»   » ವಿಷ್ಣು ಅಭಿಮಾನಿಗಳ ಮೇಲೆ ಗಣೇಶ್ ಕಣ್ಣು?

ವಿಷ್ಣು ಅಭಿಮಾನಿಗಳ ಮೇಲೆ ಗಣೇಶ್ ಕಣ್ಣು?

By: ಹರಾ
Subscribe to Filmibeat Kannada

ಇತ್ತೀಚೆಗಷ್ಟೆ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಜೆ.ಪಿ.ನಗರದ ಅವರ ಮನೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಮಳೆ ಹುಡುಗ ಬರ್ತಡೆ ಸೆಲೆಬ್ರೇಟ್ ಮಾಡಿಕೊಂಡರು.

ಗಣೇಶ್ ಗೆ ವಿಶ್ ಮಾಡೋಣ ಅಂತ ಅವರ ಮನೆಯ ಬಳಿ ತೆರಳಿದ ಕೆಲ ಫ್ಯಾನ್ಸ್ ಗೆ ಅಚ್ಚರಿ ಕೂಡ ಕಾದಿತ್ತು. ಆ ಅಚ್ಚರಿಯನ್ನ ಒಮ್ಮೆ ಈ ಫೋಟೋದಲ್ಲಿ ನೀವೂ ನೋಡಿಬಿಡಿ.

Kannada Actor Ganesh to attract Vishnuvardhan fans?

ಗಣೇಶ್ ಗೆ ಜನ್ಮದಿನದ ಶುಭಾಶಯ ಕೋರುವ ದೊಡ್ಡ ದೊಡ್ಡ ಪೋಸ್ಟರ್ ಗಳಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಕೂಡ ಇತ್ತು. ಹಾಗ್ನೋಡಿದ್ರೆ, ಅಂತಹ ಪೋಸ್ಟರ್ ಮತ್ತು ಬ್ಯಾನರ್ ಗಳನ್ನ ರೆಡಿಮಾಡಿರುವುದು ಗಣೇಶ್ ಅಭಿಮಾನಿ ಸಂಘದವರೇ. [ಚಿನ್ನದ ಹುಡುಗ ಗಣೇಶ್ ಅದೃಷ್ಟವಂತ.! ಯಾಕೆ ಗೊತ್ತಾ?]

Kannada Actor Ganesh to attract Vishnuvardhan fans?

'ಅಟೋ ರಾಜ' ಚಿತ್ರದಲ್ಲಿ 'ಕರಾಟೆ ಕಿಂಗ್' ಶಂಕರ್ ನಾಗ್ ಫ್ಯಾನ್ಸ್ ನ ಅಟ್ರ್ಯಾಕ್ಟ್ ಮಾಡಿದ್ದ ಗಣೇಶ್ ಈಗ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳನ್ನ ಸೆಳೆಯುವ ಪ್ರಯತ್ನ ಮಾಡ್ತಿದ್ದಾರಾ? ಈ ಬ್ಯಾನರ್ ಗಳನ್ನ ನೋಡಿದ್ರೆ, ಇಂತಹ ಅನುಮಾನ ಮೂಡುವುದು ಸಹಜ. [ಗಣೇಶ್ ಬರ್ತಡೆಗೆ 'ಬುಗುರಿ' ಟ್ರೈಲರ್ ಗಿಫ್ಟ್]

ಈಗಾಗಲೇ ಕಿಚ್ಚ ಸುದೀಪ್ 'ವಿಷ್ಣುವರ್ಧನ' ಅಂತ ಸಿನಿಮಾ ಮಾಡಿ ಜೂನಿಯರ್ ವಿಷ್ಣುವರ್ಧನ್ ಪಟ್ಟ ಪಡೆದಿದ್ದಾರೆ. ಇನ್ನೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಅಬ್ಬರಿಸಿ ಯಶ್ ಕೂಡ ವಿಷ್ಣು ದಾದಾ ಗೆಳೆಯರ ಬಳಗಕ್ಕೆ ಅಧಿಕೃತ ಎಂಟ್ರಿ ನೀಡಿದ್ದಾರೆ. ಇದೇ ಹಾದಿಯಲ್ಲಿ ಗಣೇಶ್ ಕೂಡ ಸಾಗಿದ್ರೆ ಅಚ್ಚರಿ ಇಲ್ಲ ಅನ್ನುತ್ತಾರೆ ಗಾಂಧಿನಗರದ ಪಂಡಿತರು.

English summary
Is Kannada Actor Ganesh trying to attract Late Dr.Vishnuvardhan fans? This question has arised among cine lovers when Dr.Vishnuvardhan photo was seen along with Ganesh in the posters during Golden Star's birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada