For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ವಿಶ್ವಸುಂದರಿ ಮಾನುಷಿ ಚಿಲ್ಲರ್ ಡೇಟಿಂಗ್!

  |

  2017 ರಲ್ಲಿ ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡ ಭಾರತದ ಸುಂದರಿ ಮಾನುಷಿ ಚಿಲ್ಲರ್. ವಿಶ್ವ ಸುಂದರಿ, ಭುವನ ಸುಂದರಿಯಾದವರು ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಒಳ್ಳೆಯ ಬೇಡಿಕೆ ಪಡೆಯುತ್ತಾರೆ ಆದರೆ ಮಾನುಷಿ ಚಿಲ್ಲರ್‌ಗೆ ಅದ್ಯಾಕೊ ಅದೃಷ್ಟ ಇಲ್ಲ.

  ಹಾಗೆಂದು ಮಾನುಷಿ ಚಿಲ್ಲರ್ ಸಿನಿಮಾಗಳಲ್ಲಿ ನಟಿಸುತ್ತಲೇ ಇಲ್ಲ ಎಂದೇನೂ ಇಲ್ಲ. ಅವರ ಮೊದಲ ಸಿನಿಮಾವೇ ಅಕ್ಷಯ್ ಕುಮಾರ್‌ ಜೊತೆ ತೆರೆ ಹಂಚಿಕೊಂಡಿದ್ದಾರೆ. ಹಾಗಿದ್ದರೂ ಸಹ ಯಾಕೋ ಅದೃಷ್ಟ ಇವರ ಕೈಹಿಡಿದಿಲ್ಲ.

  ಸಿನಿಮಾಗಳಿಂದ ಅಷ್ಟೇನೂ ಸುದ್ದಿಯಲ್ಲಿಲ್ಲದ ಮಾನುಷಿ ಚಿಲ್ಲರ್, ಈಗ ಸುದ್ದಿಗೆ ಬಂದಿರುವುದು ತಮ್ಮ ಲವ್ ಲೈಫ್‌ ಮೂಲಕ. ಬಾಲಿವುಡ್‌ನ ಇತರ ಯುವನಟಿಯರಂತೆ ಮಾನುಷಿ ಚಿಲ್ಲರ್ ಸಹ ಡೇಟಿಂಗ್ ನಡೆಸುತ್ತಿದ್ದಾರೆ. ವಿಶೇಷವೆಂದರೆ ಬೆಂಗಳೂರಿನ ಖ್ಯಾತ ಯುವ ಉದ್ಯಮಿಯೊಟ್ಟಿಗೆ ಪ್ರೇಮದಲ್ಲಿ ಸಿಲುಕಿದ್ದಾರೆ ಈ ಚೆಲುವೆ.

  ಜಿರೋಧ ಸಂಸ್ಥೆಯ ಸಹ ಸಂಸ್ಥಾಪಕ

  ಜಿರೋಧ ಸಂಸ್ಥೆಯ ಸಹ ಸಂಸ್ಥಾಪಕ

  'ಜಿರೋಧ' ಸಂಸ್ಥೆಯ ಮೂಲಕ ಷೇರು ಬಂಡವಾಳ ಮಾರುಕಟ್ಟೆಯನ್ನೇ ಬದಲಾಯಿಸಿದ ಬೆಂಗಳೂರಿನ ಉದ್ಯಮಿಗಳಾದ ಕಾಮತ್ ಸಹೋದರರಲ್ಲಿ ಒಬ್ಬರೊಟ್ಟಿಗೆ ಮಾನುಷಿ ಚಿಲ್ಲರ್ ಡೇಟಿಂಗ್‌ನಲ್ಲಿದ್ದಾರೆ. ನಿತಿನ್ ಹಾಗೂ ನಿಖಿಲ್ ಕಾಮತ್ ಇಬ್ಬರು 'ಜಿರೋಧಾ' ಸಂಸ್ಥೆಯ ಸಂಸ್ಥಾಪಕರಾಗಿದ್ದು, ಇವರಲ್ಲಿ ನಿಖಿಲ್ ಕಾಮತ್‌ ಜೊತೆಗೆ ಮಾನುಷಿ ಚಿಲ್ಲರ್ ಹೆಸರು ತುಸು ಜೋರಾಗಿಯೇ ಕೇಳಿ ಬರುತ್ತಿದೆ.

  ಮದುವೆಯಾಗಿ ವಿಚ್ಛೇದನ ಆಗಿದೆ ನಿಖಿಲ್‌ಗೆ

  ಮದುವೆಯಾಗಿ ವಿಚ್ಛೇದನ ಆಗಿದೆ ನಿಖಿಲ್‌ಗೆ

  ನಿಖಿಲ್ ಕಾಮತ್‌ಗೆ ಈಗಾಗಲೇ ಒಮ್ಮೆ ಮದುವೆಯಾಗಿ ವಿಚ್ಛೇದನವೂ ಆಗಿದೆ. ಅಮಂಡಾ ಪುರುವಂಕರ ಎಂಬುವರನ್ನು ನಿಖಿಲ್ ಕಾಮತ್‌, 2019 ರಲ್ಲಿ ಇಟಲಿಯ ಫ್ಲಾರೆನ್ಸ್‌ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಆದರೆ ಇವರ ದಾಂಪತ್ಯ ಕೇವಲ ಎರಡೇ ವರ್ಷ ನಡೆದು 2021 ರಲ್ಲಿ ವಿಚ್ಛೇದನ ಪಡೆದುಕೊಂಡರು. ಆ ಬಳಿಕ ನಿಖಿಲ್ ಕಾಮತ್‌ ಒಂಟಿಯಾಗಿದ್ದರು.

  ಜೊತೆಯಲ್ಲಿ ವಾಸಿಸುತ್ತಿದ್ದಾರಂತೆ ಈ ಜೋಡಿ

  ಜೊತೆಯಲ್ಲಿ ವಾಸಿಸುತ್ತಿದ್ದಾರಂತೆ ಈ ಜೋಡಿ

  ಮಾನುಷಿ ಚಿಲ್ಲರ್ ಹಾಗೂ ನಿಖಿಲ್ ಕಾಮತ್‌ ತಮ್ಮ ಸಾಮಾನ್ಯ ಗೆಳೆಯರ ಪಾರ್ಟಿಯಲ್ಲಿ ಭೇಟಿಯಾಗಿ ಆ ನಂತರ ಆತ್ಮೀಯರಾಗಿದ್ದಾರೆ ಎನ್ನಲಾಗುತ್ತಿದ್ದು. ಇಬ್ಬರೂ ಸಹ ವಿದೇಶಗಳಲ್ಲಿ ಒಟ್ಟಿಗೆ ಓಡಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೆ ಇಬ್ಬರು ಹೃಕೇಶಕ್ಕೆ ಒಟ್ಟಿಗೆ ಹೋಗಿದ್ದರಂತೆ. ಇಬ್ಬರೂ ಒಟ್ಟಿಗೆ ಲಿವಿನ್‌ ರಿಲೇಶನ್‌ನಲ್ಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆಯಂತೆ. ಆದರೆ ಮಾನುಷಿ ಚಿಲ್ಲರ್‌ ಅವರ ವೃತ್ತಿಯ ದೃಷ್ಟಿಯಿಂದ ಸಂಬಂಧದ ವಿಷಯವನ್ನು ತುಸು ಗುಟ್ಟಾಗಿ ಇಟ್ಟಿದ್ದಾರಂತೆ.

  ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ

  ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ

  ಮಾನುಷಿ ಚಿಲ್ಲರ್, 2017 ರಲ್ಲಿ ವಿಶ್ವಸುಂದರಿಯಾಗಿ ಆಯ್ಕೆ ಆಗಿದ್ದರು. ಆ ಬಳಿಕ 2021 ರಲ್ಲಿ ಅಕ್ಷಯ್ ಕುಮಾರ್ ಜೊತೆಗೆ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಪ್ಲಾಪ್ ಆಯಿತು. ಅದಾದ ಬಳಿಕ ಮಾನುಷಿಯ ಇನ್ನಾವ ಸಿನಿಮಾವೂ ಬಿಡುಗಡೆ ಆಗಿಲ್ಲ. ಇದೀಗ ಮಾನುಷಿ 'ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ', 'ತೆಹ್ರಾನ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ. ಮಾನುಷಿ ಚಿಲ್ಲರ್ ವೈದ್ಯರೂ ಸಹ ಆಗಿದ್ದು, ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಆದರೆ ವೈದ್ಯ ವೃತ್ತಿ ಪ್ರಾರಂಭಿಸಿಲ್ಲ.

  English summary
  Former Miss world Manushi Chhiller dating co founder of Zerodha Nikhil Kamath. Both are living together in Bengaluru only.
  Monday, November 21, 2022, 17:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X