»   » ರಣ್ಬೀರ್, ಕತ್ರಿನಾ: ನಿಜವಾಗ್ಲೂ ಬೇಜಾರ್ ಮಾಡ್ತೀರಪ್ಪಾ!

ರಣ್ಬೀರ್, ಕತ್ರಿನಾ: ನಿಜವಾಗ್ಲೂ ಬೇಜಾರ್ ಮಾಡ್ತೀರಪ್ಪಾ!

Posted By:
Subscribe to Filmibeat Kannada

ಶಿವರಾತ್ರಿಯ ಎರಡು ದಿನ ಮುನ್ನವೇ ಯಾರನ್ನು ಜಾಗರಣೆ ಮಾಡುವ ಉದ್ದೇಶ ಈ ಬಾಲಿವುಡ್ ಜೋಡಿ ಹಕ್ಕಿಗಳದ್ದೋ ನಾ ಕಾಣೆ. ಸಲ್ಮಾನ್ ಖಾನಿಗೆ ಇನ್ನೂ ಹತ್ತಿರ.. ಹತ್ತಿರ ಎಂದು ಬಾಲಿವುಡ್ ಗಲ್ಲಿಯಲ್ಲಿ ಕೆಲವೇ ದಿನಗಳ ಹಿಂದೆ ಸುದ್ದಿಯಾಗಿದ್ದ ಈಕೆಯ ಗಾಸಿಪ್ ಸುದ್ದಿಗೆ ಈಗ ಇನ್ನೊಂದು ಟ್ವಿಸ್ಟ್. ಏ ಕ್ಯಾ ಭಾಯ್ ಕಿಸ್ಸಾ ಅಂದ್ರಾ? ಮುಂದೆ ಓದಿ..

ಒಂದು ಕಾಲದಲ್ಲಿ (ಅಂದ್ರೇ ಒಂದು ತಿಂಗಳ ಕೆಳಗೆ) ನಾನೊಂದು ತೀರ. ನೀನೊಂದು ತೀರಾ ಎನ್ನುತ್ತಿದ್ದ ಬಾಲಿವುಡ್ ಪ್ರಣಯ ಹಕ್ಕಿಗಳಾದ ರಣ್ಬೀರ್ ಕಪೂರ್ ಮತ್ತು ಕತ್ರಿನಾ ಮತ್ತೆ ಒಂದಾಗಿದ್ದಾರಂತೆ. ಅಷ್ಟಕ್ಕೂ ಸುಮ್ಮನಾಗದೇ ಶ್ರೀಲಂಕಾದ ಸಮುದ್ರ ಕಿನಾರೆಯ ಆಳ ಪರೀಕ್ಷಿಸಲು ಸರ್ವ ಸನ್ನದ್ದರಾಗಿದ್ದಾರೆ ಎನ್ನುತ್ತವೆ ಬಾಲಿವುಡ್ ಗಾಸಿಪ್ ರೌಂಡ್ ಅಪ್. (ಸಲ್ಮಾನ್ ಖಾನಿಗೆ ಮತ್ತೆ ದಕ್ಕುವಳೇ ಕತ್ರಿನಾ)

<>ಯವ್ವಿ..ಯವ್ವಿ.. ಈ ಯಮ್ಮಂದು ದಿನಕ್ಕೊಂದು ಕಥೆ ಆಯ್ತಲ್ಲಾ? ಅತ್ಲಾಗೆ.. ಯಾರನ್ನಾದ್ರೂ ಕಟ್ಕೊಂಡು ಶಾಧಿಭಾಗ್ಯ ಮಾಡ್ಕೋಬಾರ್ದಾ ಅಂತಾ ಮುಂಬೈ ಬಾಲಿವುಡ್ ಪಡಶಾಲೆಯಲ್ಲಿ ಮಾತನಾಡಿ ಕೊಳ್ಳುವವರಿಗೆ ಕಮ್ಮಿ ಇಲ್ವಂತೆ.

ಕೈ ಕೈ ಹಿಡುದು ಕೊಂಡು ಸ್ಪೇನ್, ಅಮೆರಿಕಾ, ಶ್ರೀಲಂಕಾ ಬೀಚಿಗೆ ತೆರಳಿ ಮಾಧ್ಯಮದವರ ಕ್ಯಾಮರಾಗೆ ಸಿಕ್ಕಿಬಿದ್ದಿದ್ದ ಈ ಪ್ರಣಯ ಪಕ್ಷಿಗಳು ಕಳೆದ ತಿಂಗಳಲ್ಲಿ ಬೇರೆ ಬೇರೆ ಯಾಗಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಅದಕ್ಕೆ ಪೂರಕ ಎನ್ನುವಂತೆ ಸಲ್ಮಾನ್ ಖಾನಿಗೆ ಯಾವತ್ತೂ ನನ್ನ ಹೃದಯದಲ್ಲಿ ಸ್ಪೆಷಲ್ ಸ್ಥಾನ ಇದೆ ಎಂದು ಕತ್ರಿನಾ ಹೇಳಿದ್ದರು.

ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ವರದಿ

ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾದಂತೆ, ಇಬ್ಬರಿಗೂ ಮಾರ್ಚ್ ಮೊದಲ ವಾರದ ವರೆಗೆ ಬ್ಯೂಸಿ ಶೂಟಿಂಗ್ ಶೆಡ್ಯೂಲ್ ಇದೆಯಂತೆ. ಅದಾದ ನಂತರ ಶೂಟಿಂಗ್ ನಲ್ಲಿ ಮೂರು ದಿನದ ಗ್ಯಾಪ್ ಇರುವುದರಿಂದ ಶ್ರೀಲಂಕಾ ಪ್ರವಾಸಕ್ಕೆ ಕತ್ರಿನಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಶೂಟಿಂಗ್ ನಂತರ ಶ್ರೀಲಂಕಾಕ್ಕೆ

ರಣ್ಬೀರ್ ಕಪೂರ್ ಸದ್ಯ ಶ್ರೀಲಂಕಾದಲ್ಲಿ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಬಾಂಬೆ ವೆಲ್ವೆಟ್ ಸಿನಿಮಾದ ಚಿತ್ರೀಕರಣದಲ್ಲಿರುವ ರಣ್ಬೀರ್ ನೋಡಲು ಕತ್ರಿನಾ ಮಾರ್ಚ್ ಮೊದಲ ವಾರದ ನಂತರ ಶ್ರೀಲಂಕಾಗೆ ಹೋಗಲಿದ್ದಾರೆನ್ನುವ ಸುದ್ದಿಯನ್ನು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಜೋಡಿ ಹಕ್ಕಿಗಳ ನಡುವೆ ಬಿರುಕು

ಕತ್ರಿನಾ ಮತ್ತು ರಣ್ಬೀರ್ ಜೋಡಿ ಬಾಲಿವುಡ್ ನಲ್ಲಿ ಸದ್ಯ ಭಾರೀ ಸುದ್ದಿ ಮಾಡುತ್ತಿರುವ ಜೋಡಿಗಳು. ಅಮೀರ್ ಖಾನ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಇಬ್ಬರೂ ಬೇರೆ ಬೇರೆಯಾಗಿ ಬಂದು ಹೋಗಿದ್ದರು. ಆಗ ಇಬ್ಬರ ನಡುವೆ ಏನೋ ಸರಿಯಿಲ್ಲ ಎನ್ನುವ ಸುದ್ದಿ ಹರಡಿತ್ತು.

ಸಲ್ಮಾನ್ ಜೊತೆ ಹೆಸರು

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸಿನಿಮಾ ವೃತ್ತಿ ಜೀವನದಲ್ಲಿ ಬಹಳಷ್ಟು ಇಷ್ಟ ಪಟ್ಟಿದ್ದ ನಟಿಯರೆಂದರೆ ಒಂದು ಆಗಿನ ಐಶ್ವರ್ಯ ರೈ ಮತ್ತು ಕತ್ರಿನಾ ಕೈಫ್. ಇಬ್ಬರೂ ನಂತರದ ದಿನಗಳಲ್ಲಿ ಸಲ್ಮಾನ್ ನಿಂದು ದೂರ ಸರಿದಿದ್ದರು. ಆದರೆ ಕೆಲ ದಿನಗಳ ಹಿಂದೆ ನಡೆದ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ನನಗೆ ಸ್ಪೆಷಲ್ ವ್ಯಕ್ತಿ ಎಂದು ಕತ್ರಿನಾ ಹೇಳಿದ್ದರು.

ಕತ್ರಿನಾಳನ್ನ ಅತ್ತಿಗೆ ಅಂದಿದ್ದ ಸಲ್ಮಾನ್

ಜೈ ಹೋ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನಿಗೆ ಮಾಧ್ಯಮದವರು ಕರೀನಾ ಕಪೂರ್ ಹೇಳಿದ್ದನ್ನು ತಿಳಿಸಿದಾಗ ಖಾರವಾಗಿ ಪ್ರತಿಕ್ರಿಯಿಸಿದ್ದ ಸಲ್ಮಾನ್, ಕರೀನಾ ಕಪೂರ್ ನನಗೆ ಅಕ್ಕನ ಹಾಗೆ. ಆಕೆಗೆ ಕತ್ರಿನಾ ಅತ್ತಿಗೆ ಆದ ಮೇಲೆ ನನಗೂ ಕತ್ರಿನಾ ಅತ್ತಿಗೆ ಎಂದು ಹೇಳಿದ್ದರು. (ಕತ್ರಿನಾ ನನಗೆ ಅತ್ತಿಗೆ ಸಮಾನ)

English summary
Katrina Kaif and Ranbir Kapoor not broken up planning holiday in Sri Lanka, Hindustan Times reports.&#13;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada