For Quick Alerts
  ALLOW NOTIFICATIONS  
  For Daily Alerts

  ಪುನೀತ್ ಹೊಸ ಚಿತ್ರದಲ್ಲಿ ನಟಿಸಲು ಸೂಪರ್ ಸ್ಟಾರ್ ಅಸ್ತು

  |

  ಚಿತ್ರ ಬಿಡುಗಡೆಗೆ ಅಥವ ಮಹೂರ್ತಕ್ಕೆ ಮುನ್ನವೇ ಭಾರೀ ಸುದ್ದಿಯಾಗುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರದ ವಿಶೇಷತೆ. ಈ ಬಾರಿಯೂ ಹಾಗೇ, ಅವರ ಹೊಸ ಚಿತ್ರದ ಮಹೂರ್ತಕ್ಕೆ ಮುನ್ನವೇ ಬ್ರೇಕಿಂಗ್ ನ್ಯೂಸೊಂದು ಹೊರಬಿದ್ದಿದೆ.

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ದಶಕಗಳ ನಂತರ ಮತ್ತೊಂದು ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ. ಕಾರ್ಮಿಕರ ದಿನಾಚರಣೆಯ ದಿನವಾದ ಮೇ ಒಂದರಂದು ಸೆಟ್ಟೇರಲಿರುವ ಪುನೀತ್ ಅವರ ಹೊಸ ಪ್ರಾಜೆಕ್ಟ್ 'ನಿನ್ನಿಂದಲೇ' ಚಿತ್ರದಲ್ಲಿ ಮೋಹನ್ ಲಾಲ್ ನಟಿಸಲಿದ್ದಾರೆ.

  ಚಿತ್ರದ ಮೊದಲ ಹಂತದ ಶೂಟಿಂಗ್ ಮೇ 1ರಂದು ಆರಂಭವಾಗಲಿದ್ದು, ಐದು ದಿನಗಳ ಮೊದಲ ಹಂತದ ಚಿತ್ರೀಕರಣಕ್ಕಾಗಿ ಮೋಹನ್ ಲಾಲ್ ಬೆಂಗಳೂರಿಗೆ ಬರುವುದು ನಿಶ್ಚಯವಾಗಿದೆ.

  ಮೋಹನ್ ಲಾಲ್ ಚಿತ್ರೀಕರಣದಲ್ಲಿ ಭಾಗವಹಿಸುವುದನ್ನು ಇದುವರೆಗೆ ಚಿತ್ರತಂಡ ಖಚಿತ ಪಡಿಸದಿದ್ದರೂ, ಅವರು ಪುನೀತ್ ಹೊಸ ಚಿತ್ರದಲ್ಲಿ ನಟಿಸುವುದು ಖಚಿತ ಎಂದು ಚಿತ್ರಲೋಕ ಡಾಟ್ಕಾಂ ವರದಿ ಮಾಡಿದೆ.

  ಕರ್ನಾಟಕ ಮೂಲದ ತೆಲುಗು ನಿರ್ದೇಶಕ ಜಯಂತ್ ಸಿ ಪರಂಜಿ ಪುನೀತ್ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  "Hi friends my next project will be a Kannada movie along with Puneeth Rajkumar" ಎಂದು ಫೇಸ್ ಬುಕ್ಕಿನ ತನ್ನ ಟೈಮ್ ಲೈನಿನಲ್ಲಿ ಮೋಹನ್ ಲಾಲ್ ಅಪ್ಡೇಟ್ ಮಾಡಿದ್ದಾರೆ.

  ಈ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ 'ಲವ್' ಎನ್ನುವ ಚಿತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದರು. ಆ ಚಿತ್ರದಲ್ಲಿ ಆದಿತ್ಯ ನಾಯಕನಾಗಿ ನಟಿಸಿದ್ದರು.

  English summary
  Malayalam superstar Mohan Lal is making a return to Kannada films again, he is teaming up with Power Star Puneeth Rajkumar new movie 'Ninnindale'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X