ಇದಕ್ಕೆ ಸಕಲ ಸಿದ್ಧತೆ ಕೂಡ ನಡೆದಿವೆ.
4
ದಿನದ
ಕಲೆಕ್ಷನ್:
ದಾಖಲೆ
ಬರೆದ
'ನಿನ್ನ
ಸನಿಹಕೆ'

ಕನ್ನಡದಲ್ಲೂ ಕೂಡ ಬ್ಯುಸಿಯಾಗಿರುವ ಧನ್ಯಾ!
ಧನ್ಯಾ ರಾಮ್‌ಕುಮಾರ್ ಕನ್ನಡದಲ್ಲಿ ಕೂಡ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ನಿನ್ನ ಸನಿಹಕೆ' ಸಿನಿಮಾದ ಬಳಿಕ 'ಕಾಲಾಪತ್ಥರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಟಿ ಧನ್ಯಾ. ಈ ವಿಚಾರವನ್ನು ಚಿತ್ರತಂಡ ಈಗಾಗಲೇ ಪ್ರಕಟ ಮಾಡಿದೆ. ಇದರ ಜೊತೆಗೆ ಮತ್ತೊಂದು ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರಂತೆ ಧನ್ಯಾ. ಅದು ಕೊಡ ಸದ್ಯದಲ್ಲೇ ಪ್ರಕಟಗೊಳ್ಳಲಿದೆ.