»   » ಜಗ್ಗೇಶ್ ರ 'ನೀರ್ ದೋಸೆ' ಪಿಕ್ಚರ್ನ್ಯಾಗ ಡೈಲಾಗ್ ಹೆಂಗೆಲ್ಲಾ ಐತಿ ಗೊತ್ತೇನ್ರೀ?

ಜಗ್ಗೇಶ್ ರ 'ನೀರ್ ದೋಸೆ' ಪಿಕ್ಚರ್ನ್ಯಾಗ ಡೈಲಾಗ್ ಹೆಂಗೆಲ್ಲಾ ಐತಿ ಗೊತ್ತೇನ್ರೀ?

Posted By: ಹರಾ
Subscribe to Filmibeat Kannada

ಅದೇ....ನಮ್ ಮಾತಿನ ಮಲ್ಲ ಜಗ್ಗೇಶ್ ಬತ್ತಳಿಕೇಲಿ ಎಂಥೆಂತ ಬಾಣಗಳು ಅವೆ ಅಂತ ನಿಮ್ಗೆ ಗೊತ್ತಿಲ್ವೇನ್ರೀ..

ಜಗ್ಗಿ ಚಿತ್ರಗಳಲ್ಲಿ ಡೈಲಾಗ್ ಗಳು ಹೆಂಗೆಂಗೆಲ್ಲಾ ಇರ್ತಾವೆ, ಅದಕ್ಕೆ ನೀವು ಯಾವ್ ಪಾಟಿ ನಗ್ತೀರಿ ಅಂತ ನಾವ್ ಬೇರೆ ಪೆಸಲ್ಲಾಗಿ ಹೇಳ್ಬೇಕೇ?


ಈಗ ಬೇರೆ ಜಗ್ಗಿ ಜೊತೆ 'ಸಿಲ್ಲಿ ಲಲ್ಲಿ' ಧಾರಾವಾಹೀಲಿ ಕಿವೀಲಿ ಕೆಂಪ್ ಕಲರ್ ದಾಸವಾಳ ಇಟ್ಕೊಂಡು ನ್ಯೂಸ್ ಓದ್ತಿದ್ದ ವಿಜಯ್ ಪ್ರಸಾದ್ ಅವ್ರು ಜೊತೆ ಸೇರ್ಕೊಂಡ್ಬುಟವ್ರೆ. ಅಂದ್ಮ್ಯಾಕೆ, 'ನೀರ್ ದೋಸೆ' ಪಿಕ್ಚರ್ ನೋಡಿ ಶಾನೆ ನಗ್ಬಹುದು ಅಂತ ನಮ್ ಮನೆ ಮಂದಿಯೆಲ್ಲಾ ಕಾಯ್ತಾ ಕುಂತವ್ರೆ ಕಣ್ರೀ. ನಿಮ್ದು ಅದೀ ಕತೆ ತಾನೇ?


'ನೀರ್ ದೋಸೆ' ಪಿಕ್ಚರಲ್ಲಿ ಡೈಲಾಗ್ ಗಳು ಹೆಂಗೆಲ್ಲಾ ಅವೆ ಅನ್ನೋ ಮ್ಯಾಟ್ರು ನಮ್ ಕಿವಿಗ್ ಬಿದ್ದೈತೆ. ಅಲ್ಲೊಂದ್-ಇಲ್ಲೊಂದ್ ಸಿಕ್ಕ ಸ್ಯಾಂಪಲ್ಲು ಇಲ್ಲೈತೆ. ನೋಡ್ರಲ್ಲಾ....


ಮೊದಲನೇ ಸೀನು

ಜಗ್ಗೇಶ್ - ಇವಳು ಶಾನ್ ಬೋಗರ ಮಗಳು ಅಲುವ್ರಾ....ಒಂದ್ ಕಾಲ್ದಲ್ಲಿ ಚಾಕ್ಲೇಟ್ ಇಸ್ಕೊತಾ ಇದ್ದೋಳು ಇವತ್ತು ನನಗೇ...ಬಿಸ್ಕೆಟ್ ಹಾಕೊ ರೇಂಜಿಗೆ ಬೆಳ್ದೌಳಲಪ್ಪಾ..! ಅಹಾ ಶಾನ್ಬೊಗ್ರೇ..ನಿಮ್ ಹೊಲದಲ್ಲು ಇಂತ ಪಸ್ಲು ಬರತದ್ಯೇ..!? [ಹಾಟ್ ಲುಕ್ ನಲ್ಲಿ ಪಡ್ಡೆಹೈಕಳ ನಿದ್ದೆಗೆಡಿಸುವ, ನೀರ್ ದೋಸೆ' ಬೆಡಗಿ]


ಎರಡನೇ ಸೀನು

ಹರಿಪ್ರಿಯಾ - ದಮ್ಮು ಇರೋರು ಮಾತ್ರ ಧಮ್ ಹೊಡೀಬೇಕು ಅನ್ನೋದೇನಾದರೂ ಕಾನೂನು ಇದ್ಯಾ? ಮನೆಯಲ್ಲಿ ಲೈಫ್ ಟೈಮ್ ವೆಲಿಡಿಟಿ ಇರೋ ಅಂತ ಹೆಂಡತಿ ಇದ್ರೂ ಪಬ್ಲಿಕ್ ಟ್ರ್ಯಾನ್ಸ್ ಪೋರ್ಟ್ ನ ನೆಚ್ಕೊಳ್ತಾರಲ್ಲಾ ಈ ಅರೆ ಬೆಂದ ಕಾಮುಕರು. ನಾನು ಒಂದು ಹೆಣ್ಣು. ನನಗೂ ಒಂದು ಮನಸ್ಸಿದೆ ಅನ್ನೋದನ್ನೇ ಮರೆತು ಬಿಟ್ರಾ..? [ಚಿತ್ರಗಳು: 'ನೀರ್ ದೋಸೆ' ಹುಯಿದು ಸುಸ್ತಾದ ವಿಜಯ್ ಪ್ರಸಾದ್]


ಮೂರನೇ ಸೀನು

ದತ್ತಣ್ಣ - ಅಯ್ನೋರು ಹೋಗ್ ಬಿಟ್ರಂತೆ.!
ಜಗ್ಗೇಶ್ - ಅಯ್ಯೋ ಪಾಪ..ಒಳ್ಳೆಯವರಿಗೆ ಕಾಲ ಇಲ್ಲ ಬಿಡಿ. ಮೊನ್ನೆ ಅಯ್ನೋರ್ ಹೋಟೆಲ್ ಹತ್ತಿರ ಹೋಗಿದ್ದೆ. ನೀರ್ ದೋಸೆ ಸರಿಯಾಗಿ ಬೆಂದಿಲ್ಲಾ ಅಂತ ಹೇಳಿ ಸ್ವಲ್ಪ ಜಾಸ್ತಿನೇ ಹೊಗೆ ಹಾಕ್ತಾ ಇದ್ರು. ಇವತ್ತು ನೋಡಿದ್ರೆ ಅಯ್ನೋರು ಹೊಗೆ ಹಾಕಿಸ್ಕೊಂಡೌರೆ. This Yama dharma doing big big politics with innocent people you know.!


ನಾಲ್ಕನೇ ಸೀನು

ಜಗ್ಗೇಸ್ - ರೀ..ಡೈರೆಕ್ಟ್ರೇ ಎಂ-80 ಮೇಲೆ ಒಂದು 90 ಹೊಡ್ಸಿ ನಮ್ಮನ್ನ ದಡ ಸೇರಿಸ್ಬಿಟ್ರಿ..!?
ವಿಜಯ್ ಪ್ರಸಾದ್ : ಹ್ಹಿ...ಹ್ಹಿ.....ಸಾರ್ ಈ ಎಂ-80 ಗು 90 ಗು ಒಂಥರಾ ಲವ್ವಿ ಡವ್ವಿ ಸಾರ್. ಎಲ್ಲಾ ಅನ್ನದಾತರ ಆಶೀರ್ವಾದ.
ಜಗ್ಗೇಶ್ : ಹೂಂ...ನಿಜ ಕಂಡ್ರಿ.. ಅಷ್ಟಿಲ್ದೆ ಅಣ್ಣೊರು ಹೇಳಿಲ್ಲ ಅನ್ನದಾತೋ ಸುಖೀ ಭವಾ..ಅಂತ.


ಎಲ್ಲಾ ಫೇಸ್ ಬುಕ್ ನಲ್ಲಿ!

ಈ ಎಲ್ಲಾ ಡೈಲಾಗ್ ಗಳು ಫೇಸ್ ಬುಕ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗೈತೆ. ಅಲ್ಲಿ-ಇಲ್ಲಿ ಸಿಕ್ಕಿದ್ದನ್ನ ನಿಮ್ಗೆ ತೋರ್ಸಿದ್ದೀವಿ. ಇವೆಲ್ಲಾ ಪಿಕ್ಚರ್ನ್ಯಾಗ ಐತೋ, ಇಲ್ವೋ ನಾ ಕಾಣೆ. ಯಾವ್ದಕ್ಕೂ ನೋಡಿ, ಹಲ್ಲುಬಿಟ್ಟು, ಸುಮ್ಕೆ ಇದ್ಬುಡಿ...


English summary
Kannada Actress Haripriya and Kannada Actor Jaggesh starrer Kannada Movie 'Neer Dose' dialogues goes viral in Facebook.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada