»   » ಗ್ಯಾಂಗ್ ರೇಪ್ ಗೆ ರೆಡಿ ಎಂದ ಹೀರೋಯಿನ್ ಲಕ್ಷ್ಮಿ ರೈ

ಗ್ಯಾಂಗ್ ರೇಪ್ ಗೆ ರೆಡಿ ಎಂದ ಹೀರೋಯಿನ್ ಲಕ್ಷ್ಮಿ ರೈ

Posted By: ಉದಯರವಿ
Subscribe to Filmibeat Kannada

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿ ಇಡೀ ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿದೆ. ಸಾವು ಬದುಕಿನ ನಡುವೆ ಹೋರಾಡುತ್ತಲೇ ಮೃತಪಟ್ಟ ಯುವತಿಯ ಪರವಾಗಿ ಕೋಟ್ಯಾಂತರ ಮಂದಿ ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ಆಕೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸುತ್ತಿದ್ದಾರೆ.

ಈ ಮುಂಚೆ ಅದೆಷ್ಟೋ ಅತ್ಯಾಚಾರ ಘಟನೆಗಳು ನಡೆದಿವೆ. ಆದರೆ ಈ ಮಟ್ಟದಲ್ಲಿ ಯಾರೂ ಸ್ಪಂದಿಸಿರಲಿಲ್ಲ. ಬಾಲಿವುಡ್ ತಾರೆಗಳು ಈ ಘಟನೆಯನ್ನು ಖಂಡಿಸಿ ರಸ್ತೆಗಳಿದು ಪ್ರತಿಭಟಿಸಿದರು. ಈ ಘಟನೆಯ ಪ್ರಯೋಜನ ಪಡೆಯಲು ಕೆಲವು ನಿರ್ಮಾಪಕ, ನಿರ್ದೇಶಕರು ಮುಂದಾಗಿದ್ದಾರೆ.


ಕೆಲವು ನಿರ್ದೇಶಕರು ಈ ಘಟನೆಯನ್ನು ಹಿಡಿದು ಕಥೆ ಹೆಣೆಯಲು ಸಿದ್ಧವಾಗಿದ್ದಾರೆ. ಅವರು ಅತ್ತ ಪೆನ್ನು ಪೇಪರ್ ಹಿಡಿದು ಕೂತಿದ್ದರೆ ಇತ್ತ ತಾರೆಗಳಾದ ಲಕ್ಷ್ಮಿ ರೈ ಹಾಗೂ ಪಿಯಾ ಬಾಜ್ ಪೇಯಿ ಬಾಯ್ಬಿಟ್ಟಿದ್ದಾರೆ. ದೆಹಲಿ ಗ್ಯಾಂಗ್ ರೇಪ್ ಘಟನೆ ಮೇಲೆ ಯಾರಾದರೂ ಸಿನಿಮಾ ತೆಗೆದರೆ ನಾವು ಅದರಲ್ಲಿ ಅಭಿನಯಿಸಲು ಸಿದ್ಧ ಎಂದಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಯುವತಿ ಪಾತ್ರವನ್ನು ಪೋಷಿಸುತ್ತೇವೆ ಎಂದು ಲಕ್ಷ್ಮಿ ರೈ ಹಾಗೂ ಪಿಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಅತ್ಯಾಚಾರ ಘಟನೆ ಮೇಲೆ ಚಿತ್ರ ತೆಗೆಯುವುದರಿಂದ ಸಮಾಜ ಜಾಗೃತವಾಗುತ್ತದೆ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಈ ಸಿನಿಮಾ ಎಚ್ಚರಿಕೆ ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. (ಏಜೆನ್ಸೀಸ್)

English summary
Actresses Lakshmi Rai and Piaa Bajpai have come out in support of the girl(Delhi gang rape victim) and said if at all her life is made as a film, they are ready to act as the rape victim.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada