For Quick Alerts
  ALLOW NOTIFICATIONS  
  For Daily Alerts

  ಯುವರಾಜ್ ಸಿಂಗ್ ಜೊತೆ ಕಿರಿಕ್: ಸಿನಿಮಾ ಕೈಬಿಟ್ಟ ಕರಣ್ ಜೋಹರ್!

  |

  ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡುವೆ ಸಿನಿಮಾ ಒಂದಕ್ಕೆ ಸಂಬಂಧಿಸಿದಂತೆ ಕಿರಿಕ್ ಆಗಿದ್ದು ಕರಣ್ ಜೋಹರ್ ತಾವು ನಿರ್ಮಿಸಲಿದ್ದ ಸಿನಿಮಾವನ್ನು ಕೈಬಿಟ್ಟಿದ್ದಾರೆ.

  ಕ್ರಿಕೆಟಿಗ ಯುವರಾಜ್ ಸಿಂಗ್ ಜೀವನ ಆಧರಿಸಿದ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಲಿದ್ದರು ಆದರೆ ಯುವರಾಜ್ ಸಿಂಗ್ ಮಾಡಿದ ಡಿಮ್ಯಾಂಡ್‌ನಿಂದಾಗಿ ಕರಣ್ ಜೋಹರ್ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ.

  ತಮ್ಮ ಜೀವನ ಆಧರಿಸಿದ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಬಾಲಿವುಡ್‌ನ ಎ ಸ್ಟಾರ್ ನಟನೇ ಮಾಡಬೇಕೆಂದು ಯುವರಾಜ್ ಸಿಂಗ್ ಪಟ್ಟು ಹಿಡಿದಿದ್ದಾರೆ. ಆದರೆ ಇದು ಕರಣ್ ಜೋಹರ್‌ಗೆ ಇಷ್ಟವಾಗಿಲ್ಲ ಹಾಗಾಗಿ ಸಿನಿಮಾ ನಿರ್ಮಾಣದಿಂದಲೇ ಹಿಂದೆ ಸರಿದಿದ್ದಾರೆ.

  ತಮ್ಮ ಪಾತ್ರವನ್ನು ರಣ್ವೀರ್ ಸಿಂಗ್ ಅಥವಾ ರಣ್ಬೀರ್ ಕಪೂರ್ ಅವರೇ ನಟಿಸಬೇಕು ಎಂದು ಯುವರಾಜ್ ಸಿಂಗ್ ಒತ್ತಾಯ ಮಾಡಿದ್ದಾರೆ. ಆದರೆ ಕರಣ್ ಜೋಹರ್‌ ಬಂಡವಾಳ ಸಮಸ್ಯೆಗಳನ್ನು ಮುಂದೆ ಮಾಡಿ ಅವರಿಬ್ಬರೂ ಬೇಡ ಎಂದು ಯುವನಟನ ಹೆಸರನ್ನು ಸೂಚಿಸಿದ್ದಾರೆ ಆದರೆ ಇದಕ್ಕೆ ಯುವರಾಜ್ ಸಿಂಗ್ ಒಪ್ಪಿಲ್ಲ.

  ಈಗಾಗಲೇ ನಾಲ್ವರು ಕ್ರಿಕೆಟರ್‌ಗಳ ಜೀವನ ಸಿನಿಮಾ ಆಗಿದೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜೀವನ ಕುರಿತು ಮಿಲಿಯನ್ ಡಾಲರ್ ಡ್ರೀಮ್ ಹೆಸರಿನ ಡಾಕ್ಯುಮೆಂಟರಿ ಮಾದರಿಯ ಸಿನಿಮಾ, ಎಂಎಸ್ ಧೋನಿ ಜೀವನ ಆಧರಿಸಿದ ಅದೇ ಹೆಸರಿನ ಸಿನಿಮಾ ಹಾಗೂ ಮೊಹಮ್ಮದ್ ಅಜರುದ್ದೀನ್ ಕುರಿತು 'ಅಜರ್' ಹೆಸರಿನ ಸಿನಿಮಾ ಈಗಾಗಲೇ ತೆರೆಗೆ ಬಂದಿವೆ. ಕಪಿಲ್ ದೇವ್ ಜೀವನ ಕುರಿತ '83' ಹೆಸರಿನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

  ಯುವರಾಜ್ ಸಿಂಗ್ ಜೀವನ ಸಹ ಹಲವು ಏರಿತಗಳಿಂದ ಕೂಡಿದ್ದಾಗಿದೆ. ಬಾಲ್ಯವನ್ನು ಅಪ್ಪನ ಕಠು ಶಿಸ್ತಿನಲ್ಲಿ ಕಳೆದ ಯುವರಾಜ್ ಸಿಂಗ್ ರಣಜಿ ಆಡುವಾಗಲೇ ಕ್ರಿಕೆಟ್ ಸ್ಟಾರ್ ಆಗಿದ್ದರು. ರಾಷ್ಟ್ರೀಯ ತಂಡ ಸೇರಿದ ಮೇಲೆ ಅದ್ಭುತ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ತೋರಿದ ಯುವರಾಜ್, ಭಾರತೀಯ ಕ್ರಿಕೆಟ್‌ ತಂಡದ ಒಟ್ಟಾರೆ ಮನೋಭಾವ ಬದಲಾವಣೆಯಲ್ಲಿ ಮುಖ್ಯ ಕಾರಣಕರ್ತರಲ್ಲಿ ಒಬ್ಬರು.

  ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಯುವರಾಜ್ ಸಿಂಗ್, ಟೂರ್ನಿ ನಡೆಯುವಾಗಲೇ ಕ್ಯಾನ್ಸರ್‌ಗೆ ತುತ್ತಾದರು. ಕ್ಯಾನ್ಸರ್‌ ಜೊತೆ ಹೋರಾಟ ನಡೆಸಿ ವಾಪಸ್ ಬಂದ ಯುವರಾಜ್ ಭಾರತ ತಂಡಕ್ಕೆ ಆಯ್ಕೆ ಆಗಿ ಹಲವು ವರ್ಷಗಳು ಭಾರತಕ್ಕಾಗಿ ಆಡಿದರು. ಭಾರತ ಗೆದ್ದ ಒನ್‌ಡೇ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಎರಡರಲ್ಲೂ ಯುವರಾಜ್ ಸಿಂಗ್ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದರು. ಆದರೆ 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕಳಪೆ ಪ್ರದರ್ಶನ ತೋರಿ ಭಾರತದ ಸೋಲಿಗೆ ಕಾರಣರಾದರು.

  ಯುವರಾಜ್ ಸಿಂಗ್ ಜೀವನ ಸಿನಿಮಾ ಆಗಬೇಕು ಎಂದು ಹಲವರು ಮೊದಲಿನಿಂದಲೂ ಒತ್ತಾಯ ಮಾಡುತ್ತಲೇ ಇದ್ದರು. ಕರಣ್ ಜೋಹರ್ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡರಾದರೂ ಯುವರಾಜ್ ಜೊತೆಗಿನ ಅಭಿಪ್ರಾಯ ಭೇದದಿಂದ ಸಿನಿಮಾ ಈಗ ನಿಂತಿದೆ. ಮತ್ತೆ ಯಾರು ಆ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳುತ್ತಾರೊ, ಯುವರಾಜ್ ಪಾತ್ರವನ್ನು ಯಾರು ನಿರ್ವಹಿಸುತ್ತಾರೊ ಕಾದು ನೋಡಬೇಕಿದೆ.

  English summary
  Producer, Director Karan Johar backed up from Yuvraj Singh's biopic movie. Yuvraj Singh demand A class Bollywood actor to play his role in the movie, but Karan did not agree that.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X