For Quick Alerts
  ALLOW NOTIFICATIONS  
  For Daily Alerts

  'ಮದಕರಿ ನಾಯಕ' ದರ್ಶನ್ ಗೆ ಜೋಡಿಯಾಗ್ತಾರಾ ಲೇಡಿ ಸೂಪರ್ ಸ್ಟಾರ್?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಜವೀರ ಮದಕರಿ ನಾಯಕ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಎರಡನೆ ಹಂತದ ಚಿತ್ರೀಕರಣ ಪ್ರಾರಂಭಿಸಿದೆ. ಸದ್ಯ ಚಿತ್ರತಂಡ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದೆ.

  ಎರಡನೆ ಹಂತದ ಚಿತ್ರೀಕರಣ ಪ್ರಾರಂಭವಾದರು ಚಿತ್ರತಂಡ ನಾಯಕಿಯ ಬಗ್ಗೆ ಯಾವುದೆ ಸುಳಿವು ಬಿಟ್ಟುಕೊಟ್ಟಿಲ್ಲ. ಮದಕರಿ ನಾಯಕನಿಗೆ ಯಾರು ಜೋಡಿಯಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಮದಕರಿ ನಾಯಕನಿಗೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

  ದರ್ಶನ್ 'ರಾಜವೀರ ಮದಕರಿ ನಾಯಕ' ಸೆಟ್‌ನಿಂದ ಹೊರಬಿದ್ದ ಲೇಟೆಸ್ಟ್ ಸುದ್ದಿದರ್ಶನ್ 'ರಾಜವೀರ ಮದಕರಿ ನಾಯಕ' ಸೆಟ್‌ನಿಂದ ಹೊರಬಿದ್ದ ಲೇಟೆಸ್ಟ್ ಸುದ್ದಿ

  ದರ್ಶನ್ ಗೆ ನಯನತಾರಾ ನಾಯಕಿ?

  ದರ್ಶನ್ ಗೆ ನಯನತಾರಾ ನಾಯಕಿ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಿಸ್ಟಾರಿಕಲ್ ಸಿನಿಮಾ 'ರಾಜ ವೀರ ಮದಕರಿ' ನಾಯಕ ಚಿತ್ರಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಚಿತ್ರತಂಡ ನಯನಾ ಜೊತೆ ಮಾತುಕತೆ ನಡೆಸಿದೆಯಂತೆ. ಆದರೆ ನಯನತಾರಾ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  ಈಗಾಗಲೆ ಕನ್ನಡದಲ್ಲಿ ಅಭಿನಯಿಸಿರುವ ನಯನತಾರಾ

  ಈಗಾಗಲೆ ಕನ್ನಡದಲ್ಲಿ ಅಭಿನಯಿಸಿರುವ ನಯನತಾರಾ

  ನಯನತಾರಾ ಈಗಾಗಲೆ ಕನ್ನಡದಲ್ಲಿ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಸಿನಿಮಾದಲ್ಲಿ ಬಣ್ಣಹಚ್ಚುವ ಮೂಲಕ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದರು. ಈಗ ಮದಕರಿ ನಾಯಕನಾಗಿ ಜೋಡಿಯಾದರೆ ಅನೇಕ ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ ಮೋಡಿ ಮಾಡಲಾದಿದ್ದಾರೆ.

  ಏಪ್ರಿಲ್ 9 ರ ಆಟ: ದರ್ಶನ್ ಗೆ ಎದುರು ಗೆಲ್ಲುತ್ತಾರಾ ವಿಜಯ್?ಏಪ್ರಿಲ್ 9 ರ ಆಟ: ದರ್ಶನ್ ಗೆ ಎದುರು ಗೆಲ್ಲುತ್ತಾರಾ ವಿಜಯ್?

  ಚಿತ್ರದಲ್ಲಿ ಇಬ್ಬರು ನಾಯಕಿಯರು

  ಚಿತ್ರದಲ್ಲಿ ಇಬ್ಬರು ನಾಯಕಿಯರು

  ಮದಕರಿ ನಾಯಕ ಚಿತ್ರದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ. ಇದುವರೆಗೂ ಈ ಇಬ್ಬರು ನಾಯಕಿಯ ಬಗ್ಗೆ ಯಾವುದೆ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಸದ್ಯ ನಯನತಾರಾ ಓರ್ವ ನಾಯಕಿಯಾಗಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮತ್ತೋರ್ವ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ. ಸದ್ಯ ಕನ್ನಡತಿ ಮೋಹಕ ತಾರೆ ರಮ್ಯಾ ಹೆಸರು ಕೂಡ ಬಲವಾಗಿ ಕೇಳಿ ಬರುತ್ತಿದೆ. ರಮ್ಯಾ ಮತ್ತೆ ವಾಪಸ್ ಆಗುತ್ತಾರಾ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

  ಕೊರೊನಾ ವೈರಸ್ ಎಫೆಕ್ಟ್: ರಾಬರ್ಟ್ ಸಿನಿಮಾ ಬಿಡುಗಡೆ ಮುಂದಕ್ಕೆ?ಕೊರೊನಾ ವೈರಸ್ ಎಫೆಕ್ಟ್: ರಾಬರ್ಟ್ ಸಿನಿಮಾ ಬಿಡುಗಡೆ ಮುಂದಕ್ಕೆ?

  ದರ್ಬಾರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಯನತಾರಾ

  ದರ್ಬಾರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಯನತಾರಾ

  ನಯನತಾರಾ ಇತ್ತೀಚಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಲ್ಲದೆ ತೆಲುಗುನಲ್ಲಿ ಸೈರಾ ಚಿತ್ರದಲ್ಲಿ ಮಿಂಚಿದ್ದರು. ಸದ್ಯ ಸೂಪರ್ ಸ್ಟಾರ್ ಅನ್ನಾತೆ ಚಿತ್ರಕ್ಕೂ ನಯನಾ ನಾಯಕಿ ಎಂದು ಹೇಳಲಾಗುತ್ತಿದೆ. ಸಾಕಷ್ಟು ಚಿತ್ರಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ನಯನಾ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಕಾದು ನೋಡಬೇಕು.

  English summary
  South Indian famous Actress Nayantara will be star opposite to Actor Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X