Don't Miss!
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೀರೆಯುಟ್ಟು ಬಂದ ಮಲೈಕಾ ಅರೋರಾ: ಪೌಡರ್ ಆಂಟಿ ಎಂದಿದ್ದೇಕೆ ?
ಬಾಲಿವುಡ್ ನಟಿ ಮಲೈಕಾ ಅರೋರಾ ಸದಾ ತಮ್ಮ ಫ್ಯಾಷನ್‌ನಿಂದ ಸದ್ದು ಮಾಡುತ್ತಿರುತ್ತಾರೆ. ಎಲ್ಲಾದರೂ ಪಾರ್ಟಿ ಇದೆ ಎಂದರೆ, ಅಥವಾ ಬಾಲಿವುಡ್ ಮಂದಿ ಒಂದಾಗುತ್ತಾರೆ ಎಂದರೆ ಅಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಾರೆ.
ಇನ್ನು ಯಾವಾಗ ಕ್ಯಾಮೆರಾ ಕಣ್ಣಿಗೆ ಬಿದ್ದರೂ ಕೂಡ ನಟಿ ಮಲೈಕಾ ಅರೋರಾ ತಮ್ಮ ವಿಭಿನ್ನ ಅವತಾರದ ಮೂಲಕ, ಹಾಟ್ ಲುಕ್ ಮೂಲಕ ಗಮನ ಸೆಳೆಯುತ್ತಾರೆ. ಜೊತೆಗೆ ಕೆಲವೊಂದು ವಿಚಾರಗಳಿಗೆ ಆಗಾಗ ಟ್ರೋಲ್ ಆಗುತ್ತಲೂ ಇರುತ್ತಾರೆ.
ಅರ್ಜುನ್
ಕಪೂರ್
ಬರ್ತ್‌ಡೇ:
ಮಲೈಕಾ
ಅರೋರಾ
ಜೊತೆ
'ಪ್ಯಾರಿಸ್'
ಪ್ರಣಯ!
ಮಲೈಕಾ ಅರೋರಾ ಅವ್ರಿಗೆ ಟ್ರೋಲ್ ಆಗುವುದು ಹೊಸದೇನಲ್ಲ. ಮಲೈಕಾ ಏನೇ ಮಾಡಿದರೂ ಕೂಡ ಒಂದಲ್ಲ, ಒಂದು ವಿಚಾರಕ್ಕೆ ಟ್ರೋಲ್‌ಗೆ ತುತ್ತಾಗುತ್ತಾರೆ. ಆದರೆ ಈ ಬಾರಿ ಸೀರೆಯುಟ್ಟು ಕಾಣಿಸಿಕೊಂಡರು ಕೂಡ ಈ ಬಾಲಿವುಡ್ ಬೆಡಗಿ ಕಟ್ರೋಲ್ ಆಗಿದ್ದಾರೆ.

ಬಿಳಿ ಸೀರೆಯಲ್ಲಿ ಮಿಂಚಿದ ನಟಿ!
ನಟಿ ಮಲೈಕಾ ಅರೋರಾ ಇತ್ತೀಚೆಗೆ ಮುಂಬೈನಲ್ಲಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದಾರೆ. ಈ ಪಾರ್ಟಿಯಲ್ಲಿ ಮಲೈಕಾ ಬಿಳಿ ಬಣ್ಣದ ಸೀರೆಯುಟ್ಟು ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ನೆಟ್ ಸೀರೆಯಲ್ಲಿ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಮಲೈಕಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಯಾವುದೋ ವಿಚಿತ್ರ ಬಟ್ಟೆ ಎಂದರೆ ಓಕೆ, ಆದರೆ ಸೀರೆಯುಟ್ಟರು ಮಲೈಕಾ ಯಾಕೆ ಟ್ರೋಲ್ ಆದರೂ ಎಂದುಕೊಂಡಿರಾ. ಈ ಬಾರಿ ಮಲೈಕಾ ತನ್ನ ಉಡುಪಿನಿಂದ ಅಲ್ಲ, ತಮ್ಮ ಮೇಕಪ್‌ನಿಂದ ಟ್ರೋಲ್ ಆಗಿದ್ದಾರೆ.
ಸಲ್ಮಾನ್
ಖಾನ್
ಮನೆಯಲ್ಲಿ
ಶುರುವಾಗಿತ್ತು
ಅರ್ಜುನ್-ಮಲೈಕಾ
ಲವ್!
ಇಲ್ಲಿದೆ
ಇಂಟ್ರೆಸ್ಟಿಂಗ್
ಸ್ಟೋರಿ
ಪೌಡರ್ ಕಡಿಮೆ ಹಾಕಿ ಎಂದ ನೆಟ್ಟಿಗರು!
ಬಿಳಿ ಬಣ್ಣದ ಚೆಂದದ ಸೀರೆಯ ಜೊತೆಗೆ ದಪ್ಪನೆಯ ಬಿಳಿ ಬಣ್ಣದ ಕಿವಿಯೋಲೆಗಳನ್ನು ಕೂಡ ಧರಿಸಿದ್ದರು. ಸಿಂಪರ್ ಆಗಿ ಕಂಳಿಸಿದ್ದಾರೆ. ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ನಟಿ ಟ್ರೋಲ್ ಆಗಲು ಕಾರಣ ಅವರು ಮಾಡಿಕೊಂಡಿದ್ದ ಮೇಕಪ್. ಕ್ಯಾಮೆರಾ ಕಣ್ಣಿಗೆ ಮಲೈಕಾ ಮೇಕಪ್ ಕೊಂಚ ಹೆಚ್ಚಾಗಿಯೇ ಕಾಣಿಸಿದೆ. ಹಾಗಾಗಿ ಮಲೈಕಾಗೆ ಕಡಿಮೆ ಪೌಡರ್ ಹಾಕಿಕೊಳ್ಳಿ ಆಂಟಿ ಎಂದು ಟ್ರೋಲ್ ಮಾಡಲಾಗುತ್ತಿದೆ. ಫೌಂಡೇಷನ್ ಕೊಂಚ ಜಾಸ್ತಿಯಾಗಿದೆ ಮೇಕಪ್ ಸರಿಯಾಗಿ ಮಾಡಿಕೊಳ್ಳಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.

43ರ ವಯಸ್ಸಿನಲ್ಲೂ ಮಲೈಕಾ ಸೂಪರ್!
ನಟಿ ಮಲೈಕಾ ಅವರನ್ನು ನೋಡಿದರೆ ಹದಿಹರೆಯದ ಬೆಡಗಿಯಂತೆ ಕಂಗೊಳಿಸುತ್ತಾರೆ. ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಗ್ಲಾಮರಸ್ ಲುಕ್ ಮೆಂಟೈನ್ ಮಾಡಿರುವ ನಟಿ ಈಕೆ. ಹಾಗಾಗಿ ಮಲೈಕಾಗೆ 43 ವರ್ಷ ವಯಸ್ಸು ಆಗಿದ್ದರೂ ಕೂಡ, ಹದಿಹರೆಯದ ಹುಡುಗಿಯಂತೆ ಕಾಣುತ್ತಾರೆ. ಹರೆಯದ ವಯಸ್ಸಿನ ಮಕ್ಕಳಿಗೆ ತಾಯಿ ಕೂಡ ಮಲೈಕಾ. ಆದರೆ ಯುವತಿಯರೇ ನಾಚುವಂತೆ ಸದಾ ಕಂಗೊಳಿಸುತ್ತಾರೆ ಮಲೈಕಾ. ಹಾಗಾಗಿ ಈಕೆಯ ಫಿಟ್ನೆಸ್‌ಗೂ ಕೂಡ ಸಾಕಷ್ಟು ಅಭಿಮಾನಿಗಳಿದ್ದಾರೆ. ಆದರೆ ಆಗಾಗ ಒಮ್ಮೆ ಈ ರೀತಿ ಟ್ರೋಲ್ ಆಗಿಬಿಡುತ್ತಾರೆ.

ಅರ್ಜುನ್ ಕಪೂರ್ ಜೊತೆ ಮದುವೆ ಯಾವಾಗ?
ಅರ್ಜುನ್ ಕಪೂರ್ ವಿಚಾರಕ್ಕೆ ನಟಿ ಮಲೈಕಾ ಸದಾ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಇವರಿಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಾಗಿದ್ದರೂ ಕೂಡ, ಈ ಜೋಡಿ ಜೊತೆಯಲ್ಲಿಯೇ ಬದುಕುತ್ತಿದೆ. ಮಲೈಕಾ ಅರೋರಾ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟ ಬಳಿಕ ಅರ್ಜುನ್ ಕಪೂರ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ವಿಚಾರಕ್ಕೂ ಕೂಡ ಮಲೈಕಾ ಟ್ರೋಲ್ ಆಗುತ್ತಿರುತ್ತಾರೆ. ಇನ್ನೂ ಈ ಜೋಡಿಯ ಮದುವೆ ಯಾವಾಗ ಎನ್ನುವ ಬಗ್ಗೆಯೂ ಸದಾ ಪ್ರಶ್ನೆಗಳು ಎದುರಾಗುತ್ತಿರುತ್ತೆ.