For Quick Alerts
  ALLOW NOTIFICATIONS  
  For Daily Alerts

  ವರ್ಮಾ ಕಚೇರಿಯಲ್ಲಿ ಸಿಕ್ಕಿದ್ದು ಎಷ್ಟು ಕೋಟಿ?

  By ಜೇಮ್ಸ್ ಮಾರ್ಟಿನ್
  |

  ರಂಗೀಲಾ, ಸತ್ಯ, ಕಂಪನಿ, ಫೂಂಕ್, ಸರ್ಕಾರ್ ರಾಜ್, ರಕ್ತ ಚರಿತ್ರ ಮುಂತಾದ ಚಿತ್ರಗಳನ್ನು ನಿರ್ಮಿಸಿ ಫಿಲಂ ಫ್ಯಾಕ್ಟರಿ ಸೃಷ್ಟಿಸಿದ್ದ ವಿಭಿನ್ನ, ವಿಚಿತ್ರ ಚಿಂತನೆ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ.

  ಇತ್ತೀಚೆಗೆ ಕೂತ ಕಡೆಯಿಂದಲೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ವರ್ಮಾ ಅದ್ಯಾವಾಗ ಸತ್ಯ 2 ಚಿತ್ರ ತಯಾರಿಸಿದರೋ ಗೊತ್ತಿಲ್ಲ. ಸತ್ಯ 2 ಸದ್ಯಕ್ಕೆ ಸಿದ್ದವಾಗಿದ್ದು ಟ್ರೇಲರ್ ಸದ್ದು ಮಾಡುತ್ತಿದೆ. ಸದ್ಯಕ್ಕೆ ಆದಾಯ ತೆರಿಗೆ ಇಲಾಖೆ ಅವರು ಇತ್ತೀಚೆಗೆ ವರ್ಮಾ ಅವರ ಮುಂಬೈ ಕಚೇರಿ ಮೇಲೆ ನಡೆಸಿದ ದಾಳಿ ನಂತರ ವಿವರಗಳನ್ನು ಕೆದಕೋಣ.

  ದೇಶದ ಆಗು ಹೋಗುಗಳ ಬಗ್ಗೆ ಮುಕ್ತವಾಗಿ ಟ್ವೀಟ್ ಮೂಡುವ ವರ್ಮಾ ಯಾಕೋ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ತುಟಿ ಬಿಚ್ಚಿಲ್ಲ. ದೆಹಲಿ ಗ್ಯಾಂಗ್ ರೇಪ್ ಬಗ್ಗೆ ಬಂದ ತೀರ್ಪನ್ನು ಸ್ವಾಗತಿಸಿ ರೇಪಿಸ್ಟ್ ಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ ಎಂದಿದ್ದರು.

  ಇತ್ತೀಚೆಗೆ ಮುಂಬೈ ಕಚೇರಿ ಮೇಲೆ ಆದಾಯ ತೆರಿಗೆ/ಸೇವಾ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಕಳೆದ 6 ವರ್ಷಗಳಿಂದ ಸೇವಾ ತೆರಿಗೆ ಕಟ್ಟಿಲ್ಲವಂತೆ ಹೀಗಾಗಿ 10 ಕೋಟಿ ರು ಜಪ್ತಿ ಮಾಡಿಕೊಳ್ಳಲಾಗಿದೆಯಂತೆ.

  ಇನ್ನೊಂದು ಮೂಲಗಳ ಪ್ರಕಾರ ಕಚೇರಿಯಲ್ಲಿ ಅಷ್ಟು ಹಣ ಎಲ್ಲಿಂದ ಬರಬೇಕು? ವರ್ಮಾ ಅಷ್ಟು ದೊಡ್ಡ ಮೊತ್ತ ಬಾಕಿ ಉಳಿಸಿಕೊಂಡಿದ್ದಾರೆ ನಿಜ ಆದರೆ, ಅಧಿಕಾರಿಗಳಿಗೆ ಏನು ಸಿಕ್ಕಿಲ್ಲ ಎನ್ನಲಾಗಿದೆ.

  ವರ್ಮಾ ಅವರ ಪ್ರೊಡಕ್ಷನ್ ಹೌಸ್ ಕೂಡಾ ಹೈದರಾಬಾದಿನಲ್ಲಿ ನೋಂದಾಯಿಸಲಾಗಿದೆ. ಒಟ್ಟಾರೆ ಅಧಿಕಾರಿಗಳು ಸೇವಾ ತೆರಿಗೆ, ವೃತ್ತಿ ತೆರಿಗೆ ಹೆಸರಿನಲ್ಲಿ ವರ್ಮಾ ಬೆನ್ನ ಹಿಂದೆ ಬಿದ್ದಿರುವುದಂತೂ ದೃಢಪಟ್ಟಿದೆ. ಇಲಾಖೆ ಎಷ್ಟು ಸಿಕ್ಕಿತೋ ವರ್ಮಾ ಎಷ್ಟು ಕೊಟ್ಟರೋ ಇನ್ನೂ ಸ್ಪಷ್ಟವಾಗಿಲ್ಲ.

  English summary
  According to reports, Director Ram Gopal Varma owes the Income tax department an amount of ten crores. It is heard that he has been evading these service and Professional taxes from the past six years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X