»   » ಸುದೀಪ್‌ 'ಬಚ್ಚನ್‌' ಚಿತ್ರದಿಂದ ನಟಿ ನಯನತಾರಾ ಔಟ್

ಸುದೀಪ್‌ 'ಬಚ್ಚನ್‌' ಚಿತ್ರದಿಂದ ನಟಿ ನಯನತಾರಾ ಔಟ್

Posted By:
Subscribe to Filmibeat Kannada

ನಟಿ ನಯನತಾರಾ ಮತ್ತೊಮ್ಮೆ ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದೇನಾಯಿತೋ ಏನೋ ಎರಡು ಕೈ ಎತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಗಾಂಧಿನಗರದಲ್ಲಿ ಹೊಗೆಯಾಡುತ್ತಿದೆ.

ಇಷ್ಟಕ್ಕೂ ನಯನತಾರಾ ಕೈಕೊಟ್ಟಿರುವುದು ಕಿಚ್ಚ ಸುದೀಪ್‌ ಚಿತ್ರಕ್ಕೆ. ಶಶಾಂಕ್ ನಿರ್ದೇಶಿಸಲಿರುವ 'ಬಚ್ಚನ್' ಚಿತ್ರಕ್ಕೆ ನಯನತಾರಾ ನಾಯಕಿ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನೇನು ನಯನತಾರಾ ಸಹಿ ಹಾಕಬೇಕು ಎನ್ನುವ ಹೊತ್ತಿಗೆ ತಮಿಳಿನಲ್ಲಿ ಭರ್ಜರಿ ಆಫರ್ ಸಿಕ್ಕಿದೆ.

ತಮಿಳಿನಲ್ಲಿ ಅಜಿತ್ ಚಿತ್ರಕ್ಕೆ ಸಹಿ ಹಾಕಿ ಇತ್ತ ಸುದೀಪ್ ಚಿತ್ರಕ್ಕೆ ಪಂಗನಾಮ ಹಾಕಿದ್ದಾರೆ. ಕನ್ನಡಕ್ಕೆ ಹೋಲಿಸಿದರೆ ತಮಿಳಿನಲ್ಲಿ ಭಾರಿ ಸಂಭಾವನೆ ಸಿಕ್ಕಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಸುದೀಪ್ ಇನ್ಯಾವ ನಾಯಕಿಯನ್ನು ಕರೆತರುತ್ತಾರೋ ಕಾದುನೋಡೋಣ. (ಏಜೆನ್ಸೀಸ್)

English summary
If sources are to be belived actress Nayantara turns down the Kannada movie Sudeep starrer Bachchan to be directed by Shashank. Meanwhile she accepted Ajit Starrer Tamil movie.
Please Wait while comments are loading...