For Quick Alerts
  ALLOW NOTIFICATIONS  
  For Daily Alerts

  ಸಮುದ್ರ ತೀರದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ 'ಕೆಜಿಎಫ್' ಬೆಡಗಿ

  |

  ಕನ್ನಡದ ಹೆಮ್ಮೆಯ ಸಿನಿಮಾಗಳಲ್ಲಿ ಒಂದಾದ 'ಕೆಜಿಎಫ್'ನಲ್ಲಿ ನಟ ಯಶ್ ಜೊತೆ ಹಾಡಿ ಕುಣಿದಿದ್ದ ನಟಿ ಮೌನಿ ರಾಯ್ ಕೊನೆಗೂ ವಿವಾಹವಾಗಲು ನಿಶ್ಚಯಿಸಿದ್ದಾರೆ.

  ಮೌನಿ ರಾಯ್ ವಿವಾಹದ ಬಗ್ಗೆ ಈ ಮೊದಲು ಹಲವು ಗಾಳಿ ಸುದ್ದಿಗಳು ಹರಿದಾಡುತ್ತಲಿದ್ದವು. ಆದರೆ ಇದೀಗ ಸುದ್ದಿಯೊಂದು ಬಹುತೇಕ ಸ್ಪಷ್ಟಗೊಂಡಿದ್ದು ತಮ್ಮ ಬಹುಸಮಯದ ಬಾಯ್‌ಫ್ರೆಂಡ್‌ ಜೊತೆ ವಿವಾಹ ಬಂಧನಕ್ಕೆ ಒಳಗಾಗಲು ಮೌನಿ ರಾಯ್ ಸಕಲ ಸಜ್ಜಾಗಿದ್ದಾರೆ.

  ಈ ಮೊದಲು ಮೌನಿ ರಾಯ್ ಹಾಗೂ ಆಕೆಯ ಬಾಯ್‌ಫ್ರೆಂಡ್ ಸೂರಜ್ ನಂಬಿಯಾರ್ ವಿದೇಶದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಯೋಜನೆ ಬದಲಾಗಿದ್ದು, ಈ ಜೋಡಿಯು ಗೋವಾದಲ್ಲಿ ಕಡಲ ತಡಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ.

  ಮೌನಿ ರಾಯ್‌ ಅವರ ಬಾಯ್‌ಫ್ರೆಂಡ್ ಸೂರಜ್ ನಂಬಿಯಾರ್ ದುಬೈ ನಲ್ಲಿಯೇ ವಾಸವಿದ್ದು ಮೌನಿ ರಾಯ್, ಸೂರಜ್ ಅನ್ನು ಭೇಟಿಯಾಗಲು ಆಗಾಗ್ಗೆ ದುಬೈಗೆ ಹಾರುತ್ತಿದ್ದರು. ಕೆಲವು ತಿಂಗಳ ಹಿಂದೆಯಷ್ಟೆ ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಭೇಟಿಯಾಗಿ ಮದುವೆಗೆ ತಮ್ಮ ಸಮ್ಮತಿ ಸೂಚಿಸಿದ್ದರು.

  ಮೌನಿ ರಾಯ್ ಹಾಗೂ ಸೂರಜ್ ಜೋಡಿಯು ಜನವರಿ 27 ರಂದು ಗೋವಾದ ವಾಗೋಟರ್‌ ಬೀಚ್‌ ಬಳಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಮದುವೆ ಆಗಲಿದ್ದಾರೆ. ಪಂಚತಾರಾ ಹೋಟೆಲ್ ಈಗಾಗಲೇ ಬುಕ್ ಆಗಿದ್ದು, ಪಂಚತಾರಾ ಹೊಟೆಲ್ ಮಾತ್ರವೇ ಅಲ್ಲದೆ ಬೀಚ್ ಏರಿಯಾದಲ್ಲಿಯೂ ಮದುವೆ ಸಮಾರಂಭ ಕಳೆ ಕಟ್ಟಲಿದೆ.

  ಬೀಚ್‌ನಲ್ಲಿ ಮದುವೆ ಶಾಸ್ತ್ರಗಳ ಜೊತೆಗೆ ಹಲವು ಮನೊರಂಜನಾ ಕಾರ್ಯಕ್ರಮಗಳು ಸಹ ನಡೆಯಲಿವೆ. ಮದುವೆಗೆ ಆಗಮಿಸಲಿರುವ ಅತಿಥಿಗಳ ಪಟ್ಟಿಯೂ ಅಂತಿಮ ಆಗಿದೆ ಎನ್ನಲಾಗುತ್ತಿದ್ದು, ಹಲವು ಜನಪ್ರಿಯ ಟಿವಿ ಕಲಾವಿದರ ಜೊತೆಗೆ ಸಿನಿಮಾ ನಟ-ನಟಿಯರು ಸಹ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

  ಹಲವು ಧಾರಾವಾಹಿಗಳಲ್ಲಿ ಮೌನಿ ರಾಯ್ ನಟಿಸಿದ್ದು ಬಳಿಕ ಸಿನಿಮಾಗಳಲ್ಲಿಯೂ ಒಳ್ಳೆಯ ಹೆಸರು ಮಾಡಿದರು. ಹಲವು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿಯೂ ಮೌನಿ ರಾಯ್ ಕಾಣಿಸಿಕೊಂಡಿದ್ದಾರೆ. 'ಕೆಜಿಎಫ್' ಸಿನಿಮಾದಲ್ಲಿ 'ಗಲಿ ಗಲಿ' ಹಾಡಿನಲ್ಲಿ ಮೌನಿ ರಾಯ್ ನರ್ತಿಸಿದ್ದಾರೆ.

  English summary
  Actress Mouni Roy to marry her long time boy friend Suraj Nambiar in Goa on January 27. Wedding will be held in five star beach side hotel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X