»   » ಕನ್ನಡದ ಅತ್ಯಂತ ದುಬಾರಿ ತಾರೆ ವೀಣಾ ಮಲಿಕ್

ಕನ್ನಡದ ಅತ್ಯಂತ ದುಬಾರಿ ತಾರೆ ವೀಣಾ ಮಲಿಕ್

Posted By:
Subscribe to Filmibeat Kannada

ಗಾಂಧಿನಗರಕ್ಕೆ ಅಡಿಯಿಟ್ಟಿರುವ ಪಾಕಿಸ್ತಾನದ ಐಟಂ ಬಾಂಬ್ ವೀಣಾ ಮಲಿಕ್ ಕನ್ನಡದ ಅತ್ಯಂತ ದುಬಾರಿ ತಾರೆಯಾಗಿ ಹೊರಹೊಮ್ಮಿದ್ದಾರೆ. 'ಡರ್ಟಿ ಪಿಕ್ಚರ್ : ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರಕ್ಕಾಗಿ ವೀಣಾಗೆ ಭಾರಿ ಸಂಭಾವನೇ ಸಿಕ್ಕಿದೆಯಂತೆ.

ಎಷ್ಟಿರಬಹುದು ಎಂಬ ಪ್ರಶ್ನೆಗೆ ಮಾತ್ರ ನಿಖರವಾದ ಉತ್ತರ ಸಿಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಚಿತ್ರತಂಡದ ಮಾತು ಇನ್ನೆತ್ತಲೋ ಹೊರಳುತ್ತದೆ. ಎಷ್ಟು ಕೊಟ್ಟಿದ್ದೀರಿ ಹೇಳ್ರಿ ಎಂದರೆ, ಭಾರಿ ಸಂಭಾವನೆಯನ್ನೇ ಕೊಟ್ಟಿದ್ದೀವಿ. ಎಷ್ಟು ಎಂಬುದನ್ನು ಬಹಿರಂಗಪಡಿಸಬಾರದು ಎಂದು ಮೇಡಂ ಕಟ್ಟಪ್ಪಣೆ ಮಾಡಿದ್ದಾರೆ ಎನ್ನುತ್ತಾರೆ.

ಹೇಳಿಕೇಳಿ ಈಕೆ ಪಾಕಿಸ್ತಾನಿ ನಟಿ. ಹಾಗಾಗಿ ಗಾಂಧಿನಗರದ ಗುಪ್ತಚರ ಇಲಾಖೆ ಈಕೆಯ ಚಲನವಲನಗಳ ಮೇಲೆ ಸಹಜವಾಗಿಯೇ ಒಂದು ಕಣ್ಣಿಟ್ಟಿದೆ. ಈಕೆ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಬಗ್ಗೆಯೂ ಒಂದು ಅಂದಾಜಿನ ಚಿತ್ರಣ ನೀಡುತ್ತದೆ.

ಅದೆಷ್ಟು ಎಂದರೆ, ರು.70ರಿಂದ 80 ಲಕ್ಷ ಇರಬಹುದು ಎಂಬುದು. ಅಂದರೆ ನಮ್ಮ ರಮ್ಯಾ, ರಾಗಿಣಿಯರ ಎರಡೂವರೆ ಚಿತ್ರಗಳ ಸಂಭಾವನೆ. ಇಷ್ಟೆಲ್ಲಾ ಸಂಭಾವನೆ ಕೊಟ್ಟರೂ ವರ್ಕ್‌ಔಟ್ ಆಗುತ್ತಾ ಎಂದರೆ ಚಿತ್ರದ ನಿರ್ಮಾಪಕರು ಖಂಡಿತ ಎನ್ನುತ್ತಾರೆ. ಹಾಕಿದ ದುಡ್ಡು ಬಂದೇ ಬರುತ್ತದೆ ಎಂಬ ವಿಶ್ವಾಸದಲ್ಲಿ ಅವರಿದ್ದಾರೆ.

ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ ಚಿತ್ರ ಇದಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ತ್ರಿಶೂಲ್. ಚಿತ್ರದ ಸಂಪೂರ್ಣ ಕತೆಯನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿ ವೀಣಾ ಮಲಿಕ್ ಕೈಗೆ ಕೊಟ್ಟಿದ್ದರಂತೆ ತ್ರಿಶೂಲ್. ಅದನ್ನು ಓದಿ ಬಹಳ ಇಂಪ್ರೆಸ್ ಆದೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ ಎನ್ನುತ್ತಾರೆ ಆಕೆ.

ಆದರೆ ಚಿತ್ರದಲ್ಲಿ ತಾವು ವೇಶ್ಯೆಯಾಗಿ ಕಾಣಿಸುತ್ತಿಲ್ಲ. ಈ ಪಾತ್ರಕ್ಕಾಗಿ ತೆಳ್ಳಗಿದ್ದ ವೀಣಾ ಕೊಂಚ ಮೈಕೈ ತುಂಬಿಕೊಂಡು ಕಾಣಿಸಲಿದ್ದಾರೆ. ಇದಕ್ಕಾಗಿ ತಮ್ಮ ದೇಹದ ತೂಕವನ್ನೂ 5 ಕೆ.ಜಿ ಹೆಚ್ಚಿಸಿಕೊಂಡಿದ್ದಾರಂತೆ. ಚಿತ್ರ ಹೇಗೆ ಬರುತ್ತದೆ ಎಂಬ ಬಗ್ಗೆ ಗಾಂಧಿನಗರದಲ್ಲಿ ಕುತೂಹಲ ಮೂಡಿದೆ. (ಏಜೆನ್ಸೀಸ್)

English summary
Pakistani actress Veena Malik becomes most expensive in Kannada. The buzz is that, the actress gets a whopping paycheck of Rs. 70 to 80 lakh per film Dirty Picture Silk Sakkath Hot Maga.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada