For Quick Alerts
  ALLOW NOTIFICATIONS  
  For Daily Alerts

  'ಬಾನದಾರಿಯಲ್ಲಿ' ಜಾರಿ ಬಂದ ಗಣಿಗೆ ಟಕ್ಕರ್ ಕೊಡುತ್ತಾ ಉಪ್ಪಿ 'ಕಬ್ಜ'? ಯುಗಾದಿಗೆ ಕಿಚ್ಚು ಹಚ್ಚೋದ್ಯಾರು?

  |

  ಸಂಕ್ರಾಂತಿ ಹೋಯ್ತು.. ಮುಂದೆ ಯುಗಾದಿ ಹಬ್ಬಕ್ಕೆ ಸ್ಯಾಂಡಲ್‌ವುಡ್ ಸಜ್ಜಾಗುತ್ತಿದೆ. ಈ ಹಬ್ಬದಂದು ಯಾವ ಸಿನಿಮಾ ರಿಲೀಸ್ ಮಾಡಬೇಕು ಅನ್ನೋ ವಿಚಾರಕ್ಕೆ ಈಗಾಗಲೇ ಚರ್ಚೆ ಆರಂಭ ಆಗಿದೆ. ಕನ್ನಡದ ಎರಡು ಸಿನಿಮಾಗಳು ಯುಗಾದಿಗೆ ಬಿಡುಗಡೆಯಾಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಿಂ ಗುಬ್ಬಿ ಕಾಂಬಿನೇಷನ್ ಸಿನಿಮಾ 'ಬಾನದಾರಿಯಲ್ಲಿ' ರಿಲೀಸ್ ಯುಗಾದಿ ಬರೋದು ಕನ್ಫರ್ಮ್ ಆಗಿದೆ. ಈಗಾಗಲೇ ಈ ತಂಡ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಇದೇ ವೇಳೆ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಬ್ಜ' ಕೂಡ ಇದೇ ವೇಳೆ ರಿಲೀಸ್‌ಗೆ ಸಿದ್ಧತೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ.

  Imdbಯಿಂದ 2023ಯ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್: ಲಿಸ್ಟ್‌ನಲ್ಲಿರೋ ಕನ್ನಡದ ಏಕೈಕ ಚಿತ್ರ 'ಕಬ್ಜ'!Imdbಯಿಂದ 2023ಯ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್: ಲಿಸ್ಟ್‌ನಲ್ಲಿರೋ ಕನ್ನಡದ ಏಕೈಕ ಚಿತ್ರ 'ಕಬ್ಜ'!

  2022ರಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ದಾಖಲೆ ಬರೆದಿದ್ದು ಗೊತ್ತೇ ಇದೆ. ಈ ವರ್ಷ ಕೂಡ ಸ್ಯಾಂಡಲ್‌ವುಡ್ ಅದೇ ಜಾದು ಮಾಡುತ್ತೆ ಅನ್ನೋ ನಿರೀಕ್ಷೆ ಇದೆ. ಸದ್ಯ ಈ ನಿರೀಕ್ಷೆಗಳನ್ನು ಹುಟ್ಟಾಕಿದ್ದು, ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಸಿನಿಮಾ 'ಕಬ್ಜ'. ಇದೇ 'ಕಬ್ಜ' ಯುಗಾದಿ ಹಬ್ಬಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ ಅನ್ನೋ ಮಾತು ಎಲ್ಲೆಡೆ ಓಡಾಡುತ್ತಿದೆ.

  'ಕಬ್ಜ' ಥಿಯೇಟರ್‌ಗೆ ಲಗ್ಗೆ ಇಡೋದ್ಯಾವಾಗ?

  'ಕಬ್ಜ' ಥಿಯೇಟರ್‌ಗೆ ಲಗ್ಗೆ ಇಡೋದ್ಯಾವಾಗ?

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ ಅನ್ನು ತೆರೆಮೇಲೆ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿರೋದು ನಿಜ. ಹಾಗಂತ ಕರ್ನಾಟಕ ಅಷ್ಟೇ ಅಲ್ಲ. ಭಾರತದಾದ್ಯಂತ ಈ ಸಿನಿಮಾ ರಿಲೀಸ್‌ ಡೇಟ್‌ ಅನ್ನೇ ಎದುರು ನೋಡುತ್ತಿರೋದು ಕೂಡ ಅಷ್ಟೇ ನಿಜ. ಆದರೆ, ನಿರ್ದೇಶಕ ಆರ್‌. ಚಂದ್ರು ಮಾತ್ರ ಇನ್ನೂ ರಿಲೀಸ್ ಡೇಟ್ ಅನ್ನು ಬಹಿರಂಗ ಪಡಿಸಿಲ್ಲ. ಅಷ್ಟರಲ್ಲೇ ಸ್ಯಾಂಡಲ್‌ವುಡ್‌ನಲ್ಲಿ 'ಕಬ್ಜ' ರಿಲೀಸ್ ಡೇಟ್‌ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿದೆ. ಯುಗಾದಿ ಹಬ್ಬಕ್ಕೆ ಒಂದು ವಾರ ಮುನ್ನ ಅಂದ್ರೆ, ಮಾರ್ಚ್ 17ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

  'ಕಬ್ಜ' ಟಾರ್ಗೆಟ್ ಯುಗಾದಿ ಹಬ್ಬ?

  'ಕಬ್ಜ' ಟಾರ್ಗೆಟ್ ಯುಗಾದಿ ಹಬ್ಬ?

  ಹಬ್ಬದಲ್ಲಿ ಸಿನಿಮಾ ರಿಲೀಸ್ ಮಾಡಿದರೆ, ಸಿನಿಮಾಗೆ ಅಡ್ವಾಂಟೆಜ್. ರಜೆಯಲ್ಲಿ ಮೂಡಿನಲ್ಲಿರೋ ಜನರು ಥಿಯೇಟರ್‌ಗೆ ಬರುತ್ತಾರೆ ಅನ್ನೋ ನಂಬಿಕೆ. ಅಲ್ಲದೆ ಹಬ್ಬದ ವೇಳೆ ರಿಲೀಸ್ ಕಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಮೋಡಿ ಮಾಡಿದೆ. ಈ ಕಾರಣಕ್ಕೆ ಆರ್ ಚಂದ್ರ ಎಂಡ್ ಯುಗಾದಿ ಹಬ್ಬವನ್ನೇ ಟಾರ್ಗೆಟ್ ಮಾಡಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಯುಗಾದಿ ಹಬ್ಬದ ಆಸುಪಾಸಿನಲ್ಲೇ ಮತ್ತೊಂದು ಸಿನಿಮಾ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದುವೇ 'ಬಾನದಾರಿಯಲ್ಲಿ'.

  ಗಣೇಶ್ Vs ಉಪ್ಪಿ?

  ಗಣೇಶ್ Vs ಉಪ್ಪಿ?

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಬಹಳ ದಿನಗಳ ಬಳಿಕ ಇದೇ ಕಾಂಬಿನೇಷನ್ ಮತ್ತೆ ಸಿನಿಪ್ರಿಯರ ಮುಂದೆ ಬರೋದಕ್ಕೆ ಸಜ್ಜಾಗಿದೆ. 'ಬಾನದಾರಿಯಲ್ಲಿ' ಅಂತ ಹೇಳುತ್ತಿರೋ ಗಣೇಶ್ ಮಾರ್ಚ್ 17ಕ್ಕೆ ರಿಲೀಸ್ ಅಂತಾನೂ ಅನೌನ್ಸ್ ಮಾಡಿದ್ದಾರೆ. ಈಗ ಇದೇ ದಿನ 'ಕಬ್ಜ' ಕೂಡ ರಿಲೀಸ್ ಅನ್ನೋ ಮಾತು ಕೇಳಿ ಬರುತ್ತಿದೆ. ಹಾಗೇನಾದರೂ 'ಕಬ್ಜ'ನೂ ಅನೌನ್ಸ್ ಆದರೆ, ಗಣೇಶ್ Vs ಉಪ್ಪಿ ಸನ್ನಿವೇಶ ಕ್ರಿಯೇಟ್ ಆಗೋದು ಪಕ್ಕಾ.

  'ಕಬ್ಬ' ಶೂಟಿಂಗ್ ಬಹುತೇಕ ಫಿನಿಶ್?

  'ಕಬ್ಬ' ಶೂಟಿಂಗ್ ಬಹುತೇಕ ಫಿನಿಶ್?

  ಆರ್ ಚಂದ್ರು 'ಕೆಜಿಎಫ್' ರೇಂಜ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರೇ ಹಣ ಹೂಡಿ, ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಈಗಾಗಲೇ ರಿಲೀಸ್ ಮಾಡಿರೋ ಚಿಕ್ಕದೊಂದು ತುಣುಕು ಪ್ರೇಕ್ಷಕರ ಗಮನವನ್ನೂ ಸೆಳೆದಿದೆ. ಆದರೆ, 'ಕಬ್ಜ' ಶೂಟಿಂಗ್ ಕಂಪ್ಲೀಟ್ ಆಗಿದೆಯಾ? ಇಲ್ಲಾ ಇನ್ನೂ ಬ್ಯಾಲೆನ್ಸ್ ಇದೆಯಾ? ಅನ್ನೋದು ಗೊತ್ತಾಗಬೇಕಿದೆ. ಅಲ್ಲದೆ ಇಂದು (ಜನವರಿ 20) ರಂದು ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಆರ್ ಚಂದ್ರು ಹೇಳಿದ್ದರು. ಹೀಗಾಗಿ ಡೇಟ್ ಅನೌನ್ಸ್ ಆಗುತ್ತಾ? ಅನ್ನೋ ಕುತೂಹಲವೂ ಇದೆ.

  English summary
  Kabzaa, starring Upendra Kichcha Sudeep, may be released on March 17th, opposite Ganesh, Know More.
  Friday, January 20, 2023, 12:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X