twitter
    For Quick Alerts
    ALLOW NOTIFICATIONS  
    For Daily Alerts

    ಆಕ್ಷೇಪಕ್ಕೆ ಟಾಂಗ್ : ಟೈಟಲ್ ಇಲ್ಲದೆ ಸಿನ್ಮಾ ರಿಲೀಸ್

    By Mahesh
    |
    <ul id="pagination-digg"><li class="previous"><a href="/gossips/upendra-movie-name-change-basavanna-to-brahmana-075910.html">« Previous</a>

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬಸವಣ್ಣ' ಚಿತ್ರದ ಪೋಸ್ಟರ್, ಶೀರ್ಷಿಕೆ ವಿವಾದ ಈಗ ತಾರಕಕ್ಕೇರಿದೆ. ಜಾತಿ, ಧರ್ಮ, ಮತ ಪಂಥಗಳ ನಡುವೆ ಚಿತ್ರ ಸಿಲುಕಿ ನಲುಗುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲೇ ಇಷ್ಟು ದೊಡ್ಡ ಮಟ್ಟದ ಕಿರಿಕ್ ಗೆ ಕಾರಣವಾಗಿರುವುದು ಏಕೆ ಎಂಬುದು ಯಾರಿಗೂ ಗೊತ್ತಾಗದಂತೆ ಆಗಿದೆ.

    ಕನ್ನಡ ಚಿತ್ರರಂಗದಲ್ಲಿ ಚಿತ್ರದ ಶೀರ್ಷಿಕೆ ವಿವಾದ ಹೊಸದೇನಲ್ಲ. ಹಾಡುಗಳು, ಪೋಸ್ಟರ್, ಡೈಲಾಗ್ಸ್ ಕೂಡಾ ಆಕ್ಷೇಪಕ್ಕೆ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಟೈಟಲ್ ಬಗ್ಗೆ ಕರ್ನಾಟಕ ವಾಣಿಜ್ಯ ಮಂಡಳಿ ತಕ್ಷಣವೇ ತೀರ್ಪು ನೀಡಿದ್ದು ಇದೇ ಮೊದಲು.

    ವೀರ ಬಸವಣ್ಣ ಬದಲು ಬ್ರಾಹ್ಮಣ ಎಂದು ಬದಲಾಯಿಸುತ್ತೇವೆ ಎಂದು ನಿರ್ದೇಶಕ ಶ್ರೀನಿವಾಸ ರಾಜು ಅವರು ಹೇಳಿದ ಕೆಲ ಕ್ಷಣಗಳಲ್ಲೇ ಬ್ರಾಹ್ಮಣ ಸಮುದಾಯ ತಿರುಗಿ ಬಿದ್ದಿದೆ. ಇದಕ್ಕೂ ಮುನ್ನ ಕೆಎಫ್ ಸಿಸಿ ಪ್ರತಿನಿಧಿ ಉಮೇಶ್ ಬಣಕಾರ್ ಅವರು ಪ್ರತಿಕ್ರಿಯಿಸಿದ್ದು, ಯಾವುದೇ ಕಾರಣಕ್ಕೂ ಬಸವಣ್ಣ, ಬ್ರಾಹ್ಮಣ ಟೈಟಲ್ ನೀಡುವುದಿಲ್ಲ ಎಂದು ಹೇಳಿದ್ದಾರೆ.

    ಬ್ರಾಹ್ಮಣನಾಗಿದ್ದ ಅಣ್ಣ ಬಸವಣ್ಣ ವೀರಶೈವರಾದ ಮೇಲೆ ಜನಿವಾರ ಏಕೆ ಎಂಬ ಪ್ರಶ್ನೆಯೂ ಎದ್ದಿತ್ತು. ಆಮೇಲೆ ಈ ಬಗ್ಗೆ ಚಿತ್ರತಂಡ ಎಚ್ಚೆತ್ತುಕೊಂಡು ಚಿತ್ರದ ಟೈಟಲ್ ಅನ್ನು ಸದಾ ಜನಿವಾರ ಹಾಕುವ 'ವೀರ' ಬ್ರಾಹ್ಮಣ ಎಂದು ಬದಲಾಯಿಸಿದೆ. ಚಿತ್ರ ಕಥೆ ಕೇಳುವ ತಾಳ್ಮೆ ಎಲ್ಲರೂ ಕಳೆದುಕೊಂಡಿದ್ದು ಮೊದಲಿಗೆ ಟೈಟಲ್ ಬದಲಾಯಿಸಿ ಎಂದು ತಿರುಗಿ ಬಿದ್ದಿದ್ದಾರೆ. ಕೆಎಫ್ ಸಿಸಿ, ಬ್ರಾಹ್ಮಣ ಸಮುದಾಯದ ಪ್ರತಿಕ್ರಿಯೆ ಇದಕ್ಕೆ ನಿರ್ದೇಶಕರ ಉತ್ತರ ಎಲ್ಲವೂ ಮುಂದೆ ಇದೆ ಓದಿಕೊಳ್ಳಿ..

    ಶೀರ್ಷಿಕೆ ಬದಲು ಏಕೆ?

    ಶೀರ್ಷಿಕೆ ಬದಲು ಏಕೆ?

    ಜಗಜ್ಯೋತಿ ಬಸವಣ್ಣನಿಗೆ ಅವಮಾನ ಮಾಡಲಾಗಿದೆ. ಇಡೀ ಬಸವ ಅಭಿಮಾನಿಗಳಿಗೆ ಮಾಡಿರುವ ಅವಮಾನ. ಎಲ್ಲಾ ಸಮುದಾಯದವರು ಇದನ್ನು ಖಂಡಿಸಬೇಕು. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು.

    ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿ, ಇದು ಇಲ್ಲಿಗೆ ನಿಲ್ಲದಿದ್ದರೆ ಇಡೀ ರಾಜ್ಯದಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಎಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಸಿದರು. ಇದು ತಕ್ಷಣವೇ ವಾಣಿಜ್ಯ ಮಂಡಳಿಗೆ ತಟ್ಟಿದೆ
    ಉಮೇಶ್ ಬಣಕಾರ್ ಪ್ರತಿಕ್ರಿಯೆ

    ಉಮೇಶ್ ಬಣಕಾರ್ ಪ್ರತಿಕ್ರಿಯೆ

    ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಟೈಟಲ್ ಸಂಘದ ಮುಖ್ಯಸ್ಥ ದಿನೇಶ್ ಗಾಂಧಿ ಅವರು ವಿವಾದಾತ್ಮಕ ಟೈಟಲ್ ಗಳನ್ನು ನೀಡಲು ನಿರಾಕರಿಸಿದ್ದಾರೆ.

    ಆದರೆ, ಯಾವುದೇ ಚಿತ್ರದ ಶೀರ್ಷಿಕೆ ನೋಂದಾಯಿಸಿದ ಮೇಲೆ ಅದರ ಬಗ್ಗೆ ಆಕ್ಷೇಪವಿದ್ದರೆ ಸಮಿತಿಯಲ್ಲಿ ಚರ್ಚೆ ನಡೆದು ಓಕೆ ಎನ್ನಲಾಗುತ್ತದೆ. ಇದಕ್ಕೆ ಒಂದಷ್ಟು ತಿಂಗಳೋ, ವಾರವೋ ಹಿಡಿಯುತ್ತದೆ. ಆದರೆ, ಈ ಚಿತ್ರದ ವಿವಾದಕ್ಕೆ ತಕ್ಷಣವೇ ಕೆಎಫ್ ಸಿಸಿ ಪ್ರತಿಕ್ರಿಯಿಸುತ್ತಿರುವುದೇಕೆ? ಟೈಟಲ್ ಆಕ್ಷೇಪಾರ್ಹವಾದರೆ ಅದರನ್ನು ನಿಯಮದ ಪ್ರಕಾರ ನಿರಾಕರಿಸಬೇಕಿತ್ತು ಅದರ ಬದಲು ಮಾಧ್ಯಮಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡುತ್ತಿರುವುದು ಏಕೆ? ಎಂಬ ಪ್ರಶ್ನೆ ಎದ್ದಿದೆ.

    ಕೆಎಸ್ ಎಲ್ ಸ್ವಾಮಿ ಪ್ರತಿಕ್ರಿಯೆ

    ಕೆಎಸ್ ಎಲ್ ಸ್ವಾಮಿ ಪ್ರತಿಕ್ರಿಯೆ

    ಮಹಾತ್ಮ ಗಾಂಧಿ ಎಂದು ಹೆಸರಿಟ್ಟು ಅವರ ಕೈಗೆ ಪಿಸ್ತೂಲ್ ಕೊಡ್ರಿ, ಬ್ರಾಹ್ಮಣರು ಎಂದಾದರೂ ಪಿಸ್ತೂಲ್, ಕತ್ತಿ ಹಿಡಿದಿದ್ದರೆ, ಮಹಾಭಾರತದಲ್ಲಿ ಅಶ್ವತ್ಥಾಮನ ಕತೆ ಗೊತಾ ನಿಮಗೆ ಎಂದು ಶ್ರೀನಿವಾಸರಾಜುಗೆ ಹಿರಿಯ ನಿರ್ದೇಶಕ ಕೆಎಸ್ ಎಲ್ ಸ್ವಾಮಿ ಸವಾಲು ಹಾಕಿದರು

    100 ವರ್ಷಗಳ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲು ಟೈಟಲ್ ಸಮಸ್ಯೆ ಎದ್ದಿರುವುದು. ನಿಮಗೆ ಪಾಠ ಮಾಡೋಕೆ ನಿನಗೆ ಇಷ್ಟವಿಲ್ಲ. ನೀವು ವಿತಂಡ ವಾದಿ. ಫ್ರೀಡಂ ಪಾರ್ಕ್ನಲ್ಲಿ ನಿಂತು ಮಾತಾಡಿ ಧೈರ್ಯ ಇದ್ದರೆ, ಎಂದು ಕೋಪಿಸಿಕೊಂಡು ಕರೆ ಕಟ್ ಮಾಡಿದರು.

    ಬ್ರಾಹ್ಮಣ ಸಮುದಾಯ ಖಂಡನೆ

    ಬ್ರಾಹ್ಮಣ ಸಮುದಾಯ ಖಂಡನೆ

    ಒಂದು ಮತ, ಸಮುದಾಯ ಅಥವಾ ಧರ್ಮದ ಬಗ್ಗೆ ಚಿತ್ರ ಮಾಡುವಾಗ ಸಂಬಂಧಪಟ್ಟ ಸಂಘ ಸಂಸ್ಥೆಗಳು ಮಠಾಧೀಶರ ಒಪ್ಪಿಗೆ ಅಗತ್ಯ. ಈ ರೀತಿ ಸಕಾರಾತ್ಮಕ ಚಿಂತನೆ ಇಲ್ಲದೆ ಶೀರ್ಷಿಕೆಗಳನ್ನು ಇಟ್ಟು ಸಾಮಾಜದ ಸ್ವಾಸ್ಥ್ಯ ಕೆಡಿಸಬಾರದು.

    ನಾವು ಉಪೇಂದ್ರ ಅವರಲ್ಲಿ ಭಿನ್ನವಿಸಿಕೊಳ್ಳುತ್ತೇವೆ. ಅವರು ಶೀರ್ಷಿಕೆಯನ್ನು ಬದಲಾಯಿಸಿ ಚಿತ್ರದ ವಿವಾದವನ್ನು ಕೊನೆಗಾಣಿಸಲಿ. ಬ್ರಾಹ್ಮಣ ಸಮಾಜದ ಆಕ್ರೋಶಕ್ಕೆ ಗುರಿಯಾಗುವುದು ಬೇಡ ಎಂದು ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

    ನಿರ್ದೇಶಕರ ಬೇಸರದ ನುಡಿ

    ನಿರ್ದೇಶಕರ ಬೇಸರದ ನುಡಿ

    ಟೈಟಲ್ ಇಲ್ಲದೆ ಸಿನ್ಮಾ ರಿಲೀಸ್ ಮಾಡೋಕೆ ನಾವು ರೆಡಿ. ಪ್ರೇಕ್ಷಕರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಪೂರ್ವಗ್ರಹ ಪೀಡಿತರಾಗಿ ಬರೀ ಟೈಟಲ್, ಪೊಸ್ಟರ್ ನೋಡಿ ಚಿತ್ರದ ಬಗ್ಗೆ ತಿರುಗಿಬಿದ್ದಿರುವುದು ಬೇಸರ ಮೂಡಿಸಿದೆ.

    ಬ್ರಾಹ್ಮಣ ಎಂದು ಟೈಟಲ್ ಇಟ್ಟರೆ ಅದಕ್ಕೆ ತಕ್ಕಂತೆ ಕಥೆ ಇರುತ್ತದೆ. ಬ್ರಾಹ್ಮಣರ ಅವಹೇಳನ ಮಾಡಲು ಹೊರಟಿಲ್ಲ. ದಂಡುಪಾಳ್ಯ ಹೆಸರಿಗೆ ತಕ್ಕಂತೆ ಕ್ರೈಂ ಸ್ಟೋರಿಯಾಗಿತ್ತು. ನಾವು ಮನರಂಜನೆ ನೀಡಲು ಬಂದಿರುವುದು ಚಿತ್ರದಿಂದ ಸಂಘರ್ಷ ಹುಟ್ಟು ಹಾಕಿ ಮಜಾ ತೆಗೆದುಕೊಳ್ಳುವ ಮನಸ್ಸು ನಮಗಿಲ್ಲ ಎಂದಿದ್ದಾರೆ.. ಮುಂದುವರೆದು...

    ಪಪ್ಪಿ, ಜಪ್ಪಿ, ಜಿಮ್ಮಿ

    ಪಪ್ಪಿ, ಜಪ್ಪಿ, ಜಿಮ್ಮಿ

    ಶ್ರೀರಾಮ, ಕೃಷ್ಣ, ಶಿವ ಎಂದು ಟೈಟಲ್ ಬದಲು ಪಪ್ಪಿ, ಜಪ್ಪಿ, ಜಿಮ್ಮಿ, ಲಾರಿ ಬಸ್ಸು ಎಂದು ಹೆಸರಿಡಬೇಕಾಗುತ್ತದೆ. ಮುಂದೆ ಎಲ್ಲರಿಗೂ ಸಮಸ್ಯೆ ಆಗಲಿದೆ ಎಚ್ಚರ. ನಮ್ಮ ಮಕ್ಕಳಿಗೆ ಒಳ್ಳೆ ಹೆಸರು ದೇವರ ಹೆಸರು ಇಡುತ್ತೇವೆ. ಹಾಗೆ ಚಿತ್ರಕ್ಕೆ ಒಳ್ಳೆ ಟೈಟಲ್ ಇಟ್ಟು ಕೆಟ್ಟದಾಗಿ ತೋರಿಸಲು ಸಾಧ್ಯವೆ?

    ದೇವರ ಹೆಸರಿನಲ್ಲಿ ಸಿನ್ಮಾ ಬಂದಾಗ ಸುಮ್ಮನಿದ್ದ ಜನ ಒಂದು ಧರ್ಮದ ಹೆಸರಿಟ್ಟ ತಕ್ಷಣ ಕಿರಿಕಿರಿಯಾಗಿದ್ದು ಏಕೆ? ಬಸವಣ್ಣ ಬಯೋಗ್ರಾಫಿ ಮಾಡಲು ಹೊರಟಿರಲಿಲ್ಲ. ಉಪ್ಪಿ ಅವರ ಚಿತ್ರ ಬ್ರಹ್ಮ ಬಗ್ಗೆ ಆಕ್ಷೇಪ ವ್ಯಕ್ತವಾಗಿಲ್ಲ. ಇದು ಯಾರ ಕೈವಾಡವೋ ನಮ್ಮ ದುರ್ದೈವವೋ ಗೊತ್ತಿಲ್ಲ.

    <ul id="pagination-digg"><li class="previous"><a href="/gossips/upendra-movie-name-change-basavanna-to-brahmana-075910.html">« Previous</a>

    English summary
    Director Srinivas Raju decided to change his film name from Veera Basavanna to Brahmana after facing opposition from Veerashaiva community leaders. Recently former CM BS Yeddyurappa also opposed in Assembly.
    Friday, July 19, 2013, 18:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X