»   » ಕಿಚ್ಚ ಸುದೀಪ್ ಎರಡು ಚಿತ್ರಗಳು ಏಕಕಾಲಕ್ಕೆ ಬಿಡುಗಡೆ?

ಕಿಚ್ಚ ಸುದೀಪ್ ಎರಡು ಚಿತ್ರಗಳು ಏಕಕಾಲಕ್ಕೆ ಬಿಡುಗಡೆ?

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಹೆಬ್ಬುಲಿ'ಯಲ್ಲಿ ಘರ್ಜಿಸಿದ ನಂತರ ಈಗ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಬಿಟ್ಟು ಈಗ ಸದ್ಯದಲ್ಲಿ ಯಾವ ಚಿತ್ರದಲ್ಲೂ ತೊಡಗಿಕೊಂಡಿಲ್ಲ.

ಹೀಗಿರುವಾಗಲೇ ಅಭಿಮಾನಿಗಳ ಅಭಿಮಾನಿ ಸುದೀಪ್ ರವರ ಎರಡು ಚಿತ್ರಗಳು ಒಮ್ಮೆಯೇ ರಿಲೀಸ್ ಆಗುವ ಸಾಧ್ಯತೆಗಳು ಇವೆ ಎಂಬ ಸುದ್ದಿ ಹರಡಿದೆ. ಹಾಗಿದ್ರೆ ಒಂದೇ ಸಮಯಕ್ಕೆ ತೆರೆಗೆ ಬರಲಿವೆ ಎಂದು ಸುದ್ದಿಯಾಗಿರುವ ಕಿಚ್ಚನ ಆ ಎರಡು ಸಿನಿಮಾಗಳು ಯಾವುವು?.. ತಿಳಿಯಲು ಮುಂದೆ ಓದಿರಿ.

'ದಿ ವಿಲನ್' ನಂತರ ಎರಡು ಚಿತ್ರಗಳಲ್ಲಿ ಸುದೀಪ್ ಅಭಿನಯ

ಕಿಚ್ಚ ಸುದೀಪ್, ಸೆಂಚುರಿ ಸ್ಟಾರ್ ಶಿವಣ್ಣ ರೊಂದಿಗೆ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರದ ನಂತರ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಎರಡು ಚಿತ್ರಗಳೇ ಒಟ್ಟಿಗೆ ತೆರೆಕಾಣಲಿವೆ ಎಂದು ಈಗ ಗಾಂಧಿನಗರದ ಗಲ್ಲಿಯಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. ಆ ಚಿತ್ರಗಳೆಂದರೆ...

'ಹೆಬ್ಬುಲಿ' ನಿರ್ದೇಶಕನ ಚಿತ್ರ

ಸುದೀಪ್ ಗೆ 'ಹೆಬ್ಬುಲಿ'ಯಂತಹ ಸೂಪರ್ ಹಿಟ್ ಸಿನಿಮಾ ಡೈರೆಕ್ಟ್ ಮಾಡಿದ ನಿರ್ದೇಶಕ ಕೃಷ್ಣ ರವರು ಸುದೀಪ್ ಗೆ ಇನ್ನೊಂದು ಚಿತ್ರ ಮಾಡುತ್ತಿರುವ ಬಗ್ಗೆ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ. ಈ ಚಿತ್ರಕ್ಕಾಗಿ ಕೃಷ್ಣ ರವರು ಹೈದೆರಾಬಾದ್ ನಲ್ಲಿ ಸ್ಕ್ರಿಪ್ಟ್ ವರ್ಕಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. 'ದಿ ವಿಲನ್' ನಂತರ ಸುದೀಪ್ ರವರು ಕೃಷ್ಣ ರವರ ನಿರ್ದೇಶನದ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದು, ಅದರ ಜೊತೆಗೆ ಇನ್ನೊಂದು ಚಿತ್ರದಲ್ಲಿ ನಟಿಸುವ ಬಗ್ಗೆ ಸುದೀಪ್ ಖಚಿತ ಪಡಿಸಿದ್ದಾರೆ.

ಸುದೀಪ್ ಚಿತ್ರಕ್ಕೆ ಸ್ಕ್ರಿಪ್ ಬರೆಯಲು ಹೆಬ್ಬುಲಿ ಕೃಷ್ಣ ಎಲ್ಲಿ ಹೋಗಿದ್ದಾರೆ?

'ಕೋಟಿಗೊಬ್ಬ 3' ಚಿತ್ರ

ಸುದೀಪ್ ರೊಂದಿಗೆ 'ಕೋಟಿಗೊಬ್ಬ 2' ಚಿತ್ರ ಮಾಡಿದ್ದ ಸೂರಪ್ಪ ಬಾಬು ಈಗ 'ಕೋಟಿಗೊಬ್ಬ 3' ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಕೃಷ್ಣ ನಿರ್ದೇಶನದ ಚಿತ್ರದ ಜೊತೆಗೆ ಸುದೀಪ್ ಈ ಚಿತ್ರದಲ್ಲೂ ತೊಡಗಿಕೊಳ್ಳುವುದಾಗಿ ಹೇಳಿರುವುದರಿಂದ ಈಗ ಗಾಂಧಿನಗರದಲ್ಲಿ ಈ ಎರಡು ಚಿತ್ರಗಳು ಒಟ್ಟಿಗೆ ತೆರೆಕಾಣಲಿವೆ ಎಂದು ಸುದ್ದಿ ಹಬ್ಬಿದೆ. ಆದರೆ 'ಕೋಟಿಗೊಬ್ಬ 3' ಚಿತ್ರಕ್ಕೆ ಇನ್ನು ನಿರ್ದೇಶಕರು ಯಾರು ಎಂಬುದು ತಿಳಿದುಬಂದಿಲ್ಲ.

'ಕೋಟಿಗೊಬ್ಬ-3' ಚಿತ್ರದಲ್ಲಿ ನಟಿಸಲು ಸುದೀಪ್ ಗೆ ದಾಖಲೆಯ ಸಂಭಾವನೆ!

ಹಾಲಿವುಡ್ ಚಿತ್ರವು ಶುರುವಾಗುವ ಸಾಧ್ಯತೆ?

ಅಂದಹಾಗೆ ಸುದೀಪ್ ಕನ್ನಡದ ಈ ಎರಡು ಚಿತ್ರಗಳ ಜೊತೆಗೆ ಆಸ್ಟ್ರೇಲಿಯಾ ಮೂಲದ ಎಡ್ಡಿ ಆರ್ಯ ಎಂಬ ನಿರ್ದೇಶಕರ ಹಾಲಿವುಡ್ ಸಿನಿಮಾ 'ರೈಸನ್' ಶೂಟಿಂಗ್ ನಲ್ಲೂ ಬಾಗಿಯಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು. ಆದರೆ ಈ ಚಿತ್ರ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ.

ಹಾಲಿವುಡ್ ನಲ್ಲಿ ಕಿಚ್ಚ ಸುದೀಪ್ ನಟಿಸುವ ಸಿನಿಮಾ ಯಾವುದು.?

English summary
According to Grapevine, Kannada Actor Kiccha Sudeep's two films to release together?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada