For Quick Alerts
  ALLOW NOTIFICATIONS  
  For Daily Alerts

  ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!

  By Bharath Kumar
  |

  ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬದಂದು 'ಕುರುಕ್ಷೇತ್ರ' ಸಿನಿಮಾ ಸೆಟ್ಟೇರಲಿದೆ. ಹೀಗಾಗಿ, ಕಲಾವಿದರ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರು 'ಕುರುಕ್ಷೇತ್ರ'ಕ್ಕೆ ಅಂತಿಮವಾಗಿದ್ದಾರೆ.

  ಆದ್ರೆ, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದಾಗಿದ್ದ ದ್ರೌಪದಿ ಯಾರು ಎಂಬ ಬಹುದೊಡ್ಡ ಪ್ರಶ್ನೆ ಎಲ್ಲರನ್ನ ಕಾಡುತ್ತಿತ್ತು. ಈ ಪಟ್ಟಿಯಲ್ಲಿ ದಕ್ಷಿಣ ಭಾರತದ ದೊಡ್ಡ ದೊಡ್ಡ ನಟಿಯರು ಹೆಸರು ಕೇಳಿ ಬಂತು. ಇವರಲ್ಲಿ ಯಾರೊಬ್ಬರು ಖಚಿತವಾಗಿಲ್ಲ. ಆದ್ರೀಗ, ಯಾರು ನಿರೀಕ್ಷೆ ಮಾಡದ ನಟಿಯೊಬ್ಬರನ್ನ 'ದ್ರೌಪದಿ' ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ.

  ಈಗಾಗಲೇ ಈ ನಟಿಯ ಜೊತೆ ಚರ್ಚಿಸಿದ್ದು, ಅಧಿಕೃತ ಘೋಷಣೆ ಮಾಡುವುದು ಬಾಕಿ ಎನ್ನಲಾಗುತ್ತಿದೆ. ಹಾಗಿದ್ರೆ, ಯಾರು ನಿರೀಕ್ಷೆ ಮಾಡದ ಆ ನಟಿ ಯಾರು? ಮುಂದೆ ಓದಿ.....

  'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರು

  'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರು

  ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ'ಕ್ಕೆ ಕೊನೆಗೂ ದ್ರೌಪದಿ ಸಿಕ್ಕಿದ್ದಾರೆ ಎನ್ನಲಾಗಿದೆ. ಅನುಷ್ಕಾ ಶೆಟ್ಟಿ, ನಯನತಾರ, ಹೀಗೆ ದಕ್ಷಿಣದ ಕೆಲ ಸ್ಟಾರ್ ನಟಿಯರ ಹೆಸರಿನ ನಡುವೆ ಈಗ ಮತ್ತೋರ್ವ ಬಹುಭಾಷಾ ನಟಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಯಾರದು? ಮುಂದೆ ನೋಡಿ

  'ಕುರುಕ್ಷೇತ್ರ'ದ ದ್ರೌಪದಿ ಪಾತ್ರಕ್ಕಾಗಿ ಈ ನಟಿಗೆ ಆಫರ್ ನೀಡಲಾಗಿದ್ಯಂತೆ!

  ದ್ರೌಪದಿ ಇವರೇ ನೋಡಿ

  ದ್ರೌಪದಿ ಇವರೇ ನೋಡಿ

  ಒಂದು ಕಾಲದಲ್ಲಿ ದಕ್ಷಿಣ ಚಿತ್ರ ಜಗತ್ತನ್ನ ಆಳಿದ ನಟಿ ಸ್ನೇಹ ಈಗ 'ಕುರುಕ್ಷೇತ್ರ'ದಲ್ಲಿ ದ್ರೌಪದಿ ಆಗಲಿದ್ದಾರೆ ಎನ್ನಲಾಗಿದೆ. ಆದ್ರೆ, ಅಧಿಕೃತವಾಗಿ ಘೋಷಣೆ ಆಗಿಲ್ಲ.

  ದರ್ಶನ್ 'ಕುರುಕ್ಷೇತ್ರ'ಕ್ಕೆ ಬಲಗಾಲಿಟ್ಟು ಬಂದ ಮೊದಲ ನಟಿ!

  ಕನ್ನಡಕ್ಕೆ ಸ್ನೇಹ ಕಮ್ ಬ್ಯಾಕ್

  ಕನ್ನಡಕ್ಕೆ ಸ್ನೇಹ ಕಮ್ ಬ್ಯಾಕ್

  ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಸ್ನೇಹ ಕನ್ನಡದಲ್ಲೂ ಅಭಿನಯಿಸಿದ್ದಾರೆ. ರವಿಚಂದ್ರನ್ ಅವರ ಜೊತೆ 'ರವಿಶಾಸ್ತ್ರಿ' ಮತ್ತು ಪ್ರಕಾಶ್ ರೈ ಅಭಿನಯದ 'ಒಗ್ಗರಣೆ' ಚಿತ್ರದಲ್ಲಿ ಸ್ನೇಹ ಕಾಣಿಸಿಕೊಂಡಿದ್ದರು.

  'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ದ್ರೌಪದಿ ಅಲ್ಲ.! ಮತ್ತೇನು.?

  'ಕುರುಕ್ಷೇತ್ರ'ದಲ್ಲಿ ಹರಿಪ್ರಿಯಾ, ರೆಜಿನಾ?

  'ಕುರುಕ್ಷೇತ್ರ'ದಲ್ಲಿ ಹರಿಪ್ರಿಯಾ, ರೆಜಿನಾ?

  ಇದಕ್ಕೂ ಮುಂಚೆ 'ಕುರುಕ್ಷೇತ್ರ' ಚಿತ್ರಕ್ಕೆ ಹರಿಪ್ರಿಯಾ ಹಾಗೂ ರೆಜಿನಾ ಆಯ್ಕೆ ಆಗಿದ್ದಾರಂತೆ. ನರ್ತಿಕಿ ಪಾತ್ರದಲ್ಲಿ ಹರಿಪ್ರಿಯಾ ಹಾಗೂ ದುರ್ಯೋಧನನ ಪತ್ನಿ 'ಭಾನುಮತಿ' ಪಾತ್ರದಲ್ಲಿ ರೆಜಿನಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

  'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ರೆಜಿನಾ ನಿರ್ವಹಿಸುವ ಪಾತ್ರವೇನು.?

  'ಕುರುಕ್ಷೇತ್ರ'ದಲ್ಲಿ ಯಾರೆಲ್ಲಾ ಇರಲಿದ್ದಾರೆ?

  'ಕುರುಕ್ಷೇತ್ರ'ದಲ್ಲಿ ಯಾರೆಲ್ಲಾ ಇರಲಿದ್ದಾರೆ?

  ದರ್ಶನ್ ದುರ್ಯೋಧನ, ರವಿಚಂದ್ರನ್ ಕೃಷ್ಣ, ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯ, ಶ್ರೀನಾಥ್ ಧೃತರಾಷ್ಟ್ರರಾಗಿ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕಾ. ಆದ್ರೆ, ಉಳಿದಂತೆ ಹರಿಪ್ರಿಯಾ, ರೆಜಿನಾ, ಹಾಗೂ ಸ್ನೇಹ ಅವರ ಪಾತ್ರದ ಬಗ್ಗೆ ಮುನಿರತ್ನ ಅವರ ಹುಟ್ಟುಹಬ್ಬದಂದು ಉತ್ತರ ಸಿಗಲಿದೆ.

  50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್

  English summary
  According to Source Kurukshetra Gets its Draupadi In Sneha. Sneha Returns to Sandalwood after 3 Years For The Face Off With Darshan who Paly Duryodhan in his 50th Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X