»   » ಕನ್ನಡದ ಪ್ರಮುಖ 5 ಲಕ್ಷಾಧೀಶ ನಟಿಯರ ಸಂಭಾವನೆ ಎಷ್ಟು?

ಕನ್ನಡದ ಪ್ರಮುಖ 5 ಲಕ್ಷಾಧೀಶ ನಟಿಯರ ಸಂಭಾವನೆ ಎಷ್ಟು?

Posted By:
Subscribe to Filmibeat Kannada

ಕೋಟಿಗಿಂತ ಹೆಚ್ಚು ಮತ್ತು ಕೋಟಿಗಿಂತ ಕಮ್ಮಿ (ಅಂದಾಜು) ಸಂಭಾವನೆ ಪಡೆಯುವ ನಮ್ಮ ನಾಯಕ ನಟರ ಬಗ್ಗೆ ತಿಳಿದುಕೊಂಡಿದ್ದಾಯಿತು. ಇನ್ನು ನಮ್ಮ ಪ್ರಮುಖ ನಾಯಕ ನಟಿಯರ ಸಂಭಾವನೆ ಎಷ್ಟಿರಬಹುದು ಎನ್ನುವುದರ ಬಗ್ಗೆ ಕಣ್ಣು ಹಾಯಿಸೋಣ..

ಕನ್ನಡ ಚಿತ್ರರಂಗ ಮತ್ತೆ ಪುಟಿದೆದ್ದಿದೆ, ಹಾಗಾಗಿ ನಟ/ನಟಿಯರ ಮುಖಾರವಿಂದದಲ್ಲೂ ನಗು ಮೂಡಿಸಿದೆ. ಆದರೆ ನಿರ್ಮಾಪಕರ ಮುಖಾರವಿಂದಲ್ಲಿ ಯಾವ ನಗು ಮೂಡಿಸಿದೆಯೋ?

ದಕ್ಷಿಣಭಾರತದ ಇತರ ಭಾಷೆಗಳಿಗೆ ಹೋಲಿಸಿದರೆ ಪ್ರಮುಖವಾಗಿ ತೆಲುಗು, ತಮಿಳು ನಟಿಯರ ಸಂಭಾವನೆ ಕೋಟಿ ಲೆಕ್ಕದಲ್ಲಿ ಇದ್ದರೂ ಕನ್ನಡ ಸಣ್ಣ ಮಾರುಕಟ್ಟೆ ಯಾಗಿರುವುದರಿಂದ ಸಂಭಾವನೆ ಇದುವರೆಗೆ ಯಾವ ನಟಿಯರಿಗೆ ಕೋಟಿ ಇನ್ನೂ ದಾಟಿಲ್ಲ.

ಕೆಲವೊಂದು ನಮ್ಮ ನಟಿಯರು ಚಿತ್ರದಲ್ಲಿ ನಟಿಸಿದರೂ ಸುದ್ದಿ, ನಟಿಸದಿದ್ದರೂ ಸುದ್ದಿ, ಚಿತ್ರೀಕರಣದಲ್ಲಿದ್ದಾಗಲೂ ಸುದ್ದಿ. ನಮ್ಮ ಪ್ರಮುಖ ಐದು ನಟಿಯರ ಸಂಭಾವನೆ ಎಷ್ಟಿರಬಹುದು ಮುಂದೆ ಸ್ಲೈಡಿನಲ್ಲಿ ನೋಡಿ (ಇದು ಅವರವರ ಮಾರುಕಟ್ಟೆಯ ಅಂದಾಜು ಸಂಭಾವನೆ ಪಟ್ಟಿ, ಕರಾರುವಕ್ಕಾದ ಮಾಹಿತಿಯಲ್ಲ).

ಕನ್ನಡದ ಆರು ಕೋಟ್ಯಾಧಿಪತಿ ನಾಯಕ ನಟರು

ಲಕ್ಷ ಸಂಭಾವನೆ ಪಡೆಯುವ ನಮ್ಮ 'ಲಕ್ಷಾಧೀಶ' ನಟರು

ಗೋಲ್ಡನ್ ಗರ್ಲ್ ರಮ್ಯಾ

29.11.79ರಲ್ಲಿ ಜನಿಸಿದ 33 ವರ್ಷದ ರಮ್ಯಾ 2003ರಲ್ಲಿ ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದುವರೆಗೆ ಕನ್ನಡ, ತೆಲುಗು ಮತ್ತು ತಮಿಳು ಸೇರಿ ಸುಮಾರು 37 ಚಿತ್ರಗಳಲ್ಲಿ ರಮ್ಯಾ ನಟಿಸಿದ್ದಾರೆ. ಚಿತ್ರವೊಂದಕ್ಕೆ ರಮ್ಯಾ ಸಂಭಾವನೆ 45 ರಿಂದ 50 ಲಕ್ಷ.

ರಾಗಿಣಿ ದ್ವಿವೇದಿ

ಕನ್ನಡ ಚಿತ್ರರಂಗದ ಬಿಂದಾಸ್ ನಟಿ ರಾಗಿಣಿ ಜನಿಸಿದ್ದು 24.05.90 ರಲ್ಲಿ. 2009 ರಲ್ಲಿ ಸುದೀಪ್ ಅಭಿನಯದ ವೀರ ಮದಕರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಗಿಣಿ ಇದುವರೆಗೆ ಕನ್ನಡ, ಮಲಯಾಳಂ ಮತ್ತು ತಮಿಳು ಸೇರಿ ಒಟ್ಟು 17 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಸಂಭಾವನೆ 20 ರಿಂದ 30 ಲಕ್ಷ.

ರಾಧಿಕಾ ಪಂಡಿತ್

ಪ್ರತಿಭಾನ್ವಿತ ನಟಿ ರಾಧಿಕಾ ಹುಟ್ಟಿದ್ದು 07.03.80 ರಲ್ಲಿ. 2008 ರಲ್ಲಿ ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ರಾಧಿಕಾ ಇದುವರೆಗೆ ಕನ್ನಡದ 12 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಸಂಭಾವನೆ 15 ರಿಂದ 20 ಲಕ್ಷ.

ಐಂದ್ರಿತಾ ರೇ

ಐಂದ್ರಿತಾ ಹುಟ್ಟಿದ್ದು ರಾಜಸ್ಥಾನದ ಉದಯಪುರದಲ್ಲಿ 04.04.85 ರಂದು. 2008 ರಲ್ಲಿ ಮಹೇಶ್ ಬಾಬು ನಿರ್ದೇಶನದ ಮೆರವಣಿಗೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಐಂದ್ರಿತಾ ಇದುವರೆಗೆ ಕನ್ನಡ ಮತ್ತು ಒಂದು ಹಿಂದಿ ಚಿತ್ರ ಸೇರಿ ಒಟ್ಟು 17 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಸಂಭಾವನೆ 15 ರಿಂದ 20 ಲಕ್ಷ.

ಪೂಜಾ ಗಾಂಧಿ

ಪೂಜಾ ಗಾಂಧಿ ಹುಟ್ಟಿದ್ದು 07.10.83 ರಂದು ಪಂಜಾಬಿನ ಪೌರಾತ್ ನಗರದಲ್ಲಿ. 2003 ರಲ್ಲಿ ತೊಮಕೆ ಸಲಾಂ ಎನ್ನುವ ಬೆಂಗಾಳಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಭಟ್ರ ಮುಂಗಾರು ಮಳೆ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಮಳೆ ಹುಡುಗಿ ಇದುವರೆಗೆ ಕನ್ನಡ, ಬೆಂಗಾಳಿ, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿ ಒಟ್ಟು 41 ಚಿತ್ರದಲ್ಲಿ ನಟಿಸಿದ್ದಾರೆ. 18.01.12 ರಲ್ಲಿ ಜೆಡಿಎಸ್ ಪಕ್ಷ ಸೇರಿದ್ದ ಪೂಜಾ ಈಗ ಯಡಿಯೂರಪ್ಪನವರ ಕೆಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಸಂಭಾವನೆ 15 ರಿಂದ 20 ಲಕ್ಷ.

English summary
Top Five Sandalwood actresses remuneration details. 
Please Wait while comments are loading...