»   » 6-5=2 ಚಿತ್ರದ ನಿಜವಾದ ಛಾಯಾಗ್ರಾಹಕ ಕಣ್ಣೀರು

6-5=2 ಚಿತ್ರದ ನಿಜವಾದ ಛಾಯಾಗ್ರಾಹಕ ಕಣ್ಣೀರು

By: ಉದಯರವಿ
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ '6-5=2'. ಈ ಚಿತ್ರದಲ್ಲಿ ಬಳಸಿರುವುದು ನಿಜವಾದ ವಿಡಿಯೋ ಕ್ಲಿಪ್ಪಿಂಗ್ಸ್ ಎಂದು ಹೇಳಿ ಚಿತ್ರತಂಡ ನಂಬಿಸಿತ್ತು. 2010ರಲ್ಲಿ ಒಂದು ಕ್ಯಾಮೆರಾ ದೊರಕಿದ್ದು, ಆ ಕ್ಯಾಮೆರಾದ ಟೇಪನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ['6-5=2' ಚಿತ್ರದ ನಿಜವಾದ ಕಥೆ]

ಇದು ನಿಜವಾಗಿಯೂ ನಡೆದ ಘಟನೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಚಿತ್ರ ತೆರೆಕಂಡ ಸ್ವಲ್ಪ ದಿನಕ್ಕ್ಕೆ ಅದರ ಅಸಲಿ ಕಥೆ ಗೊತ್ತಾಯಿತು. ಇದೂ ಒಂದು ಕಾಲ್ಪನಿಕ ಚಿತ್ರ ಎಂಬುದನ್ನು ಪ್ರೇಕ್ಷಕರು ಅರ್ಥ ಮಾಡಿಕೊಂಡರು. ['6-5=2' ವಿಮರ್ಶೆ]

ಅಯ್ಯೋ ಸಿನಿಮಾ ಎನ್ನುವುದೇ ಒಂಥರಾ ಮೋಸ ಎಂದು ಕೆಲವರು ಸುಮ್ಮನಾದರು. ಇದಿಷ್ಟೆಲ್ಲಾ ಆಗುವಷ್ಟರಲ್ಲಿ ಚಿತ್ರ ರು.2 ಕೋಟಿ ಲಾಭ ಮಾಡಿಯಾಗಿತ್ತು. ಕೇವಲ ರು.30 ಲಕ್ಷದಲ್ಲಿ ನಿರ್ಮಿಸಿದ ಚಿತ್ರ ಇಷ್ಟೆಲ್ಲಾ ದುಡ್ಡು ಮಾಡಿದ್ದನ್ನು ಕಂಡ ಕನ್ನಡ ಚಿತ್ರೋದ್ಯಮ ಮೂಗಿನ ಮೇಲೆ ಬೆರಳಿಟ್ಟಕೊಂಡ್ತು. ಹಾಗಿದ್ದರೆ ಚಿತ್ರಕ್ಕೆ ವಿವಾದ ಯಾಕೆ ಸುತ್ತಿಕೊಳ್ತು. ಸ್ಲೈಡ್ ಗಳಲ್ಲಿ ಓದುತ್ತಾ ಹೋಗಿ.

ಚಿತ್ರದ ಛಾಯಾಗ್ರಾಹಕ ಚೆನ್ನೈ ಮೂಲದ ಮಗೇಶ್

ಆದರೆ ಈಗ ವಿವಾದ ಸೃಷ್ಟಿಯಾಗಿರೋದು ಈ ಮೇಲಿನ ಎಲ್ಲಾ ವಿಚಾರಗಳಿಗಾಗಿ ಅಲ್ಲವೇ ಅಲ್ಲ. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿರುವ ಚೆನ್ನೈ ಮೂಲದ ಮಗೇಶ್ ಎಂಬುವವರು. ಚಿತ್ರದ ಟೈಟಲ್ ಕಾರ್ಡ್ ನಲ್ಲಿ ತಮ್ಮ ಹೆಸರನ್ನು ತೋರಿಸಿಲ್ಲ. ಹಾಗೆಯೇ ಚಿತ್ರದ ನಿರ್ಮಾಪಕರು ತಮಗೆ ಬಾಕಿ ಹಣವನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಈ ಚಿತ್ರದ ನಿಜವಾದ ಹೀರೋ ಎಂದರೆ ಛಾಯಾಗ್ರಹಣ

ಈ ಸಂಬಂಧ ಅವರು ದಕ್ಷಿಣ ಭಾರತದ ಛಾಯಾಗ್ರಾಹಕರ ಸಂಘಕ್ಕೆ ದೂರು ನೀಡಿದ್ದಾರೆ. ದೂರಿನ ಒಂದು ಕಾಪಿಯನ್ನು ಕರ್ನಾಟಕ ಚಲನಚಿತ್ರ ತಂತ್ರಜ್ಞರು, ಕಾರ್ಮಿಕರ ಒಕ್ಕೂಟಕ್ಕೂ ಕಳುಹಿಸಿದ್ದಾರೆ. ಈ ಚಿತ್ರದ ನಿಜವಾದ ಹೀರೋ ಎಂದರೆ ಛಾಯಾಗ್ರಹಣ.

ಇನ್ನೂ ಬಾಕಿ ಹಣ ಕೊಟ್ಟಿಲ್ಲ ಎಂಬ ಆರೋಪ

6-5=2 ಚಿತ್ರಕ್ಕಾಗಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗೂ ಕೆಲಸ ಮಾಡಿದ್ದೇನೆ. ಈ ಚಿತ್ರಕ್ಕಾಗಿ ರು.1.50 ಲಕ್ಷ ಸಂಭಾವನೆಗಾಗಿ ಮಾತುಕತೆಯಾಗಿತ್ತು. ಆದರೆ ಚಿತ್ರದ ನಿರ್ಮಾಪಕರು ತಮಗೆ ಕೇವಲ ರು.55 ಸಾವಿರ ನೀಡಿ ಬಾಕಿ ಹಣ ನೀಡುವುದಾಗಿ ಹೇಳಿದ್ದರು. ಆದರೆ ಅವರು ತಮಗೆ ಇನ್ನೂ ಬಾಕಿ ಇರುವ ರು.95 ಸಾವಿರ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ಚಿತ್ರಕ್ಕೆ ಐಡಿಯಾ ಕೊಟ್ಟಿದ್ದೇ ನಾನು

ಆರಂಭದಲ್ಲಿ ಈ ಚಿತ್ರವನ್ನು ಕೇವಲ ರು.15 ಲಕ್ಷದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು, ಚಿತ್ರವನ್ನು ಹೇಗೆ ತರಬೇಕು, ಸಹಜ ಬೆಳಕಿನಲ್ಲೇ ಹೇಗೆ ಚಿತ್ರೀಕರಿಸಬಹುದು ಎಂಬ ಐಡಿಯಾಗಳನ್ನೆಲ್ಲಾ ನಾನೇ ಕೊಟ್ಟಿದ್ಫು ಎನ್ನುತ್ತಾರೆ ಮಗೇಶ್.

ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎನ್ನುತ್ತಿರುವ ಮಗೇಶ್

ಈಗ ಚಿತ್ರ ಲಾಭ ಮಾಡಿದೆ ತಮಗೆ ಕೊಡಬೇದಾದ ಬಾಕಿ ಹಣವನ್ನು ನೀಡಲಿ ಎಂಬುದು ಅವರ ಉದ್ದೇಶ. ಆದರೆ ಈ ಬಗ್ಗೆ ನಿರ್ಮಾಪಕರ ಕಡೆಯಿಂದ ಇನ್ನೂ ಉತ್ತರ ಸಿಕ್ಕಿಲ್ಲ. ಇಷ್ಟಕ್ಕೂ ಈ ಚಿತ್ರದ ಛಾಯಾಗ್ರಾಹಕ ತಾವೇ ಎಂಬ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎನ್ನುತ್ತಾರೆ ಮಗೇಶ್.

English summary
Kannada movie 6-5=2 (six minus five equals two) lands in fresh controvesy. Chennai based cinematographer lodged a complained against the producer and director of the film 6-5=2. He is the original cameraman of the hit film but has been denied a name in the title card as well as denied his payment.
Please Wait while comments are loading...