For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಮದಕರಿ ನಾಯಕ' ಚಿತ್ರಕ್ಕಾಗಿ ದಕ್ಷಿಣ ಭಾರತದ ಖ್ಯಾತ ನಟಿ.!

  |
  ದಕ್ಷಿಣ ಭಾರತದ ಪ್ರಖ್ಯಾತ ನಾಯಕಿ ದರ್ಶನ್ ಚಿತ್ರದಲ್ಲಿ? | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ತೆರೆಗೆ ಬರ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್ ನಾಯಕಿಯರು. ಕುರುಕ್ಷೇತ್ರ ಚಿತ್ರೀಕರಣವೂ ಮುಗಿದಿದೆ. ಈ ಚಿತ್ರದಲ್ಲಿ ಮೇಘನ ರಾಜ್ ದುರ್ಯೋಧನ ದರ್ಶನ್ ಗೆ ಜೋಡಿಯಾಗಿದ್ದಾರೆ.

  ಈ ಎರಡು ಸಿನಿಮಾ ಮುಗಿಸಿರುವ ದಾಸ ಈಗ ಒಡೆಯ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಹೀರೋಯಿನ್ ಯಾರು ಎಂದು ಅಧೀಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ಬಟ್, ಕೊಡುಗಿನ ಹೊಸ ಹುಡುಗಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

  ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ 9 ಸ್ಟಾರ್ ಹೀರೋಯಿನ್ಸ್

  ಈ ಚಿತ್ರಗಳ ನಂತರ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಗಂಡುಗಲಿ ಮದಕರಿ ನಾಯಕ, ಎಂಜೆ ರಾಮಮೂರ್ತಿ ನಿರ್ಮಾಣ D55 ಹಾಗೂ ತಾರಕ್ ನಿರ್ದೇಶನ ಪ್ರಕಾಶ್ ನಿರ್ದೇಶನ ಸಿನಿಮಾವೊಂದ ಶುರುವಾಗಲಿದೆ. ಹಾಗಿದ್ರೆ, ಈ ಚಿತ್ರಗಳ ಪೈಕಿ ಯಾವ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಿ ಬರಲಿದ್ದಾರೆ. ಮುಂದೆ ಓದಿ......

  ದರ್ಶನ್ ಗಾಗಿ ಕನ್ನಡಕ್ಕೆ ಕೀರ್ತಿ ಸುರೇಶ್.!

  ದರ್ಶನ್ ಗಾಗಿ ಕನ್ನಡಕ್ಕೆ ಕೀರ್ತಿ ಸುರೇಶ್.!

  ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೊಂದಿರುವ ನಟಿ ಕೀರ್ತಿ ಸುರೇಶ್ ಕನ್ನಡಕ್ಕೆ ಬರ್ತಾರೆ ಎಂದು ಸುದ್ದಿಯೊಂದು ಕೇಳಿಬರ್ತಿದೆ. ಡಿ ಬಾಸ್ ದರ್ಶನ್ ಅಭಿನಯಿಸಲಿರುವ ಹೊಸ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಧಿಕೃತವಾಗಿ ಎಂಟ್ರಿಯಾಗಲಿದ್ದಾರೆ ಎಂಬ ಮಾತು ಈಗ ಗಾಂಧಿನಗರದಲ್ಲಿ ಚರ್ಚೆಯಾಗ್ತಿದೆ.

  ದರ್ಶನ್ 55ನೇ ಚಿತ್ರಕ್ಕೆ ಫೈಟ್: ಒಂದೇ ಹೆಸರಿನಲ್ಲಿ ಇಬ್ಬರು ನಿರ್ಮಾಪಕರು ಜಾಹೀರಾತು

  'ಮದಕರಿ'ಗೆ 'ಮಹಾನಟಿ' ಸಾಥ್

  'ಮದಕರಿ'ಗೆ 'ಮಹಾನಟಿ' ಸಾಥ್

  ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಲಿರುವ ಐತಿಹಾಸಿಕ ಚಿತ್ರ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕಾಗಿ ಕೀರ್ತಿ ಸುರೇಶ್ ಅವರನ್ನ ಕರೆತರುವ ಯೋಚನೆ ಚಿತ್ರತಂಡಕ್ಕಿದೆ ಎನ್ನಲಾಗಿದೆ. ಈಗಾಗಲೇ ಮಹಾನಟಿ ಚಿತ್ರದ ಮೂಲಕ ಕೀರ್ತಿ ಸುರೇಶ್ ಎಂತಹ ಅದ್ಭುತ ನಟಿ ಎಂದು ಸಾಬೀತು ಪಡಿಸಿಕೊಂಡಿದ್ದಾರೆ. ಮೊದಲೇ ಇದು ಐತಿಹಾಸಿಕ ಸಿನಿಮಾ. ಹೀಗಾಗಿ, ಕೀರ್ತಿ ಸುರೇಶ್ ಇದ್ದರೇ ಮತ್ತಷ್ಟು ಜೋಶ್ ನೀಡುತ್ತೆ ಎಂಬ ಮಾತಿದೆ.

  ಧನಂಜಯ್ ಅವರನ್ನ ದರ್ಶನ್ ಹೇಗೆ ಕರೆಯುತ್ತಾರೆ ಗೊತ್ತಾ?

  ರಾಕ್ ಲೈನ್ ನಿರ್ಧರಿಸಿದ್ರೆ ಪಕ್ಕಾ

  ರಾಕ್ ಲೈನ್ ನಿರ್ಧರಿಸಿದ್ರೆ ಪಕ್ಕಾ

  ಸದ್ಯ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ದರ್ಶನ್ ಬಿಟ್ಟರೇ ಬೇರೆ ಯಾವ ಕಲಾವಿದರು ಆಯ್ಕೆಯಾಗಿಲ್ಲ. ಒಂದು ವೇಳೆ ನಾಯಕಿಯಾಗಿ ಕೀರ್ತಿ ಸುರೇಶ್ ಬೇಕು ಎನಿಸಿದ್ರೆ, ಖಂಡಿತ ರಾಕ್ ಲೈನ್ ವೆಂಕಟೇಶ್ ಕರೆತರ್ತಾರೆ ಎನ್ನುವುದ್ರಲ್ಲಿ ಯಾವುದೇ ಸಂಶಯವಿಲ್ಲ.

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಫಸ್ಟ್ ಲುಕ್ ಬಹಿರಂಗ

  ಕಾಂಬಿನೇಷನ್ ಚೆನ್ನಾಗಿರುತ್ತೆ

  ಕಾಂಬಿನೇಷನ್ ಚೆನ್ನಾಗಿರುತ್ತೆ

  ಗಂಡುಗಲಿ ಮದಕರಿ ನಾಯಕ ಐತಿಹಾಸಿಕ ಸಿನಿಮಾ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಚಿತ್ರ ಮಾಡಿದ್ದ ದರ್ಶನ್ ಕುರುಕ್ಷೇತ್ರ ಎಂಬ ಪೌರಾಣಿಕ ಸಿನಿಮಾ ಮಾಡಿದ್ದಾರೆ. ಆ ಕಡೆ ಮಹಾನಟಿ ಸಿನಿಮಾ ಮಾಡಿರುವ ಕೀರ್ತಿ ಸುರೇಶ್ ಗೂ ಇಂತಹ ಪಾತ್ರ ಸೂಕ್ತ ಎನ್ನಲಾಗುತ್ತೆ. ಹಾಗಾಗಿ, ದರ್ಶನ್ ಮತ್ತು ಕೀರ್ತಿ ಸುರೇಶ್ ಕಾಂಬಿನೇಷನ್ ಯಶಸ್ಸಾಗಬಹುದು ಎಂಬ ಮಾತು ಅಭಿಮಾನಿಗಳಲ್ಲಿದೆ.

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಫಸ್ಟ್ ಲುಕ್ ಬಹಿರಂಗ

  ಸ್ಟಾರ್ ಗಳ ಲಕ್ಕಿ ಹೀರೋಯಿನ್

  ಸ್ಟಾರ್ ಗಳ ಲಕ್ಕಿ ಹೀರೋಯಿನ್

  ಕೀರ್ತಿ ಸುರೇಶ್ ಗೆ ಸೌತ್ ಇಂಡಸ್ಟ್ರಿಯಲ್ಲಿ ಹೆಚ್ಚು ಬೇಡಿಕೆ ಇದೆ. ವಿಜಯ್, ಶಿಕಾರ್ತಿಕಯೇನ್, ವಿಶಾಲ್, ಚಿಯಾನ್ ವಿಕ್ರಂ, ನಾನಿ, ಹೀಗೆ ಸ್ಟಾರ್ ಗಳ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿಯಾಗ್ಬೇಕು ಎಂಬ ಒತ್ತಾಯ ಅಭಿಮಾನಿಗಳ ಕಡೆಯಿಂದ ಇದೆ. ಸದ್ಯ ಮಲಯಾಳಂ ಒಂದು ಸಿನಿಮಾ ಹಾಗೂ ತೆಲುಗಿನ ಒಂದು ಸಿನಿಮಾ ಮಾಡ್ತಿರುವ ಕೀರ್ತಿ ಕನ್ನಡದಲ್ಲಿ ಸಿನಿಮಾ ಮಾಡಿಲ್ಲ. ಬಹುಶಃ ರಾಕ್ ಲೈನ್ ಚಿತ್ರದ ಮೂಲಕ ಖಾತೆ ತೆರೆದರೂ ಅಚ್ಚರಿಯಿಲ್ಲ.

  ದರ್ಶನ್-ಪ್ರೇಮ್ ಜೋಡಿಯ ಸಿನಿಮಾ ಸದ್ಯಕ್ಕೆ ಕನಸಷ್ಟೇ.!

  English summary
  According to latest buzz, south actress keerthi suresh will come to sandalwood for darshan movie. but its not official.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X