For Quick Alerts
  ALLOW NOTIFICATIONS  
  For Daily Alerts

  ಪತಿಯ ನೂರಾರು ಕೋಟಿ ಆಸ್ತಿಯಲ್ಲಿ ನಟಿ ಮೀನಾಗೆ ಬಿಡಿಗಾಸು ಇಲ್ವಂತೆ!

  |

  ಬಹುಭಾಷಾ ನಟಿ ಮೀನಾ ಇತ್ತೀಚೆಗೆ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಮೀನಾ ಪತಿ ವಿದ್ಯಾ ಸಾಗರ್ ಸಾವಿಗೀಡಾಗಿದ್ದಾರೆ. ಅವರ ಸಾವಿನ ಬಗ್ಗೆ, ಆರೋಗ್ಯದ ಬಗ್ಗೆ ಹಲವು ಸುದ್ದಿಗಳು ಹಬ್ಬಿದ್ದವು.

  ಪತಿಯ ಆರೋಗ್ಯದ ಬಗ್ಗೆ ಹಬ್ಬಿದ್ದ ಸುದ್ದಿಯ ಬಗ್ಗೆ ನಟಿ ಮೀನಾ ಮಾತನಾಡಿದ್ದರು. ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ, ನಾವು ನೋವಿನಲ್ಲಿದ್ದೇವೆ ಕೆಲವು ದಿನಗಳಾದರೂ ನಮ್ಮ ಪಾಡಿಗೆ ಬಿಟ್ಟು ಬಿಡಿ ಎಂದಿದ್ದರು. ಆದರೂ ಕೂಡ ಅವರ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ.

  ಹಿರಿಯ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ!ಹಿರಿಯ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ!

  ಈಗ ಮೀನಾ ಮತ್ತು ಅವರ ಪತಿಯ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿದೆ. ಅವರ ಆಸ್ತಿ ವಿಚಾರವಾಗಿ ದೊಡ್ಡ ಸುದ್ದಿಯೊಂದು ಸದ್ದು ಮಾಡುತ್ತಿದೆ. ಮೀನಾ ಪತಿ, ಆಕೆಯ ಹೆಸರಿಗೆ ಒಂದು ರೂಪಾಯಿ ಆಸ್ತಿಯನ್ನೂ ಕೂಡ ಬರೆದಿಲ್ಲ ಎನ್ನಲಾಗಿದೆ.

  ನಟಿ ಮೀನಾ ಪತಿ ಕೋಟ್ಯಾಧೀಶ್ವರ!

  ನಟಿ ಮೀನಾ ಪತಿ ಕೋಟ್ಯಾಧೀಶ್ವರ!

  ನಟಿ ಮೀನಾ ಪತಿ ವಿದ್ಯಾ ಸಾಗರ್ ಉದ್ಯಮಿ. ಹಾಗೆ ಆತನ ಹೆಸರಲ್ಲಿ ನೂರಾರು ಕೋಟಿ ಆಸ್ತಿ ಇದೆ ಎನ್ನಲಾಗಿದೆ. ಇತ್ತೀಚೆಗೆ ಅವರ ಆಸ್ತಿ ಮೌಲ್ಯದ ಬಗ್ಗೆಯೂ ಸುದ್ದಿ ಹಬ್ಬಿತ್ತು. ಮೀನಾ ಪತಿ ವಿದ್ಯಾಸಾಗರ್ ಬಳಿ 250 ಕೋಟಿ ಆಸ್ತಿ ಇದೆ ಎಂಬ ವದಂತಿ ತಮಿಳುರಂದಲ್ಲಿ ವೈರಲ್ ಆಗಿತ್ತು. ಇನ್ನು ಇಷ್ಟು ಆಸ್ತಿ ಇದ್ದರೂ ಕೂಡ ಈ ಜೋಡಿ ನೆಮ್ಮದಿಯಾಗಿ ಇರಲಿಲ್ಲವಂತೆ. ಆಸ್ತಿಗಾಗಿ ಜಗಳ ಮಾಡುತ್ತಿದ್ದರು ಎನ್ನುವ ಗಾಳಿ ಸುದ್ದಿಯೂ ವೈರಲ್ ಆಗಿತ್ತು.

  ಹಿರಿಯ ನಟಿ ಮೀನಾ ಮತ್ತೆ ಅಮ್ಮನಾಗುತ್ತಿದ್ದಾರಂತೆಹಿರಿಯ ನಟಿ ಮೀನಾ ಮತ್ತೆ ಅಮ್ಮನಾಗುತ್ತಿದ್ದಾರಂತೆ

  ಮೀನಾಗೆ ವಿಲ್ ಶಾಕ್!

  ಮೀನಾಗೆ ವಿಲ್ ಶಾಕ್!

  ವಿದ್ಯಾ ಸಾಗರ್ ಅವರಿಗೆ ನೂರಾರು ಕೋಟಿ ಆಸ್ತಿ ಇದೆ ಎನ್ನಲಗಿದೆ. ಆದರೆ ಅದರಲ್ಲಿ ಪತ್ನಿ ಮೀನಾಗೆ ಬಿಡಿಗಾಸಿನ ಹಕ್ಕು ಇಲ್ಲವಂತೆ. ಮೀನಾ ಪತಿ ತನಗಿರುವ ನೂರಾರು ಕೋಟಿ ಆಸ್ತಿಯಲ್ಲಿ ಒಂದು ರೂಪಾಯಿನೂ ಮೀನಾಗೆ ಕೊಡದೇ ಇರುವುದು ಶಾಕ್ ನೀಡಿದೆಯಂತೆ. ವಿಲ್ ಮಾಡಿಸಿರುವ ಮೀನಾ ಪತಿ ಮೀನಾ ಹೆಸರಲ್ಲಿ ಯಾವುದೇ ಆಸ್ತಿಯನ್ನು ಬರೆದಿಲ್ಲವಂತೆ. ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಮಗಳು ನೈನಿಕಾಗೆ ಪೂರ್ಣ ಆಸ್ತಿ!

  ಮಗಳು ನೈನಿಕಾಗೆ ಪೂರ್ಣ ಆಸ್ತಿ!

  ಮೀನಾ ಪತಿ ವಿದ್ಯಾ ಸಾಗರ್ ತಮ್ಮ ಆಸ್ತಿಯ ವಿಲ್ ಮಾಡಿಟ್ಟಿದ್ದಾರಂತೆ. ತಮ್ಮ ಮಗಳು ನೈನಿಕಾ ಹೆಸರಿಗೆ ಸಂಪೂರ್ಣ ಆಸ್ತಿಯನ್ನು ಬರೆದಿದ್ದಾರೆ ಎಂದು ವರದಿಯಾಗಿದೆ. ತಮ್ಮ ಇಚ್ಛೆಯಂತೆ ಮಗಳು ನೈನಿಕಾಗೆ ಪೂರ್ಣ ಆಸ್ತಿಯನ್ನು ಬರೆದಿದ್ದು, ತಮ್ಮ ಪಾಲಿನ ಆಸ್ತಿಯಲ್ಲಿ ಒಂದಿಷ್ಟನ್ನು ಪತ್ನಿ ಮೀನಾ ಹೆಸರಿಗೆ ಬರೆದಿಲ್ಲ ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ಅಷ್ಟು ಸುಲಭವಾಗಿ ಒಪ್ಪಲೂ ಸಾಧ್ಯವಿಲ್ಲ. ಇದು ಗಾಲೀ ಸುದ್ದಿ ರೂಪದಲ್ಲಿ ಹರಿದಾಡುತ್ತಿದೆ.

  ಅಮ್ಮನ ಜೊತೆಗೆ ಇರುವ ಮಗಳು!

  ಅಮ್ಮನ ಜೊತೆಗೆ ಇರುವ ಮಗಳು!

  ಮಗಳು ನೈನಿಕಾಗೆ ವಯಸ್ಸಿಗೆ ಬಂದಾಗ ಆಕೆಯ ಇಚ್ಛೆಯಂತೆ ಮಗಳ ಪತಿ ಉತ್ತರಾಧಿಕಾರಿ ಆಗಬಹುದು ಎನ್ನಲಾಗುತ್ತಿದೆ. ಹಾಗೊಂದು ವೇಳೆ ಮಗಳಿಗೆ ಆಸ್ತಿ ಕೊಟ್ಟಿದ್ದರೆ, ಅದರಲ್ಲಿ ತಪ್ಪೇನು ಇಲ್ಲ ಬಿಡಿ. ಆದರೆ ಇದು ಕೇವಲ ಗಾಳಿ ಸುದ್ದಿ, ಇದು ನಿಜವಾಗಿರಬೇಕೆಂದೇನು ಇಲ್ಲ. ಆದರೂ ಕೂಡ ಹೀಗೊಂದು ಸುದ್ದಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಟಿ ಮೀನ ಉತ್ತರಿಸುತ್ತಾರಾ ಎಂದು ನೋಡಬೇಕು.

  English summary
  New Gossip About Actress Meena, Vidya Sagar Did Not Given Any Assets To His Wife Actress Meena,
  Wednesday, July 13, 2022, 8:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X