Just In
Don't Miss!
- News
ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಸ ರೂಪ
- Sports
ಐಎಸ್ಎಲ್: ನಾರ್ತ್ಈಸ್ಟ್ vs ಮೋಹನ್ ಬಾಗನ್, Live ಸ್ಕೋರ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಿಸೆಂಬರ್ 17ಕ್ಕೆ ಹೊಂಬಾಳೆ ಹೊಸ ಸಿನಿಮಾ: ಎಲ್ಲರ ಕಣ್ಣು ಆ ನಟನೆ ಮೇಲೆ!
'ಕೆಜಿಎಫ್ ಚಾಪ್ಟರ್-2' ಸಿನಿಮಾ ಬಳಿಕ ನ್ಯಾಷನಲ್ ಸ್ಟಾರ್ ಪ್ರಭಾಸ್ ಜೊತೆ 'ಸಲಾರ್' ಎಂಬ ಪ್ರಾಜೆಕ್ಟ್ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಕೆಜಿಎಫ್ ಶೂಟಿಂಗ್ ಮುಗಿಯಲಿದ್ದು, ಜನವರಿಯಿಂದ ಸಲಾರ್ ಆರಂಭವಾಗಲಿದೆ ಎಂದು ಮಾಹಿತಿ ನೀಡಲಾಗಿತ್ತು.
ಇದೀಗ, ಸರ್ಪ್ರೈಸ್ ಎಂಬಂತೆ ಹೊಂಬಾಳೆ ಫಿಲಂಸ್ ಮತ್ತೊಂದು ಹೊಸ ಪ್ರಾಜೆಕ್ಟ್ ಘೋಷಿಸುತ್ತಿದೆ. ವಿಜಯ್ ಕಿರಗಂದೂರ್ ನಿರ್ಮಾಣದಲ್ಲಿ ತಯಾರಾಗಲಿರುವ ಏಂಟನೇ ಚಿತ್ರವನ್ನು ಡಿಸೆಂಬರ್ 17 ರಂದು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದೆ. ಡಿಸೆಂಬರ್ 17 ರಂದು ಕನ್ನಡದ ಖ್ಯಾತ ನಟರೊಬ್ಬರ ಹುಟ್ಟುಹಬ್ಬವಿದ್ದು, ಬಹುಶಃ ಆ ವಿಶೇಷವಾಗಿ ಈ ಸಿನಿಮಾ ಘೋಷಣೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ....
'ಸಲಾರ್' ಬಳಿಕ ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೊಂದು ಹೊಸ ಸಿನಿಮಾ; ನಾಯಕ ಯಾರು?

ಡಿಸೆಂಬರ್ 17 ರಂದು ಶ್ರೀಮುರಳಿ ಹುಟ್ಟುಹಬ್ಬ
ಡಿಸೆಂಬರ್ 17 ರಂದು ರೋರಿಂಗ್ ಸ್ಟಾರ್ ಶ್ರೀಮುರಳಿಯ ಹುಟ್ಟುಹಬ್ಬ. ಅದೇ ದಿನ ಹೊಂಬಾಳೆ ಫಿಲಂಸ್ ಹೊಸ ಪ್ರಾಜೆಕ್ಟ್ ಘೋಷಣೆ ಮಾಡುವುದಾಗಿ ಹೇಳಿದೆ. ಹಾಗಾಗಿ, ಈ ಚಿತ್ರಕ್ಕೆ ಶ್ರೀಮುರಳಿ ಅವರೇ ನಾಯಕರಾಗಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಎರಡು ಪ್ರಾಜೆಕ್ಟ್ ಘೋಷಣೆ?
ಶ್ರೀಮುರಳಿಯ ಹುಟ್ಟುಹಬ್ಬಕ್ಕೆ ಮದಗಜ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಇದರ ಜೊತೆ ಹೊಸ ಎರಡು ಪ್ರಾಜೆಕ್ಟ್ ಘೋಷಣೆಯಾಗಲಿದೆ ಎಂಬ ಸುದ್ದಿಯೂ ಹರಿದಾಡಿದೆ. ಈ ಎರಡು ಚಿತ್ರಗಳನ್ನು ದೊಡ್ಡ ಬ್ಯಾನರ್ ನಿರ್ಮಾಣ ಮಾಡಲಿದೆಯಂತೆ. ಸದ್ಯಕ್ಕೆ ನಿರ್ದೇಶಕ, ನಿರ್ಮಾಪಕ ಯಾರೆಂದು ತಿಳಿದಿಲ್ಲ. ಇಂತಹ ಸಮಯದಲ್ಲಿ ಹೊಂಬಾಳೆ ಫಿಲಂಸ್ ಅದೇ ದಿನದಲ್ಲಿ ಹೊಸ ಪ್ರಾಜೆಕ್ಟ್ ಪ್ರಕಟಿಸುತ್ತಿರುವುದು ಸಂಬಂಧ ಕಲ್ಪಿಸಿದೆ.
Big News: ಪ್ರಭಾಸ್ ಹೀರೋ ಎಂದು ಘೋಷಿಸಿದ ಹೊಂಬಾಳೆ ಫಿಲಂಸ್

ಉಗ್ರಂವೀರಂ?
ಉಗ್ರಂ ಸಿನಿಮಾದ ಯಶಸ್ಸಿನ ಬಳಿಕ ಉಗ್ರಂವೀರಂ ಎಂಬ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಬಹಳ ದಿನದಿಂದಲೂ ಹೇಳಲಾಗುತ್ತಿದೆ. ಆ ಚಿತ್ರವನ್ನು ಪ್ರಶಾಂತ್ ನೀಲ್ ಅವರೇ ನಿರ್ದೇಶನ ಸಹ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಇದೆ. ಆದರೆ, ಈ ಪ್ರಾಜೆಕ್ಟ್ ಕುರಿತಂತೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

ಮದಗಜ ಚಿತ್ರದಲ್ಲಿ ಶ್ರೀಮುರಳಿ
ಪ್ರಸ್ತುತ ನಟ ಶ್ರೀಮುರಳಿ ಮದಗಜ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಶ್ರೀಮುರಳಿಗೆ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಯುವರತ್ನ' ಬಿಡುಗಡೆಗೆ ಸಜ್ಜು
ಕೆಜಿಎಫ್ ಚಾಪ್ಟರ್ 2 ಕೊನೆಯ ಹಂತದಲ್ಲಿದೆ. ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‌ನಲ್ಲಿ ತಯಾರಾಗಿರುವ ಯುವರತ್ನ ಚಿತ್ರವನ್ನು ಹೊಂಬಾಳೆ ಫಿಲಂಸ್ ಬಂಡವಾಳ ಹಾಕಿದೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ರಾಜಕುಮಾರ, ಯುವರತ್ನ ಬಳಿಕ ಮತ್ತೊಮ್ಮೆ ಈ ಕಾಂಬಿನೇಷನ್ ಒಟ್ಟಾಗಲಿದೆ. ಇದೀಗ, ಏಂಟನೇ ಸಿನಿಮಾ ಯಾವುದು ಎಂಬ ಕುತೂಹಲ ಹೆಚ್ಚಿದೆ.