For Quick Alerts
  ALLOW NOTIFICATIONS  
  For Daily Alerts

  ಸದ್ದೇ ಇಲ್ಲದೆ ಎಂಗೇಜ್ ಆದರು ಕಾಜಲ್ ಅಗರ್ವಾಲ್

  |

  ಖ್ಯಾತ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ತಮ್ಮ ಸಿನಿಮಾಗಿಂತ ಹೆಚ್ಚಾಗಿ ಮದುವೆ ವಿಷಯಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ.

  35 ವರ್ಷದ ಕಾಜಲ್ ಅಗರ್ವಾಲ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ವಿಪರೀತ ಹರಿದಾಡಿತ್ತು. ಈಗಲೂ ಇದೇ ಸುದ್ದಿ ಹರಿದಾಡುತ್ತಿದ್ದು, ಕಾಜಲ್ ಅಗರ್ವಾಲ್‌ಗೆ ಮದುವೆ ನಿಶ್ಚಿತಾರ್ಥವಾಗಿದೆ ಎನ್ನಲಾಗಿದೆ.

  ಯುವ ನಟನೊಂದಿಗೆ ಕಾಜಲ್ ಅಗರ್ವಾಲ್ ಪ್ರೀತಿ-ಪ್ರೇಮ-ಪ್ರಣಯ!?ಯುವ ನಟನೊಂದಿಗೆ ಕಾಜಲ್ ಅಗರ್ವಾಲ್ ಪ್ರೀತಿ-ಪ್ರೇಮ-ಪ್ರಣಯ!?

  ಕಾಜಲ್ ಅಗರ್ವಾಲ್, ಗೌತಮ್ ಎಂಬುವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಹೀಗೆಂದು ತೆಲುಗು ಮಾಧ್ಯಮಗಳು ಹೇಳುತ್ತಿವೆ.

  ಮುಂಬೈ ಮೂಲದ ಗೌತಮ್ ಜೊತೆ ವಿವಾಹ?

  ಮುಂಬೈ ಮೂಲದ ಗೌತಮ್ ಜೊತೆ ವಿವಾಹ?

  ಕಾಜಲ್ ಅಗರ್ವಾಲ್ ಪೋಷಕರೇ ಹುಡುಕಿದ ಹುಡುಗನೊಂದಿಗೆ ಕೆಲವೇ ಆಪ್ತರ ಸಮ್ಮುಖದಲ್ಲಿ ಕಾಜಲ್ ಅಗರ್ವಾಲ್ ಮದುವೆ ನಿಶ್ಚಿತಾರ್ಥ ಆಗಿದೆ ಎನ್ನಲಾಗುತ್ತಿದೆ. ಹುಡುಗನ ಹೆಸರು ಗೌತಮ್ ಎಂದಿದ್ದು, ಆತ ಮುಂಬೈ ಮೂಲದವನು ಎನ್ನುವ ಸುದ್ದಿ ಇದೆ.

  ಗುಟ್ಟಾಗಿ ಮುಗಿದಿದೆ ನಿಶ್ಚಿತಾರ್ಥ ಕಾರ್ಯ?

  ಗುಟ್ಟಾಗಿ ಮುಗಿದಿದೆ ನಿಶ್ಚಿತಾರ್ಥ ಕಾರ್ಯ?

  ಕಾಜಲ್ ಅಗರ್ವಾಲ್ ಮದುವೆಗೆಂದು ಅವರ ಪೋಷಕರು ಗಂಡು ಹುಡುಕುತ್ತಿರುವ ಸುದ್ದಿ ಈ ಹಿಂದೆ ವರದಿಯಾಗಿತ್ತು. ಕೆಲವು ದಿನಗಳ ಹಿಂದಷ್ಟೆ ಕಾಜಲ್ ನಿವಾಸದಲ್ಲಿಯೇ ನಿಶ್ಚಿತಾರ್ಥ ಕಾರ್ಯ ಮುಗಿದಿದ್ದು, ಸಿನಿಮಾ ಉದ್ಯಮದ ಬಹುತೇಕರನ್ನು ದೂರವಿಟ್ಟು ನಿಶ್ಚಿತಾರ್ಥ ಮುಗಿಸಲಾಗಿದೆ.

  ಮದುವೆಗೆ ಸಜ್ಜಾದ ನಟಿ ಕಾಜಲ್ ಅಗರ್ ವಾಲ್: ಹುಡುಗ ಯಾರು?ಮದುವೆಗೆ ಸಜ್ಜಾದ ನಟಿ ಕಾಜಲ್ ಅಗರ್ ವಾಲ್: ಹುಡುಗ ಯಾರು?

  ಬೆಲ್ಲಂಕೊಂಡ ಶ್ರೀನಿವಾಸ್ ಭಾಗವಹಿಸಿದ್ದರು

  ಬೆಲ್ಲಂಕೊಂಡ ಶ್ರೀನಿವಾಸ್ ಭಾಗವಹಿಸಿದ್ದರು

  ಕಾಜಲ್ ಆಪ್ತ ಸ್ನೇಹಿತರಿಗೆ ಮಾತ್ರವೇ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು ಎನ್ನಲಾಗಿದ್ದು. ಕಾರ್ಯಕ್ರಮದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಸಹ ಭಾಗವಹಿಸಿದ್ದರಂತೆ. ಈ ಹಿಂದೆ ಕಾಜಲ್ ಹೆಸರು ಬೆಲ್ಲಂಕೊಂಡ ಶ್ರೀನಿವಾಸ್ ಜೊತೆ ಕೇಳಿಬಂದಿತ್ತು.

  ಎರಡು ಪ್ರಮುಖ ಸಿನಿಮಾದಲ್ಲಿ ನಟಿಸುತ್ತಿದ್ದಾರೆ

  ಎರಡು ಪ್ರಮುಖ ಸಿನಿಮಾದಲ್ಲಿ ನಟಿಸುತ್ತಿದ್ದಾರೆ

  ಸಿನಿಮಾ ವಿಷಯಕ್ಕೆ ಬರುವುದಾದರೆ ಕಾಜಲ್ ಅಗರ್ವಾಲ್ ಎರಡು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಮಲ್ ಹಾಸನ್ ಅಭಿನಯಿಸಿ ಶಂಕರ್ ನಿರ್ದೇಶಿಸುತ್ತಿರುವ ಇಂಡಿಯನ್ 2 ಹಾಗೂ ಬಾಲಿವುಡ್‌ನ ಮುಂಬೈ ಸಗಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಸಹನಟಿಯ ಸೌಂದರ್ಯವನ್ನು ಮನಸಾರೆ ಹೊಗಳಿದ ಸಮಂತಾಸಹನಟಿಯ ಸೌಂದರ್ಯವನ್ನು ಮನಸಾರೆ ಹೊಗಳಿದ ಸಮಂತಾ

  English summary
  Actress Kajal Agarwal engagement with businessman Gawtham.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X