»   » 'ಲೇಡಿಸ್ ಟೈಲರ್' ಚಿತ್ರವನ್ನ ಯಾರೂ ಒಪ್ಪುತ್ತಿಲ್ಲ ಯಾಕೆ? ಚಿತ್ರದಲ್ಲಿ ಅಂತಹದ್ದೇನಿದೆ?

'ಲೇಡಿಸ್ ಟೈಲರ್' ಚಿತ್ರವನ್ನ ಯಾರೂ ಒಪ್ಪುತ್ತಿಲ್ಲ ಯಾಕೆ? ಚಿತ್ರದಲ್ಲಿ ಅಂತಹದ್ದೇನಿದೆ?

Posted By:
Subscribe to Filmibeat Kannada

'ನೀರ್ದೋಸೆ' ಚಿತ್ರದ ನಿರ್ದೇಶಕ ವಿಜಯ ಪ್ರಸಾದ್ ಅದ್ಯಾವ ಘಳಿಗೆಯಲ್ಲಿ 'ಲೇಡಿಸ್ ಟೈಲರ್' ಚಿತ್ರವನ್ನ ಘೋಷಣೆ ಮಾಡಿದರೋ ಗೊತ್ತಿಲ್ಲ. ಈ ಚಿತ್ರ ಶುರುವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದುವರೆಗೂ ಮೂವರು ನಟರು ಈ ಚಿತ್ರವನ್ನ ರಿಜೆಕ್ಟ್ ಮಾಡಿದ್ದಾರೆ.

ಇನ್ನು ನಾಯಕಿಯ ಹುಡುಕಾಟ ನಡೆಯುತ್ತಿದ್ದು, ನಾಯಕಿ ಕೂಡ ಅಂತಿಮವಾಗುತ್ತಿಲ್ಲ. ಇದನ್ನೆಲ್ಲಾ ನೋಡಿ ಬೇಸರಗೊಂಡ ನಿರ್ದೇಶಕರು 'ಲೇಡಿಸ್ ಟೈಲರ್' ಚಿತ್ರವನ್ನ ನಿಲ್ಲಿಸಲು ಮುಂದಾಗಿದ್ದಾರಂತೆ.

ಎಲ್ಲ ಅಂದಕೊಂಡಂತೆ ಆಗಿದ್ದರೇ, ಇದೇ ತಿಂಗಳಲ್ಲಿ ಈ ಸಿನಿಮಾ ಶುರುವಾಗಬೇಕಿತ್ತು. ಅಷ್ಟಕ್ಕೂ, 'ಲೇಡಿಸ್ ಟೈಲರ್' ಚಿತ್ರವನ್ನ ಯಾಕೆ ಯಾವ ನಟರು ಒಪ್ಪುತ್ತಿಲ್ಲ. ಈ ಚಿತ್ರದಲ್ಲಿ ಅಂಥಹದ್ದೇನಿದೆ? ಮುಂದೆ ಓದಿ ನಿಮ್ಗೆ ಗೊತ್ತಾಗುತ್ತೆ.

3 ನಟರು ರಿಜೆಕ್ಟ್ ಮಾಡಿದ 'ಲೇಡಿಸ್ ಟೈಲರ್'

ರವಿಶಂಕರ್ ಗೌಡ 'ಲೇಡಿಸ್ ಟೈಲರ್' ಚಿತ್ರಕ್ಕೆ ಮೊದಲು ಆಯ್ಕೆ ಆಗಿದ್ದರು. ಆದ್ರೆ, ನಿರ್ಮಾಪಕರ ವಿರೋಧದ ಹಿನ್ನೆಲೆ ರವಿಶಂಕರ್ ಈ ಚಿತ್ರದಿಂದ ಹಿಂದೆ ಸರಿದರು. ನಂತರ ನೀನಾಸಂ ಸತೀಶ್ ಈ ಚಿತ್ರಕ್ಕೆ ಸೇರ್ಪಡೆಯಾದರು. ಅವರು ಕೂಡ ರಿಜೆಕ್ಟ್ ಮಾಡಿದರು. ನಂತರ ಜಗ್ಗೇಶ್ ಹೆಸರು ಕೇಳಿ ಬಂತಾದರೂ 'ನಾನು ಅಭಿನಯಿಸುತ್ತಿಲ್ಲ'ವೆಂದು ನೇರವಾಗಿ ಹೇಳಿಬಿಟ್ಟರು.

'ನೀರ್ದೋಸೆ' ನಿರ್ದೇಶಕರ ಮುಂದಿನ ಚಿತ್ರದಲ್ಲಿ ಜಗ್ಗೇಶ್ ಇಲ್ಲ

ರಿಜೆಕ್ಟ್ ಮಾಡಲು ಕಾರಣವೇನು

ಮೂಲಗಳ ಪ್ರಕಾರ 'ಲೇಡಿಸ್ ಟೈಲರ್' ಚಿತ್ರ ಮಹಿಳಾ ಪ್ರಧಾನ ಚಿತ್ರ. ಹೀಗಾಗಿ, ಇಲ್ಲಿ ನಾಯಕಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಲಿದೆ ಎಂಬ ಕಾರಣಕ್ಕೆ ಸ್ಟಾರ್ ನಟರು ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ನಾಯಕ ತಲೆ ಬೋಳಿಸಿಕೊಳ್ಳಬೇಕಂತೆ

ಇನ್ನು ಚಿತ್ರದಲ್ಲಿ ನಾಯಕ ನಟ ತನ್ನ ತಲೆ ಕೂದಲನ್ನ ಪೂರ್ತಿಯಾಗಿ ಬೋಳಿಸಿಕೊಳ್ಳಬೇಕಂತೆ. ಹೀಗಾಗಿ, ಇದರಿಂದ ಮುಂದಿನ ಚಿತ್ರಗಳಿಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ.

ನಾಯಕಿ ಸಿಕ್ಕಿಲ್ಲ ಯಾಕೆ?

'ಲೇಡಿಸ್ ಟೈಲರ್' ಚಿತ್ರದಲ್ಲಿ ನಾಯಕಿ ಬರೋಬ್ಬರಿ 120 ಕೆಜಿ ತೂಕವಿರಬೇಕಂತೆ. ಈ ಪಾತ್ರಕ್ಕೆ ಆಯ್ಕೆ ಆಗುವ ನಟಿ ದಪ್ಪವಾಗಬೇಕಂತೆ. ಹೀಗಾಗಿ, ಏಕಾಏಕಿ 120 ಕೆಜಿ ದಪ್ಪವಾಗಲು ಯಾರು ಸಿದ್ದವಾಗುತ್ತಿಲ್ಲ ಎನ್ನಲಾಗುತ್ತಿದೆ.

ಶರ್ಮಿಳಾ ಮಾಂಡ್ರೆ ಒಕೆ ಅಂದ್ರಾ!

'ಲೇಡಿಸ್ ಟೈಲರ್' ಚಿತ್ರಕ್ಕೆ ನಟಿ ಶರ್ಮಿಳಾ ಮಾಂಡ್ರೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿತ್ತು. ಆದ್ರೆ, ಅಧಿಕೃತವಾಗಿ ಘೋಷಣೆ ಆಗಿರಲಿಲ್ಲ. ಹೀಗಾಗಿ, ಈ ಚಿತ್ರದಲ್ಲಿ ಪಾತ್ರಗಳು ಆಯ್ಕೆ ಆದರೂ, ಒಂದಲ್ಲ ಒಂದು ಕಾರಣದಿಂದ ಹಿಂದಕ್ಕೆ ಸರಿಯುತ್ತಿದ್ದಾರಂತೆ.

ಚಿತ್ರವನ್ನ ನಿಲ್ಲಿಸಲು ನಿರ್ಧಾರ

ಇದರಿಂದ ಬೇಸತ್ತ ನಿರ್ದೇಶಕ ವಿಜಯ ಪ್ರಸಾದ್ 'ಲೇಡಿಸ್ ಟೈಲರ್' ಚಿತ್ರವನ್ನ ನಿಲ್ಲಿಸಲು ನಿರ್ಧರಿಸಿದ್ದಾರಂತೆ. ಪಾತ್ರಗಳ ಆಯ್ಕೆ ಆಗದ ಹಿನ್ನೆಲೆ ಮುಂದಿನ ನಿರ್ಧಾರದ ಬಗ್ಗೆ ಸ್ಪಷ್ಟನೆ ಇಲ್ಲದ ಕಾರಣ ಬೇರೊಂದು ಪ್ರಾಜೆಕ್ಟ್ ನ್ನ ಶುರು ಮಾಡಲು ಮುಂದಾಗಿದ್ದಾರಂತೆ.

English summary
Director Vijay Prasad has Decided to Drop the Ladies Tailor Project after Rejecting Three Top Heros in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada