Don't Miss!
- News
Breaking: ಒಡಿಶಾ ಆರೋಗ್ಯ ಸಚಿವರ ಮೇಲೆ ಗುಂಡು ಹಾರಿಸಿದ ಪೊಲೀಸ್, ಸ್ಥಿತಿ ಗಂಭೀರ
- Technology
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- Sports
ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ ಸಂಜು ಸ್ಯಾಮ್ಸನ್: ಕೆಸಿ ಕಾರಿಯಪ್ಪ ಕೂಡ ಸಾಥ್
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೂ ಎನ್‌ಟಿಆರ್ ಸಿನಿಮಾಕ್ಕೆ ಇಬ್ಬರು ಪರಭಾಷೆ ಸೂಪರ್‌ಸ್ಟಾರ್‌ಗಳು!
ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ಬಾಲಿವುಡ್ ಸ್ಟಾರ್ ನಟರು ತುದಿಗಾಲ ಮೇಲೆ ನಿಂತಿದ್ದಾರೆ. ಮೊದಲೆಲ್ಲ ದಕ್ಷಿಣ ಭಾರತ ಸಿನಿಮಾಗಳನ್ನು ಕ್ಷುಲ್ಲಕವಾಗಿ ಕಾಣುತ್ತಿದ್ದ ನಟ-ನಟಿಯರು ಈಗ ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ದಕ್ಷಿಣದ ಸಿನಿಮಾಗಳಿಗೆ ನೀಡುತ್ತಿದ್ದಾರೆ.
ಅದರಲ್ಲಿಯೂ ದಕ್ಷಿಣದ ಸೂಪರ್ ಸ್ಟಾರ್ ನಟರೊಟ್ಟಿಗೆ ಸಿನಿಮಾ ಎಂದುಬಿಟ್ಟರೆ ಮುಗಿಯಿತು, ಬಾಲಿವುಡ್‌ನಲ್ಲಿ ಸ್ಟಾರ್ ಹೀರೋಗಳಾಗಿದ್ದರೂ ಸಹ ವಿಲನ್ ಪಾತ್ರ ನಿರ್ವಹಿಸಲೂ ಸೈ ಎಂದು ಬಂದುಬಿಡುತ್ತಿದ್ದಾರೆ.
'RRR' ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಆಗಿದ್ದೇ ತಡ ಜೂ ಎನ್‌ಟಿಆರ್‌ಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಅವರ ಮುಂದಿನ ಸಿನಿಮಾವನ್ನು ಕೊರಟಾಲ ಶೀವ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಭಾರಿ ಸ್ಕೇಲ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಬಾಲಿವುಡ್ ಮಾತ್ರವೇ ಅಲ್ಲದೆ ಪರಭಾಷೆಗಳ ಚಿತ್ರರಂಗದಿಂದ ಸ್ಟಾರ್ ನಟರನ್ನು ಕರೆತರಲಾಗುತ್ತಿದೆ.

ಜೂ ಎನ್‌ಟಿಆರ್ 30ನೇ ಸಿನಿಮಾ ಭರ್ಜರಿ ತಯಾರಿ
ಜೂ ಎನ್‌ಟಿಆರ್ ರ 30ನೇ ಸಿನಿಮಾ ಇದಾಗಿರಲಿದ್ದು, ಸಿನಿಮಾವು ಆಕ್ಷನ್ ಕತೆಯನ್ನು ಒಳಗೊಂಡಿದೆ. 'RRR' ಸಿನಿಮಾ ಬಿಡುಗಡೆ ಆಗುವ ಮುನ್ನವೇ ಜೂ ಎನ್‌ಟಿಆರ್ ಈ ಸಿನಿಮಾವನ್ನು ಘೋಷಿಸಿದ್ದರು. 'RRR' ಬಿಡುಗಡೆ ಆಗಿ ತಾವು ಗ್ಲೋಬಲ್ ಸ್ಟಾರ್ ಆದ ಬಳಿಕ, ತಮ್ಮ ಮೂವತ್ತನೇ ಸಿನಿಮಾದ ಕತೆ, ನಿರ್ಮಾಣ ಇನ್ನಿತರೆ ವಿಷಯಗಳನ್ನು ಬದಲಾಯಿಸಿದ್ದಾರಂತೆ ಜೂ ಎನ್‌ಟಿಆರ್. ತಮ್ಮ ಸಿನಿಮಾಗಳಿಗೆ ಈಗ ಭಾರಿ ದೊಡ್ಡ ಪ್ರೇಕ್ಷಕ ವರ್ಗ ಇರುವ ಕಾರಣ ಅತ್ಯುತ್ತಮ ಸಿನಿಮಾವನ್ನೇ ನೀಡಬೇಕೆಂಬ ಒತ್ತಡ ಜೂ ಎನ್‌ಟಿಆರ್ ಮೇಲಿದೆ.

ಮಲಯಾಳಂ ಸ್ಟಾರ್ ನಟನೊಟ್ಟಿಗೆ ಜೂ ಎನ್‌ಟಿಆರ್
ಹಾಗಾಗಿ ತಮ್ಮ ಮೂವತ್ತನೇ ಸಿನಿಮಾಕ್ಕೆ ಅತ್ಯುತ್ತಮ ನಟ-ನಟಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜೂ ಎನ್‌ಟಿಆರ್ ನಟನೆಯ ಮೂವತ್ತನೇ ಸಿನಿಮಾದಲ್ಲಿ ಮಲಯಾಳಂನ ಸ್ಟಾರ್ ನಟ ಮೋಹನ್‌ಲಾಲ್ ನಟಿಸಲಿದ್ದಾರೆ. ಮೋಹನ್‌ಲಾಲ್ ಹಾಗೂ ಜೂ ಎನ್‌ಟಿಆರ್ ಈ ಹಿಂದೆಯೂ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ಸಹ 'ಜನತಾ ಗ್ಯಾರೇಜ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಮತ್ತೊಮ್ಮೆ ಈ ತಾರಾ ಜೋಡಿ ಒಟ್ಟಿಗೆ ನಟಿಸುತ್ತಿದೆ.

ಬಾಲಿವುಡ್‌ನ ಸ್ಟಾರ್ ನಟ ಸೈಫ್ ಅಲಿ ಖಾನ್
ಇನ್ನು ಇದೇ ಸಿನಿಮಾದಲ್ಲಿ ಬಾಲಿವುಡ್‌ನ ಸ್ಟಾರ್ ನಟ ಸೈಫ್ ಅಲಿ ಖಾನ್ ಸಹ ನಟಿಸಲಿದ್ದಾರೆ. ಸೈಫ್ ಅಲಿ ಖಾನ್ ಈಗಾಗಲೇ ಪ್ರಭಾಸ್ ಜೊತೆ 'ಆದಿಪುರುಷ್' ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಜೂ ಎನ್‌ಟಿಆರ್ ಜೊತೆಗೂ ತೆರೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಇನ್ನೂ ಖಾತ್ರಿಯಾಗಿಲ್ಲ. ಸೈಫ್ ಅಲಿ ಖಾನ್ ನಟಿಸಿದರೂ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಜೂ ಎನ್‌ಟಿಆರ್ ಜೊತೆಗೆ ಆಮಿರ್ ಖಾನ್!
ಜೂ ಎನ್‌ಟಿಆರ್ ರ 30ನೇ ಸಿನಿಮಾದ ಬಳಿಕ 31ನೇ ಸಿನಿಮಾವನ್ನು ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾ ಬಗ್ಗೆಯೂ ಭಾರಿ ನಿರೀಕ್ಷೆಗಳು ಈಗಲೇ ಗರಿಗೆದರಿವೆ. ಪ್ರಶಾಂತ್ ನೀಲ್- ಜೂ ಎನ್‌ಟಿಆರ್ ಸಿನಿಮಾದ ಪೋಸ್ಟರ್ ಒಂದನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಜೂ ಎನ್‌ಟಿಆರ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾದ ಬಳಿಕ ಜೂ ಎನ್‌ಟಿಆರ್ ಜೊತೆಗಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.