»   » ಆ ಪಾತ್ರಕ್ಕೆ ಹೇಮಾ ಮಾಲಿನಿ ಕೇಳಿದ್ದು 1 ಕೋಟಿ

ಆ ಪಾತ್ರಕ್ಕೆ ಹೇಮಾ ಮಾಲಿನಿ ಕೇಳಿದ್ದು 1 ಕೋಟಿ

Posted By:
Subscribe to Filmibeat Kannada
ಒಂದು ಕಾಲದಲ್ಲಿ ಕನಸಿನ ಕನ್ಯೆಯಾಗಿ ಮೆರೆದ ಹೇಮಾ ಮಾಲಿನಿ ಇನ್ನೂ ಅದೇ ಗುಂಗಿನಲ್ಲಿರುವಂತೆ ಕಾಣುತ್ತದೆ. ಈಗ ಅವರನ್ನು ಅತ್ತೆ, ಅಮ್ಮ, ಚಿಕ್ಕಮ್ಮನಂತಹ ಪೋಷಕ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗೆ ಅವರನ್ನು ಅಂತಹದ್ದೇ ಒಂದು ಪಾತ್ರ ಹುಡುಕಿಕೊಂಡು ಬಂದಿತ್ತು.

ಬಾಲಿವುಡ್ ನ ಸ್ಟಾರ್ ಹೀರೋ ಒಬ್ಬರಿಗೆ ತಾಯಿಯಾಗಿ ಅಭಿನಯಿಸುತ್ತೀರಾ? ಎಂದು ನಿರ್ದೇಶಕ ಹೇಮಾ ಅವರ ಮನೆ ಬಾಗಿಲು ತಟ್ಟಿದ್ದ. ಆಯ್ತು ಅದಕ್ಕೇನಂತೆ ಬಿಡಿ. ಮಾಡೋಣ ಎಂದರಂತೆ. ಸರಿ ತಮ್ಮ ಸಂಭಾವನೆ ಎಷ್ಟು ಎಂದು ಕೇಳಿದ್ದಾರೆ.

ಹೇಮಾ ಮಾಲಿನಿ ರೇಟು ಕೇಳಿ ನಿರ್ದೇಶಕ ಮಹಾಶಯನಿಗೆ ಅಲ್ಲೇ ನೆಲ ಕುಸಿದ ಅನುಭವವಾಗಿದೆ. ಸಾವರಿಸಿಕೊಂಡ ನಿರ್ದೇಶಕ ಫೋನು ಮಾಡ್ತೀನಿ ಮೇಡಂ ಎಂದು ಹೋದವನು ಅತ್ತ ತಲೆ ಹಾಕಿಯೂ ಮಲಗಿಲ್ಲವಂತೆ. ಈ ರೀತಿಯ ಸುದ್ದಿಯೊಂದು ಬಾಲಿವುಡ್ ನಲ್ಲಿ ಗಿರಿಗಿಟ್ಲೆಯಾಡುತ್ತಿದೆ.

ಒಂದು ಕೋಟಿ ಕೊಟ್ಟರೆ ಐಟಂ ಗರ್ಲ್ ಗಳೇ ಸಿಗುತ್ತಾರೆ. ನಾಲ್ಕೈದು ಕೋಟಿ ಕೊಟ್ಟರೆ ನಂಬರ್ ಒನ್ ಹೀರೋಯಿನ್ ಗಳೇ ನಾಯಕಿಯಾಗುತ್ತಾರೆ. ಇನ್ನು ಅಮ್ಮನ ಪಾತ್ರಕ್ಕೇ ಇಷ್ಟು ಕೊಟ್ಟರೆ ನಿರ್ಮಾಪಕನ ಗತಿ ಏನು? ಎಂದು ಬಾಲಿವುಡ್ ಬೊಂಬಡಾ ಬಜಾಯಿಸುತ್ತಿದೆ.

ಒಂದು ಕಾಲದ ತಾರಾ ಜೋಡಿ ಹೇಮಾ ಮಾಲಿನಿ ಹಾಗೂ ಜಿತೇಂದ್ರ ಪೌರಾಣಿಕ ಚಿತ್ರವೊಂದರಲ್ಲಿ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. 'ಮಹಾಭಾರತ್ ಔರ್ ಬರಾಬರೀಕ್' ಎಂಬ ಚಿತ್ರದಲ್ಲಿ ಹೇಮಾ ಮಾಲಿನಿ ಅವರು ಶಾಪಗ್ರಸ್ಥ ಅಪ್ಸರೆ ಹಿಡಂಬಿಯಾಗಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

English summary
Recently Hema Malini asked for Rs 1 crore as her remuneration, for playing a mother to a Bollywood superstar. The filmmaker admits he approached Hemaji because he is a huge fan of her and thinks she rightfully deserves the Bollywood Dream Girl title.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada