For Quick Alerts
  ALLOW NOTIFICATIONS  
  For Daily Alerts

  ಹಲವರೊಂದಿಗೆ ದೈಹಿಕ ಸಂಪರ್ಕ...ನಿಜ ಎಂದ ತಾರೆ

  By ರವಿಕಿಶೋರ್
  |

  ಈ ರೀತಿ ಎಗ್ಗು ಸಿಗ್ಗಿಲ್ಲದಂತೆ ಹೇಳಿಕೊಂಡಿದ್ದಾರೆ ಬಾಲಿವುಡ್ ಹಾಟ್ ತಾರೆ ಶೆರ್ಲಿನ್ ಚೋಪ್ರಾ. ಇತ್ತೀಚೆಗೆ ಈಕೆ ವಯಸ್ಕರ ಪತ್ರಿಕೆ 'ಪ್ಲೇಬಾಯ್' ಗಾಗಿ ತಮ್ಮ ತುಂಬಿದ ಯೌವನವನ್ನು ಧಾರೆ ಎರೆದಿದ್ದರು. ಈಕೆಯ ದಿಗಂಬರ ಅವತಾರವನ್ನು ನೋಡಿದ ಬಾಲಿವುಡ್ ಚಿತ್ರಜಗತ್ತು ಒಮ್ಮೆಲೆ ಬೆಚ್ಚಿಬಿದ್ದಿತ್ತು.

  ಬಾಲಿವುಡ್ ನ ಮತ್ತೊಬ್ಬ ಕನ್ಯಾಮಣಿ ಪೂನಂ ಪಾಂಡೆಯಂತೆ ಈಕೆ ಕೂಡ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಇಲ್ಲಸಲ್ಲದ ಸುದ್ದಿಗಳನ್ನು ಹಾಕುತ್ತಾ ಕೆಣಕುತ್ತಿದ್ದಾರೆ. ಈಗ ಶೆರ್ಲಿನ್ ಹೇಳಿರುವುದೇನೆಂದರೆ, ಒಂದು ಕಾಲದಲ್ಲಿ ತಾನು ಹಲವರೊಂದಿಗೆ ಹಾಸಿಗೆ ಹಂಚಿಕೊಂಡಿದ್ದೇನೆ. ಆದರೆ ಅದು ದುಡ್ಡಿಗಾಗಿ ಎಂಬ ಸತ್ಯವನ್ನು ಹೇಳಿಕೊಂಡಿದ್ದಾರೆ.

  "ಈ ರೀತಿ ಹೇಳಿಕೊಳ್ಳುತ್ತಿರುವುದು ಯಾವುದೇ ಸಾರ್ವಜನಿಕ ಅನುಕಂಪಕ್ಕಾಗಲಿ ಅಥವಾ ಯಾರನ್ನಾದರೂ ಹುಬ್ಬೇರಿಸುವುದಾಗಲಿ ಅಥವಾ ಕೆಟ್ಟ ಹುಡುಗಿ ಒಳ್ಳೆಯಳಾದಳು ಎನ್ನಿಸಿಕೊಳ್ಳಲಾಗಲಿ ಅಲ್ಲವೇ ಅಲ್ಲ. ಕೆಲವೊಂದು ವಿಷಯಗಳನ್ನು ಹೇಳಬೇಕಾಗಿತ್ತು ಅಷ್ಟೇ. ಅದಕ್ಕಾಗಿ ಹೇಳುತ್ತಿದ್ದೇನೆ" ಎಂದಿದ್ದಾರೆ.

  ದುಡ್ಡಿಗಾಗಿ ಈ ಕೆಟ್ಟ ಕೆಲಸವನ್ನು ಮಾಡಿದ್ದೇನೆ. ಆದರೆ ಈಗ ತಾನು ಒಂದು ಹಂತಕ್ಕೆ ತಲುಪಿದ್ದೇನೆ. ಈಗ ಆ ರೀತಿಯ ಕೆಟ್ಟ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಈಗ ತಾಗು ಕ್ಲೀನ್ ಎಂದಿದ್ದಾರೆ. ಈ ಬಗ್ಗೆ ಆಕೆಯ ಫಾಲೋವರ್ಸ್ ಕೂಡ ಬೆನ್ನುತಟ್ಟಿದ್ದಾರೆ.

  ಮಾಡಿದ ತಪ್ಪನ್ನು ಒಪ್ಪಿಕೊಂಡಿರುವುದು ನಿಜಕ್ಕೂ ಗ್ರೇಟ್. ನಿಮ್ಮ ಈ ಭಂಡ ಧೈರ್ಯಕ್ಕೆ ತಾವು ಸಲ್ಯೂಟ್ ಮಾಡುತ್ತೇವೆ ಎಂದಿದ್ದಾರೆ ಕೆಲವರು. ಇನ್ನೂ ಕೆಲವರು, ತುಂಬಾ ಬೋಲ್ಡ್ ಗರ್ಲ್ ತಾವು, ಒಳ್ಳೆಯದಾಗಲಿ ಎಂದಿದ್ದಾರೆ.

  "ತಾನು ಬೋಲ್ಡ್ ಆಗಿ ಇರಲು ಇಷ್ಟಪಡುತ್ತೇನೆ. ಕಾಮಕೆರಳಿಸುವ ಛಾಯಾಚಿತ್ರಗಳಲ್ಲಿ ಹಾಗೂ ವಿಡಿಯೋಗಳಲ್ಲಿ ಕಾಣಿಸಿಕೊಳ್ಳಲು ಆನಂದಿಸುತ್ತೇನೆ. ಚುಡಾಯಿಸುವುದೆಂದರೆ ನಂಗಿಷ್ಟ. ಒಂದು ವೇಳೆ ತಡೆದುಕೊಳ್ಳಲಾರದಷ್ಟು ಕಾಮ ಬಯಕೆ ಅಥವಾ ಆಕರ್ಷಣೆ ಉಂಟಾದರೆ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತೇನೆ. ಆದರೆ ದುಡ್ಡಿಗಾಗಿ ಮಾತ್ರ ಇಲ್ಲ" ಎಂದು ಹೇಳಿದ್ದಾರೆ ಪೂರ್ಣವಿರಾಮವಿಟ್ಟಿದ್ದಾರೆ ಶೆರ್ಲಿನ್.

  English summary
  Bollywood hot sensational actress Sherlyn Chopra took Twitter to silent all those who were contacting her for having paid lovemaking. She has said that in the past she had physical intimacy with many for money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X