For Quick Alerts
  ALLOW NOTIFICATIONS  
  For Daily Alerts

  ಹೊಂಬಾಳೆ - ಸುಧಾ ಕೊಂಗರ ಚಿತ್ರಕ್ಕೆ ಹೀರೊ ಸೂರ್ಯ ಅಲ್ಲ? ಚಾಲ್ತಿಗೆ ಬಂತು ಮತ್ತೊಬ್ಬ ನಟನ ಹೆಸರು!

  |

  'ಸುರರೈ ಪೋಟ್ರು' ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ನಿರ್ದೆಶಕಿ ಸುಧಾ ಕೊಂಗರ ಕಾಂಬಿನೇಷನ್‌ನಲ್ಲಿ ಹೊಂಬಾಳೆ ಸಂಸ್ಥೆ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿತ್ತು. ಆದರೆ ಚಿತ್ರದ ಹೀರೊ ಯಾರು ಎನ್ನುವುದು ಇನ್ನು ಕನ್ಫರ್ಮ್ ಆಗಿಲ್ಲ. ಆದರೆ ಇತ್ತೀಚೆಗೆ ತಮಿಳು ನಟ ಮಾಡಿದ ಅದೊಂದು ಪೋಸ್ಟ್ ಸಾಕಷ್ಟು ಚರ್ಚೆ ಹುಟ್ಟಾಕ್ಕಿತ್ತು. ಹೊಂಬಾಳೆ ಸಂಸ್ಥೆ ಸಾಲು ಸಾಲು ಸಿನಿಮಾಗಳನ್ನು ನಿರ್ಮಿಸ್ತಿದ್ದು, 'ಧೂಮಂ' ಅನ್ನುವ ಮಾಲಿವುಡ್ ಸಿನಿಮಾ ಕೂಡ ಇಂದು (ಅಕ್ಟೋಬರ್ 9) ಸೆಟ್ಟೇರಿದೆ.

  ಒಂದ್ಕಡೆ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿದ್ದು ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದೇ ಶುಕ್ರವಾರದಿಂದ ಪರಭಾಷೆಗಳಲ್ಲಿ ಸಿನಿಮಾ ಸದ್ದು ಮಾಡಲಿದೆ. ಪ್ರಭಾಸ್ ನಟನೆಯ 'ಸಲಾರ್' ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಿಸ್ತಿದೆ. 'ರಾಘವೇಂದ್ರ ಸ್ಟೋರ್ಸ್' ರಿಲೀಸ್‌ಗೆ ರೆಡಿಯಾಗಿದೆ. 'ಟೈಸನ್' ಎನ್ನುವ ಮಲಯಾಳಂ ಸಿನಿಮಾ ಚಿತ್ರೀಕರಣ ನಡೀತಿದೆ. ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಸೆಟ್ಟೇರಿದೆ. 'ರಿಚರ್ಡ್ ಆಂಟನಿ' ಶೂಟಿಂಗ್ ಶುರುವಾಗಬೇಕಿದೆ. ಇದೆಲ್ಲದರ ನಡುವೆ ಸುಧಾ ಕೊಂಗರ ನಿರ್ದೇಶನದ ಚಿತ್ರಕ್ಕೆ ಹೀರೊ ಯಾರು ಎನ್ನು ಚರ್ಚೆ ಶುರುವಾಗಿದೆ.

  ಪ್ಯಾನ್‌ ಇಂಡಿಯಾ ಚಿತ್ರವಾಯ್ತು 'ಕಾಂತಾರ': ಐದು ಭಾಷೆಗಳಲ್ಲೂ ರಿಷಬ್‌ ಅಬ್ಬರಪ್ಯಾನ್‌ ಇಂಡಿಯಾ ಚಿತ್ರವಾಯ್ತು 'ಕಾಂತಾರ': ಐದು ಭಾಷೆಗಳಲ್ಲೂ ರಿಷಬ್‌ ಅಬ್ಬರ

  ಇತ್ತೀಚೆಗೆ 'ಕಾಂತಾರ' ಸಿನಿಮಾ ನೋಡಿ ತಮಿಳು ನಟ ಸಿಂಬು ಮೆಚ್ಚಿಕೊಂಡಿದ್ದರು. ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಿ ಹೊಂಬಾಳೆ ಸಂಸ್ಥೆಗೆ ಶುಭ ಹಾರೈಸಿದ್ದರು. ಹಾಗಾಗಿ ಹೊಂಬಾಳೆ ಹಾಗೂ ಸುಧಾ ಕೊಂಗರ ಚಿತ್ರಕ್ಕೆ ಹೀರೊ ಆಗಿ ಸಿಂಬು ಹೆಸರು ಚಾಲ್ತಿಗೆ ಬಂದಿದೆ. ಕಾಲಿವುಡ್‌ನಲ್ಲಿ ವಿಭಿನ್ನ ಸಿನಿಮಾಗಳಿಂದ ಪ್ರೇಕ್ಷಕರ ಮನಗೆದ್ದಿರುವ ನಟ ಸಿಂಲಂಬರಸನ್. ಈ ವರ್ಷ ಸಿಂಬು ನಟನೆಯ 'ಮಹಾ' ಹಾಗೂ 'ವೇಂದು ತನಿದಾತ್ತು ಕಾಡು' ಸಿನಿಮಾಗಳು ರಿಲೀಸ್ ಆಗಿ ಸದ್ದು ಮಾಡಿತ್ತು. ಇನ್ನು ಕನ್ನಡದ 'ಮಫ್ತಿ' ಸಿನಿಮಾ ತಮಿಳು ರೀಮೆಕ್‌ನಲ್ಲೂ ಸಿಂಬು ನಟಿಸ್ತಿದ್ದಾರೆ. ಇದೀಗ ಸುಧಾ ಕೊಂಗರ ನಿರ್ದೇಶನದಲ್ಲಿ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

  Kollywood Actor Silambarasan to collaborate with Sudha Kongara

  ಹೊಂಬಾಳೆ ಸಂಸ್ಥೆ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸ್ತಿದೆ. ಶೀಘ್ರದಲ್ಲೇ ಬಾಲಿವುಡ್‌ಗೂ ಎಂಟ್ರಿ ಕೊಡುವ ಸುಳಿವು ಸಿಕ್ತಿದೆ. ಕನ್ನಡ, ತೆಲುಗು, ಮಲಯಾಳಂ ಸಿನಿಮಾಗಳನ್ನು ಈಗಾಗಲೇ ಶುರು ಮಾಡಿದ್ದು, ಸುಧಾ ಕೊಂಗರ ಸಿನಿಮಾ ಮೂಲಕ ಕಾಲಿವುಡ್‌ಗೆ ಅಡಿ ಇಡುತ್ತಿದೆ. ಸಿಂಬು ಈ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಮಾತುಗಳು ಈಗ ಕೇಳಿಬರ್ತಿದೆ. ಬಣ್ಣದ ಲೋಕದಲ್ಲಿ ಏನು ಬೇಕಾದರೂ ಆಗಬಹುದು. ಅಧಿಕೃತವಾಗಿ ಘೋಷಣೆಯಾಗುವವರೆಗೂ ಕಾದು ನೋಡಬೇಕಿದೆ.

  English summary
  Kollywood Actor Silambarasan to collaborate with Sudha Kongara. Know More.
  Sunday, October 9, 2022, 15:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X