For Quick Alerts
  ALLOW NOTIFICATIONS  
  For Daily Alerts

  'ಉಳಿದವರು ಕಂಡಂತೆ' ಚಿತ್ರದಲ್ಲಿ ರಾತ್ರಿ ಏನಾಯಿತು?

  By ಜೀವನರಸಿಕ
  |

  ಅವರು ಯಾಕೆ ಹಾಗೆ ಮಾಡಿದರು ಅನ್ನೋ ಕುತೂಹಲ ನಿಮ್ಗೂ ಇರುತ್ತೆ. ಇದು 'ಉಳಿದವರು ಕಂಡಂತೆ' ಚಿತ್ರತಂಡದ ಕುಂಬಳಕಾಯಿ ಕಥೆ. ಸಿನಿಮಾದ ಶೂಟಿಂಗ್ ಮುಗಿದ ಮೇಲೆ ಚಿತ್ರತಂಡ ಉಳಿದವರಿಗೂ ಕಾಣುವಂತೆ ಮಾಧ್ಯಮದವರನ್ನು ಕರೆಸಿ ಕುಂಬಳಕಾಯಿ ಒಡೆದು ಶೂಟಿಂಗ್ ಮುಗೀತು ಅಂತಾರೆ.

  ಆದರೆ ಉಳಿದವರು ಕಂಡಂತೆ ಚಿತ್ರತಂಡ ಇತ್ತೀಚೆಗೆ ರಾತ್ರಿ 3.30ಕ್ಕೆ ಚಿತ್ರದ ಕುಂಬಳಕಾಯಿ ಒಡೆದಿದೆ. ಅಂದಹಾಗೆ ಇದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯ ರಕ್ಷಿತ್ ಶೆಟ್ಟಿ, ಟಿವಿ9 ಕನ್ನಡ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ಅಭಿನಯದ ಚಿತ್ರದ ಕಥೆ.

  ಹಾಗಂತ ಏನನ್ನೋ ಮುಚ್ಚಿಡೋದಕ್ಕೆ ಹೀಗೆ ಚಿತ್ರತಂಡ ಹೀಗೆ ಮಾಡಿಲ್ಲ. ಚಿತ್ರದ ಶೂಟಿಂಗ್ ಮುಗಿಯುವಾಗಲೇ ಬೆಳಗಿನ ಜಾವ 3 ಗಂಟೆಯಾಗಿದೆ.

  ಆಮೇಲೆ ಇಡೀ ಚಿತ್ರತಂಡ ಫೋಟೋ ತೆಗಿಸಿಕೊಂಡು ಎಂಜಾಯ್ ಮಾಡಿ. ಕೊನೆಯ ದಿನವನ್ನ ಖುಷಿಯನ್ನ ಬೆಳ್ಳಂಬೆಳಗ್ಗೆ ಆಚರಿಸಿಕೊಂಡಿದೆ.

  ಬಳಿಕ ಚಿತ್ರತಂಡದ ಎಲ್ಲರೂ ಚುಮುಚುಮು ಮುಂಜಾನೆ ಮನೆ ಸೇರಿಕೊಂಡಿದ್ದಾರೆ. ಇಷ್ಟಕ್ಕೂ ಸದ್ಯಕ್ಕೆ ಚಿತ್ರದ ಕಥೆಯ ಬಗ್ಗೆಯೂ ಏನನ್ನೂ ಬಿಟ್ಟುಕೊಡದ ಚಿತ್ರತಂಡ ಈಗ ಬೆಳ್ಳಂಬೆಳಗ್ಗೆ ಕುಂಬಳಕಾಯಿ ಒಡೆದು ಅಲ್ಲೂ ಉಳಿದವರಿಗೆ ಕಾಣದಂತೆ ಶೂಟಿಂಗ್ ಮುಗಿಸಿದೆ.

  ಉಳಿದಂತೆ 'ಉಳಿದವರು ಕಂಡಂತೆ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವವರು ನಟ ರಕ್ಷಿತ್ ಶೆಟ್ಟಿ. ಕರಮ್ ಚಾವ್ಲಾ ಛಾಯಾಗ್ರಹಣ, ಅಜಿನೀಷ್ ಸಂಗೀತ, ಸಚಿನ್ ಸಂಕಲನ ಈ ಚಿತ್ರಕ್ಕಿದೆ. ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ ಅಚ್ಯುತ್ ಕುಮಾರ್, ತಾರಾ, ಚಿತ್ರಾ, ರಿಷಬ್ ಶೆಟ್ಟಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿ ಇದ್ದಾರೆ.

  English summary
  Simple Aag Ond Love Story fame Rakshit Shetty directed 'Ulidavaru Kandante' had completed its shooting. Kishore, Rakshit Shetty, Achyuta, Rishab, Tara, Sheetal, Yajna Shetty, Dinesh Mangaluru and others are in cast. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X