For Quick Alerts
  ALLOW NOTIFICATIONS  
  For Daily Alerts

  75ನೇ ಚಿತ್ರಕ್ಕೆ ನಟಿ ನಯನತಾರಾ ದುಬಾರಿ ಸಂಭಾವನೆ!

  |

  ನಟಿ ನಯನತಾರ ಇತ್ತೀಚೇಗೆ ಹೆಚ್ಚು ಗಮನ ಸೆಳೆದಿದ್ದು, ತಮ್ಮ ಮದುವೆ ಸುದ್ದಿಯಿಂದಾಗಿ. ನಯನತಾರ ವಿಘ್ನೇಶ್ ಮದುವೆ ಹಿನ್ನೆಲೆ ಸಾಕಷ್ಟು ಸುದ್ದಿ ಮಾಡಿದ್ದರು. ಇವರ ಮದುವೆ ಫೋಟೋಗಳು ಕೂಡ ವೈರಲ್ ಆಗಿದ್ದು, ಇನ್ನು ಕೆಲವೇ ದಿನದಲ್ಲಿ ಇವರ ಮದುವೆ ವಿಡಿಯೋ ಒಟಿಟಿಯಲ್ಲಿ ಬರಲಿದೆ.

  ಇನ್ನು ಮದುವೆ ಬಳಿಕ ನಯನತಾರ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಜವಾನ್' ಸಿನಿಮಾ ಶೂಟಿಂಗ್‌ನಲ್ಲಿ ಕೂಡ ಭಾಗಿ ಆಗಿದ್ದಾರೆ ನಯನತಾರ. ಸದ್ಯ ತಮ್ಮ ಮುಂದಿನ ಸಿನಿಮಾದ ವಿಚಾರವಾಗಿ ಸುದ್ದಿ ಆಗಿದ್ದಾರೆ.

  ಮದುವೆ ಚಿತ್ರ ಹಂಚಿಕೊಂಡು ಇಕ್ಕಟ್ಟಿಗೆ ಸಿಲುಕಿದ ನಯನತಾರಾ-ವಿಘ್ನೇಶ್! 25 ಕೋಟಿ ನಷ್ಟ!ಮದುವೆ ಚಿತ್ರ ಹಂಚಿಕೊಂಡು ಇಕ್ಕಟ್ಟಿಗೆ ಸಿಲುಕಿದ ನಯನತಾರಾ-ವಿಘ್ನೇಶ್! 25 ಕೋಟಿ ನಷ್ಟ!

  ನಯನತಾರ ತಮ್ಮ ಕಾಲಘಟ್ಟದ ಹಲವು ನಟಿಯರನ್ನು ಹಿಂದಿಕ್ಕಿ ಹೊಸ ದಾಖಲೆ ಮಾಡಿದ್ದಾರೆ. ಅತಿ ಹೆಚ್ಚು ಸಿನಿಮಾಗಳನ್ನು ಮಾಡುವುದರ ಜೊತೆ, ಜೊತೆಗೆ ಅತಿ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುವ ನಟಿ ಎನಿಸಿಕೊಂಡಿದ್ದಾರೆ.

  ಥೈಲ್ಯಾಂಡ್‌ನಲ್ಲಿ ನಯನತಾರಾ, ವಿಘ್ನೇಶ್ ಶಿವನ್ ಹನಿಮೂನ್!ಥೈಲ್ಯಾಂಡ್‌ನಲ್ಲಿ ನಯನತಾರಾ, ವಿಘ್ನೇಶ್ ಶಿವನ್ ಹನಿಮೂನ್!

  ಹೆಚ್ಚಿತು ನಯನತಾರಾ ಸಂಭಾವನೆ!

  ಹೆಚ್ಚಿತು ನಯನತಾರಾ ಸಂಭಾವನೆ!

  ಸಿನಿಮಾರಂಗದಲ್ಲಿ ನಟ ಮತ್ತು ನಟಿಯರ ಸಂಭಾವನೆ ಹಂತ ಹಂತಕ್ಕೂ ಹೆಚ್ಚಾಗುತ್ತಿರುತ್ತದೆ. ಅದರಲ್ಲೂ ನಾಯಕ ನಟರರಿಗೆ ಒಂದು ಸಿನಿಮಾದ ನಂತರ ಮತ್ತೊಂದು ಸಿನಿಮಾಗೆ ಸಂಭಾವನೆಯಲ್ಲಿ ಹೆಚ್ಚಳ ಆಗುತ್ತಲೇ ಇರುತ್ತದೆ. ಹಿಟ್ ಸಿನಿಮಾ ಬಂದರೆ ನಾಯಕರ ಸಂಭಾನೆ ದುಪ್ಪಟ್ಟು ಆಗಿ ಬಿಡುತ್ತದೆ. ಆದರೆ ನಾಯಕ ನಟಿಯರ ವಿಚಾರದಲ್ಲಿ ಇದು ಕೊಂಚ ಕಡಿಮೆಯೇ. ಹಾಗಾಗಿ ನಟಿಯರು ಹೆಚ್ಚಿನ ಸಂಭಾವನೆ ಪಡೆದುಕೊಳ್ಳುತ್ತಾರೆ ಅಂದಾಗ ಹೆಚ್ಚಿನ ಮಟ್ಟದಲ್ಲಿ ಸುದ್ದಿ ವೈರಲ್ ಆಗುತ್ತದೆ. ನಟಿ ನಯನತಾರಾ ಮತ್ತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡು ಸುದ್ದಿಯಾಗಿದ್ದಾರೆ.

  10 ಕೋಟಿ ಸಂಭಾವನೆ!

  10 ಕೋಟಿ ಸಂಭಾವನೆ!

  ಸೌತ್ ನಟಿಯರ ಪೈಕಿ ಹೆಚ್ಚೆಂದರೆ, ಪ್ರಸ್ತುತ 5 ಕೋಟಿಯ ತನಕ ಸಂಭಾವನೆಯನ್ನು ಪಡೆಯುತ್ತಾರೆ. ಈ ರೇಸ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಇದ್ದಾರೆ. ಆದರೆ ಎಲ್ಲರನ್ನೂ ಹಿಂದಿಕ್ಕಿ ನಟಿ ನಯನತಾರಾ ನಂಬರ್1 ಪಟ್ಟಕ್ಕೇರಿದ್ದಾರೆ. ಸದ್ಯ ನಯನತಾರಾ ಸಂಭಾವನೆ 10 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಈ ಹಿಂದೆ 7 ರಿಂದ 8 ಕೋಟಿ ರೂ. ಸಂಬಾವನೆಯನ್ನು ನಯನತಾರ ಪಡೆದುಕೊಳ್ಳುತ್ತಿದ್ದರು. ತಮ್ಮ ಮುಂದಿನ ಚಿತ್ರಕ್ಕೆ ನಯನತಾರಾ ಹತ್ತು ಕೋಟಿಯ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ನಯನತಾರ 75ನೇ ಸಿನಿಮಾ!

  ನಯನತಾರ 75ನೇ ಸಿನಿಮಾ!

  ಮಲಯಾಳಂನ 'ಮನಸಿನಕ್ಕರೆ' ಸಿನಿಮಾದಿಂದ ನಯನತಾರಾ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಅಲ್ಲಿಂದ ಇಲ್ಲಿ ತನಕ ನಯನತಾರಾ ಸಾಲು-ಸಾಲು ಸಿನಿಮಾಗಳನ್ನ ಮಾಡಿದ್ದಾರೆ. ಇದೀಗ ನಯನತಾರ 75ನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ಪ್ರಕಟವಾಗಿದೆ. ನಯನತಾರಾ ತಮ್ಮ ಕಾಲಘಟ್ಟದ ನಾಯಕ ನಟಿಯರ ಪೈಕಿ ಈ ಮಟ್ಟಿನ ಸಿನಿಮಾಗಳನ್ನು ಮಾಡುತ್ತಾ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಇರುವವರಲ್ಲಿ ಮೊದಲಿಗರು. ನಾಯಕ ನಟಿಯರು ಅಂತ ಬಂದಾಗ ಹಾಗೆ ಬಂದು ಹೀಗೆ ಹೋಗುವವರೇ ಹೆಚ್ಚು. ಕೆಲವರಂತೂ ಒಂದು ಸಿನಿಮಾ ಮಾಡಿ ಮಾಯವಾದರೆ, ಇನ್ನು ಕೆಲವರು ಎರಡು, ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡು ಮಾಯವಾಗುತ್ತಾರೆ. ಆದರೆ ನಯನತಾರ ತಮ್ಮ 75ನೇ ಸಿನಿಮಾ ಮೂಲಕ ಹೊಸ ದಾಖಲೆಯನ್ನೇ ಬರೆದಿದ್ದಾರೆ.

  ಲೇಡಿ ಸೂಪರ್ ಸ್ಟಾರ್!

  ಲೇಡಿ ಸೂಪರ್ ಸ್ಟಾರ್!

  ನಟಿ ನಯನತಾರಾ 2003ರಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದರು. ಮಲಯಾಳಂ ಸಿನಿಮಾದಿಂದ ಸಿನಿಮಾರಂಗಕ್ಕೆ ಬಂದರು. ಆದರೆ ನಯನತಾರಾಗೆ ಬ್ರೇಕ್ ಸಿಕ್ಕಿದ್ದು ಮಾತ್ರ ತಮಿಳು ಸಿನಿಮಾರಂಗದಲ್ಲಿ. ಬಳಿಕ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಾ ನಯನತಾರಾ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. 2023 ಬಂದರೆ ನಯನತಾರ ಸಿನಿಮಾ ರಂಗಕ್ಕೆ ಬಂದು ಎರಡು ದಶಕ ಆಗುತ್ತೆ. ಇಲ್ಲಿಯತನಕ ಕಾಲಘಟ್ಟಕ್ಕೆ ಸರಿಯಾಗಿ ಪಾತ್ರಗಳನ್ನು ಮಾಡುತ್ತಾ ನಯನತಾರಾ ಇನ್ನೂ ಕೂಡ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಲೇಡಿ ಸೂಪರ್‌ ಸ್ಟಾರ್ ಅಂತಲೇ ನಯನತಾರಾ ಹೆಸರುವಾಸಿ.

  Recommended Video

  ನಿರೂಪ್ ಬಂಡಾರಿ ನೀತ ಅಶೋಕ್ ಪ್ರಕಾರ ವಿಕ್ರಾಂತ್ ರೋಣ ಹಾಗು ಫ್ಯಾಂಟಮ್‌ಗೆ ಸಂಭಂದಾನೇ ಇಲ್ಲ | Filmibeat Kannada
  English summary
  Nayanthara Hike Her Remuneration To 10 Crore For Her 75th Film, Know More Details

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X