»   » ಕತ್ರಿನಾ, ರಣಬೀರ್ ಈಗ ಒಂದೇ ಗೂಡಿನ ಹಕ್ಕಿಗಳು

ಕತ್ರಿನಾ, ರಣಬೀರ್ ಈಗ ಒಂದೇ ಗೂಡಿನ ಹಕ್ಕಿಗಳು

Posted By: ಉದಯರವಿ
Subscribe to Filmibeat Kannada

ಬಾಲಿವುಡ್ ನ ಪ್ರಣಯ ಪಕ್ಷಿಗಳು ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಕಳೆದ ಕೆಲ ವರ್ಷಗಳಿಂದ ಜೊತೆಯಾಗಿ ಹಿತವಾಗಿ ಓಡಾಡಿಕೊಂಡಿರುವುದು ಗೊತ್ತೇ ಇದೆ. ಕೆಲ ದಿನಗಳಿಂದ ಇಬ್ಬರ ನಡುವೆ ಲಿವ್ ಇನ್ ರಿಲೇಷನ್ ಶಿಪ್ ನಡೆಯುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ.

ಸಹಜೀವನ ಎಂದ ಮೇಲೆ ಬೇರೆಬೇರೆ ಇರಲು ಸಾಧ್ಯವೇ, ಒಂದೇ ಮನೆಯಲ್ಲಿ ಈ ಪ್ರೇಮ ಪಕ್ಷಿಗಳು ಸೆಟ್ಲ್ ಆಗಿವೆ. ಭಾರತದಲ್ಲಿ ಮಾಧ್ಯಮಗಳ ಕಣ್ಣು ತಪ್ಪಿಸಿ ಆಗಾಗ ವಿದೇಶಕ್ಕೂ ಈ ಜೋಡಿ ಹಕ್ಕಿಗಳು ಹಾರಿ ಕಣ್ಣಾಮುಚ್ಚಾಲೆ ಆಡಿ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. [ಕತ್ರಿನಾ ಕೈಫ್, ರಣಬೀರ್ ಮದುವೆಗೆ ಲೈನ್ ಕ್ಲಿಯರ್!]

Ranbir, Katrina

ತಾಜಾ ಸಮಾಚಾರ ಏನೆಂದರೆ ಇವರಿಬ್ಬರೂ ಶೀಘ್ರದಲ್ಲೇ ಹೊಸ ಮನೆ ಮಾಡುತ್ತಿದ್ದಾರೆ ಎಂಬುದು. ಇಬ್ಬರೂ ಸೇರಿ ಮುಂಬೈನ ಕಾರ್ಟರ್ ರಸ್ತೆಯಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರಂತೆ. ಶನಿವಾರ (ನವೆಂಬರ್ 8) ಇಬ್ಬರೂ ಹೊಸ ಮನೆಗೆ ಗೃಹಪ್ರವೇಶ ಮಾಡುತ್ತಿದ್ದಾರಂತೆ.

ತಮ್ಮ ಹೊಸ ಮನೆಗೆ ಖ್ಯಾತ ಇಂಟೀರಿಯರ್ ಡಿಸೈನರ್, ಆರ್ಕಿಟೆಕ್ಟ್ ಆಶಿಷ್ ಶಾ ಅವರ ಬಳಿ ವಿನ್ಯಾಸ ಮಾಡಿಸಿರುವುದು ವಿಶೇಷ ಎನ್ನುತ್ತವೆ ಮೂಲಗಳು. ಇನ್ನು ಮನೆಯಲ್ಲಿ ಸಕಲ ಸೌಲಭ್ಯಗಳೂ ಇದ್ದು ಲಗ್ಜುರಿಯಾಗಿದೆಯಂತೆ. ಎರಡು ಮೇಲ್ಮಾಳಿಗೆಗಳಿದ್ದು ಈಜುಕೊಳವೂ ಇದೆ ಎಂಬುದು ವಿಶೇಷ.

ಪ್ರೀತಿ ಪ್ರೇಮ ಪ್ರಣಯ ಎಂದು ಆತುರಪಡದೆ ಸ್ವಲ್ಪ ಸಮಯ ಸಹಜೀವನ ನಡೆಸಿ ಬಳಿಕ ಮದುವೆಯಾಗಲು ಈ ಜೋಡಿ ಬಯಸಿದೆಯಂತೆ. ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಂತೆಯೂ ಆಗುತ್ತದೆ. ಮುಂದೆ ಸಂಸಾರವೂ ನೆಟ್ಟಗಿರುತ್ತದೆ ಎಂಬ ಮುಂದಾಲೋಚನೆ ಈ ಜೋಡಿಯದ್ದು.

ಇವರಿಬ್ಬರ ಪ್ರೇಮಾಯಣ ಈಗಾಗಲೆ ಇಬ್ಬರ ಮನೆಯ ಹಿರಿಯ ಕಿವಿಗೂ ಬಿದ್ದಿದ್ದ್ದು, ಎರಡೂ ಕುಟುಂಬಿಕರು ಆದಷ್ಟು ಬೇಗ ಮದುವೆ ಚಪ್ಪರ ಹಾಕಿಸಲು ಮುಂದಾಗಿದ್ದಾರೆ. ಬಹುಶಃ ಫೆಬ್ರವರಿ 2015ಕ್ಕೆ ಗಟ್ಟಿಮೇಳ ಮೊಳಗುವ ಸಾಧ್ಯತೆಗಳಿವೆ.

English summary
From a long time, there as been news about how Ranbir Kapoor and Katrina Kaif have bought a new home on Carter Road, Mumbai. Well, now finally the time has come for the love-dovey couple to movie into their new love nest tomorrow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada