Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪೈಲ್ವಾನ್' ಕೃಷ್ಣ ಮುಂದಿನ ಸಿನಿಮಾಗೆ ನಿಖಿಲ್ ನಾಯಕ
Recommended Video
'ಪೈಲ್ವಾನ್' ಸಿನಿಮಾದ ಮೂಲಕ ನಿರ್ದೇಶಕ ಕೃಷ್ಣ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 'ಗಜ ಕೇಸರಿ', 'ಹೆಬ್ಬುಲಿ'ಯ ನಂತರ ಮತ್ತೆ ಕೃಷ್ಣ ವಿಜಯಯಾತ್ರೆ ಮುಂದುವರೆಸಿದ್ದಾರೆ.
ಒಂದು ಕಡೆ ಪೈರಸಿ ವಿರುದ್ಧ ಹೋರಾಟ ನಡೆಸುತ್ತಿದ್ದ ಕೃಷ್ಣ ಅದರ ಜೊತೆ ಜೊತೆಗೆ ತಮ್ಮ ಮುಂದಿನ ಸಿನಿಮಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾವಾಗಿದ್ದು, ದೊಡ್ಡ ಪ್ರೊಡಕ್ಷನ್ಸ್ ಕಂಪನಿ ಕೃಷ್ಣ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ.
ಬೆಂಕಿಯಂತೆ
ಬಂದ
ಅಭಿಷೇಕ್:
ಅಂಬಿ
ಪುತ್ರನ
ಲುಕ್
ಕಂಡ
ನಿಖಿಲ್
ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ರಿಗೆ ಆಕ್ಷನ್ ಕಟ್ ಹೇಳಿದ್ದ ಕೃಷ್ಣ ತಮ್ಮ ಮುಂದಿನ ಸಿನಿಮಾವನ್ನು ನಿಖಿಲ್ ಕುಮಾರ್ ಜೊತೆಗೆ ಮಾಡುವ ನಿರ್ಧಾರ ಮಾಡಿದ್ದಾರೆ. 'ಪೈಲ್ವಾನ್' ನಂತರ ಮತ್ತೊಂದು ದೊಡ್ಡ ಸಿನಿಮಾವನ್ನು ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.

ನಿಖಿಲ್ ನಾಲ್ಕನೇ ಸಿನಿಮಾಗೆ ಕೃಷ್ಣ ನಿರ್ದೇಶಕ
'ಜಾಗ್ವರ್', 'ಸೀತಾರಾಮ ಕಲ್ಯಾಣ' ಹಾಗು 'ಕುರುಕ್ಷೇತ್ರ' ಸಿನಿಮಾದ ನಂತರ ನಿಖಿಲ್ ಕುಮಾರ್ ತಮ್ಮ ನಾಲ್ಕನೇ ಸಿನಿಮಾದಲ್ಲಿ ತೊಡಗಿದ್ದಾರೆ. ಈ ಸಿನಿಮಾವನ್ನು ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಇದು ಕೃಷ್ಣ ಹಾಗೂ ನಿಖಿಲ್ ಇಬ್ಬರಿಗೂ ನಾಲ್ಕನೇ ಸಿನಿಮಾವಾಗಿದೆ. ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡುತ್ತಿದೆ.

Lyca ಪ್ರೊಡಕ್ಷನ್ ಹೌಸ್ ನಿರ್ಮಾಣ
Lyca ಪ್ರೊಡಕ್ಷನ್ ಹೌಸ್ ನಟ ನಿಖಿಲ್ ಕುಮಾರ್ ಗೆ ಒಂದು ಸಿನಿಮಾ ನಿರ್ಮಾಣ ಮಾಡುತ್ತಿದೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಇತ್ತು. ಈಗ ಈ ಸಿನಿಮಾ ಪ್ರಾರಂಭ ಆಗುತ್ತಿದ್ದು, ನಿರ್ಮಾಣ ಸಂಸ್ಥೆ ಜೊತೆಗೆ ಕೃಷ್ಣ ಕೈ ಜೋಡಿಸಿದ್ದಾರೆ. Lyca ಪ್ರೊಡಕ್ಷನ್ ಹೌಸ್ '2.0' ಚಿತ್ರ ಬಂಡವಾಳ ಹಾಕಿದ್ದು, 'ಇಂಡಿಯಾನ್ 2' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.
'ನಿಖಿಲ್
ಸೂಪರ್
ಆಗಿ
ಆಕ್ಟ್
ಮಾಡಿದ್ದಾನೆ'
ಅಂದ್ರು
ಸುಮಲತಾ

ವಿಶೇಷವಾಗಿರುತ್ತೆ ನಿಖಿಲ್ ಪಾತ್ರ
ಈ ಸಿನಿಮಾ ಬೇರೆಯದ್ದೆ ಜಾನರ್ ನಲ್ಲಿ ಇರಲಿದೆಯಂತೆ. ಹಾಗೆಯೇ ನಾಯಕ ನಟ ನಿಖಿಲ್ ಕುಮಾರ್ ಪಾತ್ರ ಕೂಡ ವಿಶೇಷವಾಗಿ ಇರಲಿದೆಯಂತೆ. ನಿಖಿಲ್ ತಮ್ಮ ಹಿಂದಿನ ಸಿನಿಮಾಗಳಲ್ಲಿ ಪಾತ್ರಕ್ಕೆ ಮಾಡಿದ ತಯಾರಿಗಳನ್ನು ನೋಡಿದ್ದ ನಿರ್ಮಾಣ ಸಂಸ್ಥೆ ಅವರಿಗಾಗಿ ಈ ಸಿನಿಮಾ ಮಾಡಲು ಮುಂದೆ ಬಂದಿದೆ. ಈ ಹೊಸ ಸಿನಿಮಾದ ಶೀರ್ಷಿಕೆ ಇನ್ನು ನಿರ್ಧಾರ ಆಗಿಲ್ಲ.

2020ಕ್ಕೆ ಶುರು ಆಗಬಹುದು
ನಿರ್ದೇಶಕ ಕೃಷ್ಣ ಹಾಗೂ Lyca ಪ್ರೊಡಕ್ಷನ್ ಹೌಸ್ ನಡುವೆ ಈ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಸಿನಿಮಾ ಮುಂದಿನ ವರ್ಷ 2020 ವೇಳೆಗೆ ಶುರು ಆಗಬಹುದು. Lyca ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಇದಾಗಿದೆ. ಈಗಾಗಲೇ ಅದ್ದೂರಿ ಸಿನಿಮಾಗಳ ನಿರ್ಮಾಣದಿಂದ ಗುರುತಿಸಿಕೊಂಡಿರುವ ಈ ಕಂಪನಿ ಈಗ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಸಿದ್ಧ ಮಾಡುತ್ತಿದೆ.