Don't Miss!
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
64ನೇ ವಯಸ್ಸಿನಲ್ಲಿ ಬಹುಭಾಷಾ ನಟಿ ಜಯಸುಧಾ 3ನೇ ಮದುವೆ?
ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಒಂದ್ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಸಹಜ ನಟಿ ಈ ಪೋಷಕ ಪಾತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. 2017ರಲ್ಲಿ ಜಯಸುಧ 2ನೇ ಪತಿ ನಿತಿನ್ ಕಪೂರ್ ಕೊನೆಯುಸಿರೆಳೆದಿದ್ದರು. ಇದೀಗ ನಟಿ ಒಬ್ಬ ಉದ್ಯಮಿಯ ಕೈ ಹಿಡಿದಿದ್ದಾರೆ ಎನ್ನಲಾಗ್ತಿದೆ.
ಕೆಲ ದಿನಗಳಿಂದ ನಟಿ ಜಯಸುಧಾ 3ನೇ ಮದುವೆ ಆಗಿದ್ದಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಉದ್ಯಮಿ ಒಬ್ಬರ ಜೊತೆ ಮದುವೆ ಆಗಿದೆ ಎನ್ನಲಾಗ್ತಿದೆ. ಯಾವುದೇ ಸಿನಿಮಾ ಈವೆಂಟ್, ಸೆಲೆಬ್ರೆಟಿಗಳ ಮನೆ ಕಾರ್ಯಕ್ರಮ ಇದ್ದರು ಜಯಸುಧಾ ಜೊತೆ ಆತ ಕಾಣಿಸಿಕೊಳ್ಳುತ್ತಿದ್ದಾನೆ. ಇದನ್ನು ನೋಡಿ ಇಬ್ಬರು ಮದುವೆ ಆಗಿದ್ದಾರೆ ಎನ್ನಲಾಗ್ತಿದೆ. 64ನೇ ವಯಸ್ಸಿಲ್ಲಿ ಸಹಜ ನಟಿ 3ನೇ ಮದುವೆ ಆಗಿದ್ದಾರಾ? ಎಂದು ಕೆಲವರು ಕೇಳುತ್ತಿದ್ದಾರೆ. ಇತ್ತೀಚೆಗೆ ಹಾಸ್ಯ ನಟ ಆಲಿ ಮಗಳ ಮದುವೆಗೆ ಜಯಸುಧಾ ಹಾಗೂ ಆ ಉದ್ಯಮಿ ಒಟ್ಟಿಗೆ ಬಂದಿದ್ದರು. 'ವಾರೀಸು' ಸಿನಿಮಾ ಈವೆಂಟ್‌ಗೂ ಜೊತೆಯಾಗಿ ಹಾಜರಾಗಿದ್ದರು.

ಇದನ್ನೆಲ್ಲಾ ನೋಡಿ ಜೋಡಿ ಯಾರಿಗೂ ಗೊತ್ತಿಲ್ಲದೇ ಮದುವೆ ಆಗಿದ್ದಾರೆ ಎನ್ನಲಾಗ್ತಿದೆ. ಜಯಸುಧಾ ಮೊದಲಿಗೆ ಸಿನಿಮಾ ನಿರ್ಮಾಪಕ ವಡ್ಡೆ ರಮೇಶ್ ಎಂಬುವವರನ್ನು ವಿವಾಹವಾಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ದಂಪತಿ ದೂರಾಗಿದ್ದರು. ನಂತರ ಬಾಲಿವುಡ್ ನಟ ಜಿತೇಂದ್ರ ಕಪೂರ್ ಸೋದರ ಸಂಬಂಧಿ ನಿತಿನ್ ಕಪೂರ್ ಕೈ ಹಿಡಿದಿದ್ದರು. ಕಾರಣಾಂತರಗಳಿಂದ ನಿತಿನ್ ಸುಸೈಡ್ ಮಾಡಿಕೊಂಡಿದ್ದರು. ನಂತರ ಜಯಸುಧಾ ಮಕ್ಕಳ ಜೊತೆ ವಾಸವಾಗಿದ್ದಾರೆ.
ಕಳೆದ ವರ್ಷ ಅನಾರೋಗ್ಯದಿಂದ ಸಹಜ ನಟಿ ಜಯಸುಧಾ ಅಮೇರಿಕಾಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ಚಿಕಿತ್ಸೆ ಸಮಯದಲ್ಲಿ ಗುರುತು ಹಿಡಿಯದಂತಾಗಿದ್ದ ನಟಿ ಈಗ ಚೇತರಿಸಿಕೊಂಡಿದ್ದಾರೆ. 'ವಾರಿಸು' ಚಿತ್ರದಲ್ಲಿ ದಳಪತಿ ವಿಜಯ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. 'ನೀ ತಂದ ಕಾಣಿಕೆ' ಸಿನಿಮಾ ಮೂಲಕ ದಶಕಗಳ ಹಿಂದೆಯೇ ಜಯಸುಧಾ ಸ್ಯಾಂಡಲ್‌ವುಡ್‌ಗೆ ಬಂದಿದ್ದರು. 'ತಾಯಿಯ ಮಡಿಲು' ಹಾಗೂ 'ವಜ್ರಕಾಯ' ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ.